ಪ್ರೋ. ಬಿಕೆ. ರವಿ ಅಧಿಕಾರ ಸ್ವೀಕಾರ
ರಾಜ್ಯ
ಬೆಂಗಳೂರು ಉತ್ತರ ವಿವಿ: ನೂತನ ಕುಲಪತಿಯಾಗಿ ಪ್ರೋ. ಬಿ.ಕೆ ರವಿ ಅಧಿಕಾರ ಸ್ವೀಕಾರ
ಕೋಲಾರ ನಗರದ ಹೊರ ವಲಯದ ಟಮಕ ದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ನಾಲ್ಕನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಕೋಲಾರ: ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿಯಾಗಿ ಪ್ರೋ. ಬಿಕೆ. ರವಿ ಇಂದು ಅಧಿಕಾರ ವಹಿಸಿಕೊಂಡರು.
ಕೋಲಾರ ನಗರದ ಹೊರ ವಲಯದ ಟಮಕ ದಲ್ಲಿರುವ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕಚೇರಿಯಲ್ಲಿ ಪ್ರಭಾರ ಕುಲಪತಿಯಾಗಿದ್ದ ಡಾ.ಕುಮುದಾ ಅವರಿಂದ ನಾಲ್ಕನೇ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂವಹನದ ವಿಭಾಗದ ಮುಖ್ಯಸ್ಥರಾಗಿದ್ದ ಬಿಕೆ ರವಿ ಅವರು, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರಾಗಿ, ಕೊಪ್ಪಳ್ಳದ ಕುಲಪತಿ ಕಾರ್ಯನಿರ್ವಹಿಸಿದ್ದಾರೆ.
ಮಾಧ್ಯಮ ಕ್ಷೇತ್ರದಲ್ಲಿ ಅಪಾರ ಶಿಷ್ಯ ಬಳಗ ಹೊಂದಿದ್ದಾರೆ. ಬೆಂಗಳೂರು ಉತ್ತರ ಕುಲಪತಿ ಹುದ್ದೆಗಾಗಿ ಫ್ರೋಫಸರ್ ಗಳ ಮಧ್ಯೆ ಸಾಕಷ್ಟು ಪೈಪೋಟಿ ನಡೆದಿತ್ತು. 70ಕ್ಕೂ ಹೆಚ್ಚು ಪ್ರೊಫೆಸರ್ ಗಳು ಕುಲಪತಿ ಹುದ್ದೆಯ ರೇಸ್ ನಲ್ಲಿದ್ದರು. ಅಂತಿಮವಾಗಿ ಪ್ರೊಫೆಸರ್ ಬಿ. ಕೆ. ರವಿ ಅವರನ್ನು ನೂತನ ಕುಲಪತಿಯಾಗಿ ಸರ್ಕಾರ ನೇಮಕ ಮಾಡಿದೆ.