

ಹಾವೇರಿ: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದಲ್ಲಿ ಏಕಾಏಕಿ ಜೋರಾಗಿ ಬೀಸಿದ ಸುಂಟರಗಾಳಿಗೆ ಬೃಹತ್ ಪೆಂಡಾಲ್ ಕುಸಿದು ಬಿದ್ದಿದ್ದು, ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಶನಿವಾರ ನಡೆದಿದೆ.
ಅಂಬೇಡ್ಕರ್ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕಾಗಿ ಈ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಸಚಿವ ಸತೀಶ್ ಜಾರಕಿಹೊಳಿ ಅವರು ಕಾರ್ಯಕ್ರಮ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ವೇಳೆ ಜೋರಾಗಿ ಬೀಸಿದ ಸುಂಟರಗಾಳಿಗೆ ಪೆಂಡಾಲ್ ಹಾರಿ ಹೋಗಿದೆ.
ಕಾರ್ಯಕ್ರಮದಲ್ಲಿ ನೂರಾರು ಜನ ಭಾಗವಹಿಸಿದ್ದರು. ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನ ಹೊರ ಬಂದಿದ್ದರಿಂದ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಕಾರ್ಯಕ್ರಮ ನಡೆಯುವಾಗಲೇ ಕುಸಿದಿದ್ದರೆ ಹಲವು ಮಂದಿಗೆ ಗಾಯವಾಗುವ ಸಾಧ್ಯತೆ ಇತ್ತು.
ಈ ಘಟನೆಯಿಂದ ಕ್ಷಣ ಕಾಲ ವಿಚಲಿತರಾದ ಸತೀಶ್ ಜಾರಕಿಹೊಳಿ ಅವರು, ಧೂಳು ಮಿಶ್ರಿತ ಸುಂಟರಗಾಳಿಗೆ ಪೆಂಡಾಲ್ ಕುಸಿದು ಬಿದ್ದಿದೆ. ಸುಂಟರಗಾಳಿಯಿಂದ ಏನೋ ಆಗಿಲ್ಲ ಎಂದು ಹೇಳಿ ಮುಂದಿನ ಕಾರ್ಯಕ್ರಮಕ್ಕೆ ತೆರಳಿದರು.
Advertisement