ಅರಣ್ಯಾಧಿಕಾರಿಗಳಿಂದ ಹುಲಿ ಶೋಧ ಕಾರ್ಯಾಚರಣೆ ಸ್ಥಗಿತ: ಮೈಸೂರು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಹೆಚ್ಚಿದ ಆತಂಕ!

ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡ ನಂತರ, ನಾವು ಹೊಲಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇವೆ. ಬೆಳಗಿನ ವಾಕಿಂಗ್ ಮತ್ತು ಸಂಜೆ ಹೊರಗೆ ಹೋಗುವುದನ್ನು ನಾವು ನಿಲ್ಲಿಸಿದ್ದೇವೆ
Representational image
ಸಾಂದರ್ಭಿಕ ಚಿತ್ರ
Updated on

ಮೈಸೂರು: ಮೈಸೂರು ವಿಮಾನ ನಿಲ್ದಾಣದ ಆವರಣದಲ್ಲಿ ಇತ್ತೀಚೆಗೆ ಕಾಣಿಸಿಕೊಂಡ ಹುಲಿಯನ್ನು ಪತ್ತೆಹಚ್ಚಲು ವಿಫಲವಾದ ನಂತರ ಅರಣ್ಯ ಇಲಾಖೆಯು ಕೂಂಬಿಂಗ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಅರಣ್ಯಾಧಿಕಾರಿಗಳು ಹುಡುಕಾಟವನ್ನು ನಿಲ್ಲಿಸಿರುವುದರಿಂದ, ವಿಮಾನ ನಿಲ್ದಾಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಭೀತಿ ಆವರಿಸಿದೆ. ಮರಸೆ, ಮಾಕನಹುಂಡಿ, ದಾದದಹಳ್ಳಿ, ಮಂಡಕಳ್ಳಿ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಂತಹ ಗ್ರಾಮದ ನಿವಾಸಿಗಳು ಭಯದಿಂದ ಮನೆಯೊಳಗೆ ಇರುವಂತಾಗಿದೆ, ವಿಶೇಷವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ನಂತರ ಮನೆಯಿಂದ ಹೊರಬರಲು ಗ್ರಾಮಸ್ಥರು ಭಯ ಪಡುತ್ತಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಗೆ ತಿಳಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಹುಲಿ ಕಾಣಿಸಿಕೊಂಡ ನಂತರ, ನಾವು ಹೊಲಗಳಿಗೆ ಹೋಗುವುದನ್ನು ನಿಲ್ಲಿಸಿದ್ದೇವೆ. ಬೆಳಗಿನ ವಾಕಿಂಗ್ ಮತ್ತು ಸಂಜೆ ಹೊರಗೆ ಹೋಗುವುದನ್ನು ನಾವು ನಿಲ್ಲಿಸಿದ್ದೇವೆ. ಇಡೀ ಗ್ರಾಮವು ಭಯದಿಂದ ಬದುಕುತ್ತಿದೆ ಎಂದು ವಿಮಾನ ನಿಲ್ದಾಣದ ಬಳಿಯ ಮರಸೆ ಗ್ರಾಮದ ನಿವಾಸಿ ಸರಸ್ವತಿ ಹೇಳಿದರು.

ಜನವರಿ ಮೊದಲ ವಾರದಲ್ಲಿ ವಿಮಾನ ನಿಲ್ದಾಣದ ಭದ್ರತೆಯ ಜವಾಬ್ದಾರಿಯನ್ನು ಹೊಂದಿರುವ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್‌ಐಎಸ್‌ಎಫ್) ಸಿಬ್ಬಂದಿ ಹುಲಿಯನ್ನು ಮೊದಲು ನೋಡಿದರು. ದಿನನಿತ್ಯದ ಗಸ್ತು ತಿರುಗಾಟದ ಸಮಯದಲ್ಲಿ ಹುಲಿ ಕಾಣಿಸಿಕೊಂಡಿತು. ವಾಹನದಲ್ಲಿ ಗಸ್ತು ತಿರುಗುತ್ತಿದ್ದಾಗ, ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಹುಲಿ ಓಡಾಡುವುದನ್ನು ಗಮನಿಸಿದರು, ಗಸ್ತು ವಾಹನದ ಕ್ಯಾಮೆರಾದಲ್ಲಿ ಹುಲಿ ಓಡಾಡುತ್ತಿರುವ ದೃಶ್ಯಗಳು ಸೆರೆಹಿಡಿಯಲ್ಪಟ್ಟವು.

Representational image
ಮೈಸೂರು: ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ನಿಗೂಢ ಸಾವು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com