ದೊಡ್ಡಬಳ್ಳಾಪುರ: ಹೊಸ ವರ್ಷಾಚರಣೆ ವೇಳೆ ಬೆಂಕಿಕಡ್ಡಿಗಾಗಿ ನಡೆದಿದ್ದ ಕೊಲೆ; ನಿರಪರಾಧಿ ಯುವಕನ ಬಿಡುಗಡೆಗೆ ನೆರವಾದ ಸಿಸಿಟಿವಿ ದೃಶ್ಯ!

ಹೊಸ ವರ್ಷದ ಮುನ್ನಾದಿನದಂದು ನಿಖಿಲ್ ಅವರ ಮನೆಯಲ್ಲಿ ಪಾರ್ಟಿ ಮಾಡಿ ಜನವರಿ 1 ರಂದು 12.30 ರ ಸುಮಾರಿಗೆ ವಾಕಿಂಗ್‌ಗೆ ತೆರಳಿದ್ದರು.
 Suraj Ram, Ujval Prasad and Prince
ಸೂರಜ್ ರಾಮ್, ಉಜ್ವಲ್ ಪ್ರಸಾದ್ ಮತ್ತು ಪ್ರಿನ್ಸ್
Updated on

ದೊಡ್ಡಬಳ್ಳಾಪುರ: ಸ್ನೇಹಿತನನ್ನು ಕೊಂದ ಆರೋಪದ ಮೇಲೆ ಪೊಲೀಸರು 25 ವರ್ಷದ ಯುವಕನನ್ನು ಬಂಧಿಸಿದ್ದು, ಆದರೆ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆತ ನಿರಪರಾಧಿ ಎಂಬ ಅಂಶ ಬಹಿರಂಗವಾಗಿದೆ.

ದೊಡ್ಡಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬಶೆಟ್ಟಹಳ್ಳಿ ಗ್ರಾಮದ ವಿನಾಯಕ ನಗರದಲ್ಲಿ ಹೊಸ ವರ್ಷದಂದುಈ ಘಟನೆ ನಡೆದಿದೆ. ಮೃತ ಸುಮಂತ ಜಮೀಂದರ್ (23) ಮತ್ತು ಅವರ ಸ್ನೇಹಿತ ನಿಖಿಲ್ (25) ಇಬ್ಬರೂ ಒಡಿಶಾ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ. ಹೊಸ ವರ್ಷದ ಮುನ್ನಾದಿನದಂದು ನಿಖಿಲ್ ಅವರ ಮನೆಯಲ್ಲಿ ಪಾರ್ಟಿ ಮಾಡಿ ಜನವರಿ 1 ರಂದು 12.30 ರ ಸುಮಾರಿಗೆ ವಾಕಿಂಗ್‌ಗೆ ತೆರಳಿದ್ದರು.

ಈ ಸಮಯದಲ್ಲಿ, ರಸ್ತೆಯಲ್ಲಿ ನಾಲ್ವರು ವ್ಯಕ್ತಿಗಳು ಬೆಂಕಿಕಡ್ಡಿ ಕೇಳಿದ್ದಾರೆ. ತಮ್ಮ ಬಳಿ ಬೆಂಕಿ ಪೊಟ್ಟಣ ಇಲ್ಲ ಎಂದು ಉತ್ತರಿಸಿದ್ದಾರೆ. ಈ ವೇಳೆ ಆರೋಪಿಗಳು ಬೆಂಕಿ ಪೊಟ್ಟಣ ತಂದು ಕೊಡುವಂತೆ ಸುಮಂತ್ ನನ್ನ ಹೇಳಿದ್ದಾರೆ. ಈ ಸಮಯದಲ್ಲಿ ಮಾತಿನ ಜಟಾಪಟಿ ನಡೆದು ಆರೋಪಿಗಳು ಸುಮಂತ್ ಜಮೀಂದರ್ ಗೆ ಹೊಡೆದಿದ್ದಾರೆ. ನಂತರ ಆತನನ್ನು ಹತ್ತಿರದಲ್ಲಿದ್ದ ತಮ್ಮ ಮನೆಗೆ ಎಳೆದುಕೊಂಡು ಹೋಗಿ, ಎರಡನೇ ಮಹಡಿಯಿಂದ ತಳ್ಳಿ, ಕೊಲೆ ಮಾಡಿದ್ದಾರೆ. ನಿಖಿಲ್ ಸ್ಥಳದಿಂದ ಪರಾರಿಯಾಗಿದ್ದು, ಆರೋಪಿಗಳು ಸಹ ಪರಾರಿಯಾಗಿದ್ದಾರೆ.

