ಸಿಎಂ ಭೇಟಿ ಮಾಡಿದ ದುನಿಯಾ ವಿಜಯ್; ‘ಲ್ಯಾಂಡ್​ಲಾರ್ಡ್’ ನೋಡೆ ನೋಡ್ತೀನಿ ಎಂದ ಸಿದ್ದರಾಮಯ್ಯ

"ಲ್ಯಾಂಡ್ ಲಾರ್ಡ್" ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಚಿತ್ರ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು ಎಂದು ತಿಳಿಸಿದ್ದಾರೆ.
Duniya Vijay meets CM Siddaramaiah and invites to watch his movie Landlord
ಸಿಎಂ ಭೇಟಿ ಮಾಡಿದ ದುನಿಯಾ ವಿಜಯ್
Updated on

ಬೆಂಗಳೂರು: "ಲ್ಯಾಂಡ್ ಲಾರ್ಡ್" ನಾಯಕ ದುನಿಯಾ ವಿಜಯ್ ಅವರು ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ತಮ್ಮ ಸಿನಿಮಾ ನೋಡುವುದಕ್ಕೆ ಆಹ್ವಾನ ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು, "ಲ್ಯಾಂಡ್ ಲಾರ್ಡ್" ಚಿತ್ರತಂಡದವರು ಇಂದು ನನ್ನನ್ನು ಭೇಟಿಯಾಗಿ, ತಮ್ಮ ಚಿತ್ರ ವೀಕ್ಷಣೆಗೆ ಆಗಮಿಸುವಂತೆ ಪ್ರೀತಿಯಿಂದ ಆಹ್ವಾನಿಸಿದರು ಎಂದು ತಿಳಿಸಿದ್ದಾರೆ.

ಈ ಚಿತ್ರದ ಮೂಲಕ ಸಮಾಜದಲ್ಲಿನ‌ ಜಾತಿ ಅಸಮಾನತೆ ಮತ್ತು ಸಾಂವಿಧಾನಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುವಂತಹ ಪ್ರಯತ್ನವನ್ನು ಚಿತ್ರತಂಡ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಕಳಕಳಿಯ ಕಥಾಹಂದರದ ಸಿನಿಮಾಗಳು ಮೂಡಿಬರುತ್ತಿರುವುದು ಅಪರೂಪ. ನಿಜಕ್ಕೂ ಇದೊಂದು ದಿಟ್ಟ ಪ್ರಯತ್ನ, ಇದಕ್ಕಾಗಿ ಇಡೀ ಚಿತ್ರತಂಡಕ್ಕೆ ಅಭಿನಂದಿಸುತ್ತೇನೆ.

Duniya Vijay meets CM Siddaramaiah and invites to watch his movie Landlord
Landlord Movie Review: ಸರ್ವರಿಗೂ ಸಮಾನತೆ, ಅಳಿದು ಉಳಿದವರ ವ್ಯಥೆಯಲ್ಲಿ ಹಳಿ ತಪ್ಪಿದ ಕತೆ- ಲ್ಯಾಂಡ್​ಲಾರ್ಡ್; ಅನ್ಯಾಯದ ವಿರುದ್ಧ 'ರಾಚಯ್ಯ' ಹೋರಾಟ!

ದುನಿಯಾ ವಿಜಯ್ ನಾಯಕ ನಟನಾಗಿ ಅಭಿನಯಿಸಿರುವ "ಲ್ಯಾಂಡ್ ಲಾರ್ಡ್" ಸಿನಿಮಾ ಶತದಿನೋತ್ಸವವನ್ನು ಪೂರೈಸಲಿ, ಇಂತಹ ಇನ್ನಷ್ಟು ಚಿತ್ರಗಳು ಮೂಡಿಬರಲು ಈ ಸಿನಿಮಾ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

ಅಲ್ಲದೆ ಎಲ್ಲರೂ ನೋಡಲೇಬೇಕಾದ ಚಿತ್ರವಿದು. ನಾನೂ ಖಂಡಿತವಾಗಿ ಚಿತ್ರಮಂದಿರಕ್ಕೆ ತೆರಳಿ ಈ ಸಿನಿಮಾ ವೀಕ್ಷಿಸುತ್ತೇನೆ, ನೀವೂ ನೋಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರಿಗಾಗಿ ಚಿತ್ರತಂಡ ವಿಶೇಷ ಶೋ ಹಮ್ಮಿಕೊಳ್ಳುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com