

ಶಿವಮೊಗ್ಗ: ಸ್ಯಾಂಡಲ್ವುಡ್ ಹಿರಿಯ ನಟ ಶಿವರಾಜ್ಕುಮಾರ್ ಅವರು ಬುಧವಾರ ಅವರು ಅಯ್ಯಪ್ಪಸ್ವಾಮಿ ಭಕ್ತರಾಗಿದ್ದು, ಹಲವು ಬಾರಿ ಅವರು ಮಾಲೆ ಧರಿಸಿದ್ದಾರೆ. ಈ ವರ್ಷವೂ ಅವರು ಮಾಲೆ ಧರಿಸಿ ಇರುಮುಡಿ ಹೊತ್ತು ಅಯ್ಯಪ್ಪಸ್ವಾಮಿ ದರ್ಶನ ಪಡೆದಿದ್ದಾರೆ. ಅವರ ಪತ್ನಿ ಗೀತಾ ಕೂಡ ಸಾಥ್ ನೀಡಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಶ್ರೀಕ್ಷೇತ್ರ ಬೆಜ್ಜವಳ್ಳಿ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರ ಸಂಕ್ರಾಂತಿ ಮತ್ತು ಶ್ರೀಗಳ ಪೀಠಾರೋಹಣದ ವರ್ಧಂತ್ತೋತ್ಸವ ನಡೆಯಿತು.
ನಟ ಶಿವರಾಜ್ಕುಮಾರ್ ದಂಪತಿ ಸಹ ಮಾಲೆ ಧರಿಸಿ ಇರುಮುಡಿ ಹೊತ್ತುಕೊಂಡು ದೇವರ ಸೇವೆ ಮಾಡಿದರು. ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಶ್ರೀ ಹರಿಹರಾತ್ಮಜ ಪೀಠ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶಿವಣ್ಣ, ನಮ್ಮ ಕುಟುಂಬ ಅಯ್ಯಪ್ಪಸ್ವಾಮಿ ಭಕ್ತರಾಗಿದ್ದು, ಅಯ್ಯಪ್ಪಸ್ವಾಮಿ ಮಾಲಾಧಾರಿಯಾಗಿ ಬೆಜ್ಜವಳ್ಳಿಗೆ ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದರು.
Advertisement