ಸಿಗರೇಟ್ ಲೈಟರ್ ಗಾಗಿ ಜಗಳ ಕೊಲೆಯಲ್ಲಿ ಅಂತ್ಯ: ಎಸ್‌ಯುವಿಯಲ್ಲಿ ಎಳೆದೊಯ್ದು ವ್ಯಕ್ತಿ ಸಾವು; Video

ಮೃತರನ್ನು ವೀರಸಂದ್ರ ನಿವಾಸಿ ಪ್ರಶಾಂತ್ ಎಂ ಎಂದು ಗುರುತಿಸಲಾಗಿದೆ. ಆರೋಪಿ ಉಡುಪಿಯ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ವಿಜ್ಞಾನ್ ನಗರದ ನಿವಾಸಿ ರೋಷನ್ ಹೆಗ್ಡೆ (36ವ) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Deceased Prashanth and accused Rajeev Hegde
ಮೃತ ಪ್ರಶಾಂತ್ ಮತ್ತು ಆರೋಪಿ ರಾಜೀವ್ ಹೆಗ್ಡೆ
Updated on

ಬೆಂಗಳೂರು: ಮದ್ಯದ ಅಮಲಿನಲ್ಲಿ ಸಿಗರೇಟ್ ಲೈಟರ್‌ಗಾಗಿ ಇಬ್ಬರು ಸ್ನೇಹಿತರ ನಡುವೆ ನಡೆದ ಜಗಳ, 33 ವರ್ಷದ ವ್ಯಕ್ತಿಯ ಸಾವಿನಲ್ಲಿ ಅಂತ್ಯವಾದ ದುರಂತ ನಡೆದಿದೆ. ಆರಂಭದಲ್ಲಿ ಅಪಘಾತ ಎಂದು ತೋರುತ್ತಿದ್ದ ಘಟನೆ ನಂತರ ಕೊಲೆ ಎಂದು ತಿಳಿದುಬಂದಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಮ್ಮಸಂದ್ರ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

ಮೃತರನ್ನು ವೀರಸಂದ್ರ ನಿವಾಸಿ ಪ್ರಶಾಂತ್ ಎಂ ಎಂದು ಗುರುತಿಸಲಾಗಿದೆ. ಆರೋಪಿ ಉಡುಪಿಯ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ವಿಜ್ಞಾನ್ ನಗರದ ನಿವಾಸಿ ರೋಷನ್ ಹೆಗ್ಡೆ (36ವ) ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದ ಘಟನೆಯೇನು?

ಭಾನುವಾರ ರಾತ್ರಿ 9.30 ರ ಸುಮಾರಿಗೆ ಕಮ್ಮಸಂದ್ರದ ಆಟದ ಮೈದಾನದಲ್ಲಿ ಐದು ಸ್ನೇಹಿತರ ಗುಂಪು ಸೇರಿ ಮದ್ಯ ಸೇವಿಸುತ್ತಾ ಮೋಜು ಮಾಡುತ್ತಿದ್ದರು. ಈ ವೇಳೆ ಸಿಗರೇಟ್ ಲೈಟರ್‌ಗಾಗಿ ರೋಷನ್ ಮತ್ತು ಪ್ರಶಾಂತ್ ನಡುವೆ ಜಗಳ ನಡೆದಿದ್ದು, ಅದು ಉಲ್ಬಣಗೊಂಡು, ರೋಷನ್ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ, ನಾಲಿಗೆಗೆ ಗಾಯ ಮಾಡಿಕೊಂಡರು ಎಂದು ಆರೋಪಿಸಲಾಗಿದೆ. ಈ ಜಗಳದ ನಂತರ, ರೋಷನ್ ತನ್ನ ಎಸ್‌ಯುವಿಯಲ್ಲಿ ಸ್ಥಳದಿಂದ ಹೊರಹೋಗಲು ನಿರ್ಧರಿಸಿದರು. ಆದರೆ ಪ್ರಶಾಂತ್ ಹಿಂಬಾಲಿಸಿ ವಾಹನದ ಫುಟ್‌ಬೋರ್ಡ್‌ಗೆ ಹಾರಿ, ನಿಂದಿಸಿದ್ದರು.

ರೋಷನ್ ಸುಮಾರು 400 ಮೀಟರ್‌ಗಳಷ್ಟು ಅಜಾಗರೂಕತೆಯಿಂದ ವಾಹನ ಚಲಾಯಿಸಿದ್ದರು. ಈ ಸಮಯದಲ್ಲಿ ವಾಹನದ ನಿಯಂತ್ರಣ ಕಳೆದುಕೊಂಡು, ಕಾಂಪೌಂಡ್ ಗೋಡೆಗೆ ಡಿಕ್ಕಿ ಹೊಡೆದು ನಂತರ ರಸ್ತೆಬದಿಯ ಮರಕ್ಕೆ ಡಿಕ್ಕಿ ಹೊಡೆದರು. ಎಸ್‌ಯುವಿಯ ಎಡಭಾಗದ ಕಿಟಕಿಗೆ ನೇತಾಡುತ್ತಿದ್ದ ಪ್ರಶಾಂತ್ ತಲೆಗೆ ತೀವ್ರ ಗಾಯಗಳಾಗಿ ಸ್ಥಳದಲ್ಲೇ ಮೃತಪಟ್ಟು ರೋಷನ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇಡೀ ಘಟನೆ ಸಿಸಿಟಿವಿ ಮತ್ತು ಕಾರಿನ ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೋಷನ್ ಅವರ ಸಾವಿಗೆ ನಾನೇ ಕಾರಣ ಎಂದು ಪ್ರಶಾಂತ್ ಹೇಳುತ್ತಿರುವುದು ಮತ್ತು ವೇಗವನ್ನು ಕಡಿಮೆ ಮಾಡಲು ಹೇಳುತ್ತಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದೆ ಎಂದು ವರದಿಯಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಎಫ್‌ಐಆರ್ ದಾಖಲಾದ ಒಂದು ಗಂಟೆಯೊಳಗೆ ಆರೋಪಿಯನ್ನು ಬಂಧಿಸಲಾಗಿದೆ.

ಪ್ರಶಾಂತ್ ಅವರ ತಾಯಿ ಅನು ಸುದ್ದಿಗಾರರ ಜೊತೆ ಮಾತನಾಡಿ, ತನ್ನ ಮಗ ಕ್ರಿಕೆಟ್ ಬಗ್ಗೆ ಅಪಾರ ಒಲವು ಹೊಂದಿದ್ದನು, ಶನಿವಾರ ಅವರ ತಂಡ ಸೋತಿದ್ದ ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದನು. ಪಂದ್ಯಾವಳಿಯ ಸಮಯದಲ್ಲಿ ಮಗ ಮತ್ತು ರೋಷನ್ ನಡುವೆ ಜಗಳ ನಡೆದಿತ್ತು ಎಂದು ಹೇಳಿದ್ದಾರೆ.

ಆ ದಿನ ಮನೆಗೆ ಹಿಂದಿರುಗಿದ ನಂತರ, ತಂಡದ ಸೋಲಿನ ಬಗ್ಗೆ ಪ್ರಶಾಂತ್ ನಿರಾಶೆ ಹೊಂದಿದ್ದರು. ಭಾನುವಾರ ಸಂಜೆ, ಅವರು ಕಮ್ಮಸಂದ್ರ ಮೈದಾನಕ್ಕೆ ಹೋದವರು ಹಿಂತಿರುಗಿ ಬರಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com