ಭಾರತದ ಹಿತಾಸಕ್ತಿಯನ್ನು ಮಾರಾಟ ಮಾಡಬೇಡಿ; ರಾಹುಲ್ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡಿ: ಪ್ರಧಾನಿ ಮೋದಿಗೆ ಸಿದ್ದರಾಮಯ್ಯ ಆಗ್ರಹ

ಭಾರತದ ಕೃಷಿ ವ್ಯವಸ್ಥೆಯ ಮೇಲೆ ನಾವು ಇನ್ನೊಂದು ದೇಶಕ್ಕೆ ದೀರ್ಘಾವಧಿಯ ಹಿಡಿತವನ್ನು ನೀಡುತ್ತಿದ್ದೇವೆಯೇ ಎಂಬುದರ ಬಗ್ಗೆ ಸಂಬಂಧಿಸಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
PM Narendra Modi with CM Siddaramaiah
ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ರೈತರ ಮೇಲೆ ಪರಿಣಾಮ ಬೀರುವ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಕುರಿತು ಎತ್ತಿರುವ ಕಳವಳಗಳಿಗೆ ಪ್ರಧಾನಿ ಮೋದಿ "ಸ್ಪಷ್ಟ ಮತ್ತು ಪ್ರಾಮಾಣಿಕ" ಪ್ರತಿಕ್ರಿಯೆ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಸಿಎಂ ಸಿದ್ದರಾಮಯ್ಯ, ಈ ಒಪ್ಪಂದವು ಅನಿಯಂತ್ರಿತ ಜಿಎಂ ಆಮದಿಗೆ ಅನುಮತಿ ನೀಡುತ್ತದೆ, ಸುರಕ್ಷತಾ ಕ್ರಮಗಳನ್ನು ದುರ್ಬಲಗೊಳಿಸುತ್ತದೆ. ರಕ್ಷಣೆಯಿಲ್ಲದೆ ಕ್ರಮೇಣ ಹೆಚ್ಚಿನ ಬೆಳೆಗಳನ್ನು ತೆರೆದರೆ, ಅದು ಕರ್ನಾಟಕ ಸೇರಿದಂತೆ ದೇಶಾದ್ಯಂತ ರೈತರಿಗೆ ನೇರವಾಗಿ ಹಾನಿ ಮಾಡುತ್ತದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿ ಅವರೇ, ಭಾರತದ ಹಿತಾಸಕ್ತಿಗಳನ್ನು ಮಾರಾಟ ಮಾಡಬೇಡಿ. ರಾಜಕೀಯ ಬಲವಂತಗಳಿಗಾಗಿ ನಮ್ಮ ರೈತರನ್ನು ಮಾರಾಟ ಮಾಡಬೇಡಿ. ವಿದೇಶಿ ಒತ್ತಡಕ್ಕೆ ಶರಣಾಗಬೇಡಿ. ನಮ್ಮ ರೈತರು ಚೌಕಾಸಿ ಮಾಡುವವರಲ್ಲ. ಅವರು ಈ ರಾಷ್ಟ್ರದ ಜೀವನಾಡಿ" ಎಂದು ಸಿದ್ದರಾಮಯ್ಯ ಹೇಳಿದರು.

"ಯುಎಸ್ ವ್ಯಾಪಾರ ಒಪ್ಪಂದದ ಹೆಸರಿನಲ್ಲಿ ಭಾರತದ ರೈತರಿಗೆ ದ್ರೋಹ ಬಗೆದಿರುವುದನ್ನು ನಾವು ನೋಡುತ್ತಿದ್ದೇವೆ." ಎಂದು ರಾಹುಲ್ ಗಾಂಧಿ ಅವರ ಟ್ವೀಟ್ ಅನ್ನು ಸಿಎಂ ಸಿದ್ದರಾಮಯ್ಯ ಉಲ್ಲೇಖಿಸಿದ್ದಾರೆ.

"ವ್ಯಾಪಾರೇತರ ಅಡೆತಡೆಗಳು" ಎಂದರೆ ಏನು ಎಂದು ತಿಳಿಯಲು ರಾಹುಲ್ ಪ್ರಯತ್ನಿಸಿದ್ದಾರೆ, GM ಸೋಯಾ ಎಣ್ಣೆಯನ್ನು ಆಮದು ಮಾಡಿಕೊಳ್ಳಲು ಅನುಮತಿಸಿದರೆ ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ದೇಶಾದ್ಯಂತ ಸೋಯಾ ಬೆಳೆವ ರೈತರ ಪರಿಸ್ಥಿತಿ ಏನಾಗಬಹುದು ಎಂದು ರಾಹುಲ್ ಗಾಂಧಿ ಆತಂಕ ವ್ಯಕ್ತ ಪಡಿಸಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.

ಈ ವ್ಯಾಪಾರ ಒಪ್ಪಂದ ಸಂಬಂಧ ರೈತರು ಸ್ಪಷ್ಟತೆ ಪಡೆಯಲು ಅರ್ಹರಾಗಿದ್ದಾರೆ. ಇದು ಇಂದಿನ ವಿಷಯವಲ್ಲ. ಭಾರತದ ಕೃಷಿ ವ್ಯವಸ್ಥೆಯ ಮೇಲೆ ನಾವು ಇನ್ನೊಂದು ದೇಶಕ್ಕೆ ದೀರ್ಘಾವಧಿಯ ಹಿಡಿತವನ್ನು ನೀಡುತ್ತಿದ್ದೇವೆಯೇ ಎಂಬುದರ ಬಗ್ಗೆ ಸಂಬಂಧಿಸಿದೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

PM Narendra Modi with CM Siddaramaiah
ಅಮೆರಿಕದೊಂದಿಗಿನ ವ್ಯಾಪಾರ ಒಪ್ಪಂದ ಶ್ಲಾಘಿಸಿದ ಪಿಯೂಷ್ ಗೋಯಲ್; ಭಾರತದ ಉಜ್ವಲ ಭವಿಷ್ಯಕ್ಕೆ ಇದು ಶುಭ ಸೂಚನೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com