ನಮ್ಮ ಮೆಟ್ರೋ ಬ್ಲೂ ಲೈನ್ ಕಾಮಗಾರಿ ವೇಳೆ ಉರುಳಿಬಿದ್ದ ಕ್ರೇನ್: ತಪ್ಪಿದ ಭಾರೀ ಅನಾಹುತ

ತಾಂತ್ರಿಕ ಸಮಸ್ಯೆಯಿಂದ ಈ ಘಟನೆ ಸಂಭವಿಸಿದೆ. ಸ್ಟೀಲ್ ಗಿರ್ಡರ್ ನ್ನು ಎತ್ತುವಾಗ, ಕ್ರೇನ್‌ನ ಒಂದು ಭಾಗವು ಇದ್ದಕ್ಕಿದ್ದಂತೆ ಮೇಲಕ್ಕೆ ಹೋದ ಕಾರಣ ಅಪಘಾತ ಸಂಭವಿಸಿದೆ ಎಂದು ಉಪ ಮುಖ್ಯ ಎಂಜಿನಿಯರ್ ಹೇಳಿದರು.
Crane
ಉರುಳಿಬಿದ್ದ ಕ್ರೇನ್
Updated on

ಬೆಂಗಳೂರು ಮೆಟ್ರೋ ನಿರ್ಮಾಣ ಕಾರ್ಯದ ಸಮಯದಲ್ಲಿ ಹೊರ ವರ್ತುಲ ರಸ್ತೆಯನ್ನು ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿ ಸ್ಥಳದಲ್ಲಿ ಬೃಹತ್ ಕ್ರೇನ್ ಉರುಳಿ ಬಿದ್ದಿದ್ದರಿಂದ ಭಾರಿ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಅಧಿಕಾರಿಗಳ ಪ್ರಕಾರ, ಬ್ಲೂ ಲೈನ್‌ನ ನಿರ್ಮಾಣ ಕಾರ್ಯ ನಡೆಯುತ್ತಿರುವಾಗ ನಸುಕಿನ ಜಾವ 3.45 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದಾಗ ಕ್ರೇನ್ ನ್ನು ಭಾರವಾದ ಉಕ್ಕಿನ ಗಿರ್ಡರ್ ನ್ನು ಎತ್ತಲು ಬಳಸಲಾಗುತ್ತಿತ್ತು.

ಬಿಎಂಆರ್‌ಸಿಎಲ್ ಉಪ ಮುಖ್ಯ ಎಂಜಿನಿಯರ್ ಸದಾಶಿವ ಘಟನೆ ಬಗ್ಗೆ ವಿವರಿಸಿ, ತಾಂತ್ರಿಕ ಸಮಸ್ಯೆಯಿಂದಾಗಿ ಕ್ರೇನ್ ಇದ್ದಕ್ಕಿದ್ದಂತೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿತು. ಉಕ್ಕಿನ ಗಿರ್ಡರ್ ನ್ನು ಎತ್ತುತ್ತಿರುವಾಗ, ಕ್ರೇನ್‌ನ ಒಂದು ಭಾಗವು ಅನಿರೀಕ್ಷಿತವಾಗಿ ಮೇಲಕ್ಕೆ ಚಲಿಸಿತು. ಇದರಿಂದಾಗಿ ಅದು ಸಮತೋಲನ ಕಳೆದುಕೊಂಡು ಬಿದ್ದಿತು ಎಂದು ವಿವರಿಸಿದರು.

ತಾಂತ್ರಿಕ ಸಮಸ್ಯೆಯಿಂದ ಈ ಘಟನೆ ಸಂಭವಿಸಿದೆ. ಸ್ಟೀಲ್ ಗಿರ್ಡರ್ ನ್ನು ಎತ್ತುವಾಗ, ಕ್ರೇನ್‌ನ ಒಂದು ಭಾಗವು ಇದ್ದಕ್ಕಿದ್ದಂತೆ ಮೇಲಕ್ಕೆ ಹೋದ ಕಾರಣ ಅಪಘಾತ ಸಂಭವಿಸಿದೆ ಎಂದು ಉಪ ಮುಖ್ಯ ಎಂಜಿನಿಯರ್ ಹೇಳಿದರು.

ಕ್ರೇನ್ ಬಿದ್ದಿದ್ದು ಕೆಲಸ ಮುಗಿದ ನಂತರ ಅಲ್ಲ, ಎತ್ತುವ ಕಾರ್ಯಾಚರಣೆಯ ಸಮಯದಲ್ಲಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕ್ರೇನ್‌ನ ಘಟಕದ ಹಠಾತ್ ಚಲನೆಯು ಅಸಮತೋಲನಕ್ಕೆ ಕಾರಣವಾಯಿತು.

ಅದೃಷ್ಟವಶಾತ್, ಘಟನೆಯಲ್ಲಿ ಯಾವುದೇ ಕಾರ್ಮಿಕರು ಅಥವಾ ಸಾರ್ವಜನಿಕರು ಗಾಯಗೊಂಡಿಲ್ಲನಸುಕಿನ ಜಾವ ಆಗಿದ್ದರಿಂದ ಸುತ್ತಮುತ್ತ ಹೆಚ್ಚು ಸಂಚಾರ ಇರಲಿಲ್ಲ.

ಬ್ಲೂ ಲೈನ್ ಬೆಂಗಳೂರಿನ ಅತ್ಯಂತ ಜನನಿಬಿಡ ಸಂಚಾರ ಪ್ರದೇಶಗಳಲ್ಲಿ ಒಂದಾದ ಹೊರ ವರ್ತುಲ ರಸ್ತೆಗೆ ಸಂಪರ್ಕವನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಪ್ರಮುಖ ಮೆಟ್ರೋ ಕಾರಿಡಾರ್ ಆಗಿದೆ. ಘಟನೆಯ ನಂತರ, ಬಿಎಂಆರ್‌ಸಿಎಲ್ ಅಧಿಕಾರಿಗಳು ಸ್ಥಳವನ್ನು ಪರಿಶೀಲಿಸಿದರು, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ತಾಂತ್ರಿಕ ದೋಷ ಪತ್ತೆಹಚ್ಚಲು ಶ್ರಮಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com