ಮನೆಯ ಬಳಿ ಶವ ಬಿದ್ದಿರುವ ಬಗ್ಗೆ ನಿವಾಸಿಗಳು ಬೆಳಿಗ್ಗೆ ತಮಗೆ ಮಾಹಿತಿ ನೀಡಿದಾಗ, ಇದು ಕೊಲೆ ಪ್ರಕರಣ ಎಂದು ತಿಳಿದುಬಂದಿತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರು ಸಂತ್ರಸ್ತನ ವಿವರಗಳನ್ನು ಸಂಗ್ರಹಿಸಿದಾಗ, ಜಮೀಂದರ್ ಮತ್ತು ನಿಖಿಲ್ ಹಿಂದಿನ ರಾತ್ರಿ ಪಾರ್ಟಿ ಮಾಡಿದ್ದ ಬಗ್ಗೆ ತಿಳಿದುಬಂದಿದೆ.

 Suraj Ram, Ujval Prasad and Prince
ಯೋಗೇಶ್ ಗೌಡ ಕೊಲೆ ಪ್ರಕರಣ: ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಶಾಸಕ ವಿನಯ್​ ಕುಲಕರ್ಣಿಗೆ ಶಾಕ್

ನಿಖಿಲ್ ಬಟ್ಟೆಗಳ ಮೇಲೆ ರಕ್ತದ ಕಲೆಗಳು ಕಂಡುಬಂದಿವೆ, ಆತನ ಫೋನ್ ಸ್ವಿಚ್ ಆಫ್ ಆಗಿತ್ತು, ಜೊತೆಗೆ ನಿಖಿಲ್ ಪರಾರಿಯಾಗಿದ್ದ. ಆರಂಭದಲ್ಲಿ ಪೊಲೀಸರಿಗೆ ಜಗಳದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ ಮತ್ತು ಪ್ರತ್ಯಕ್ಷದರ್ಶಿಗಳು ಅಥವಾ ಇತರ ಪುರಾವೆಗಳು ಇಲ್ಲದ ಕಾರಣ, ಅನುಮಾನದ ಸೂಜಿ ನಿಖಿಲ್ ಕಡೆಗೆ ತಿರುಗಿತು. ಇದಲ್ಲದೆ, ಜಮೀಂದರ್ ಅವರ ಸಂಬಂಧಿ ನಿಖಿಲ್ ತನ್ನ ಸ್ನೇಹಿತನನ್ನು ಕೊಂದಿದ್ದಾನೆ ಎಂದು ಶಂಕಿಸಿ ಪ್ರಕರಣ ದಾಖಲಿಸಿದರು.

ತನಿಖಾಧಿಕಾರಿಗಳು ನಿಖಿಲ್ ತನ್ನ ಸ್ನೇಹಿತನನ್ನು ಕೊಂದಿದ್ದಾನೆ ಎಂದು ನಂಬಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಆತನನ್ನು ವಿಶಾಖಪಟ್ಟಣದಲ್ಲಿ ಬಂಧಿಸಿದ್ದರು.

ವಿಚಾರಣೆಯ ಸಮಯದಲ್ಲಿ, ನಿಖಿಲ್ ತಾನು ನಿರಪರಾಧಿ ಎಂದು ಒಪ್ಪಿಕೊಂಡನು, ಬೆಂಕಿಕಡ್ಡಿ ಖರೀದಿಸಲು ನಿರಾಕರಿಸಿದ್ದಕ್ಕಾಗಿ ಇತರ ನಾಲ್ವರು ಆರೋಪಿಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಕೊಲೆಯನ್ನು ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು, ಹೀಗಾಗಿ ಭಯದಿಂದ ತನ್ನ ಊರಿಗೆ ಓಡಿಹೋಗಿದ್ದನು ಎಂದು ತಿಳಿಸಿದ್ದಾನೆ.

ಸಿಸಿಟಿವಿ ದೃಶ್ಯಾವಳಿಗಳ ಹೆಚ್ಚಿನ ವಿಶ್ಲೇಷಣೆಯಲ್ಲಿ ಆರೋಪಿಗಳು ಸ್ಥಳದಲ್ಲಿ ಇರುವುದು ಕಂಡುಬಂದಿದೆ, ನಂತರ ಅವರನ್ನು ಬಂಧಿಸಲಾಯಿತು. ಆರೋಪಿಗಳನ್ನು ಉಜ್ವಲ್ ಪ್ರಸಾದ್ (29), ಸೂರಜ್ ರಾಮ್ (24), ಪ್ರಿನ್ಸ್ (26) ಮತ್ತು 17 ವರ್ಷದ ಶಾಲೆ ಬಿಟ್ಟ ಬಾಲಕ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಾರ್ಖಾನೆ ಕಾರ್ಮಿಕರು ಮತ್ತು ಉತ್ತರ ಪ್ರದೇಶದ ನಿವಾಸಿಗಳಾಗಿದ್ದು, ಕಳೆದ 20 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com