ಗದಗ ನಿವಾಸಿಗಳಿಗೆ ವರದಾನವಾದ SIR: ವಲಸೆ ನಿವಾಸಿಗಳ ಸಮ್ಮಿಲನಕ್ಕೆ ಅವಕಾಶ!

ಹಲವು ನಿವಾಸಿಗಳು ತಮ್ಮ ಹಳೆಯ ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಈ ಪ್ರದೇಶಗಳ ಬಹುತೇಕ ಜನರು ದಿನಗೂಲಿ ಕಾರ್ಮಿಕರಾಗಿದ್ದು, 2000ನೇ ಇಸವಿಗೆ ಮೊದಲು ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು.
Residents who migrated to other towns meet in Gadag after many years during the Special Intensive Revision (SIR) exercise.
ಇತರ ಪಟ್ಟಣಗಳಿಗೆ ವಲಸೆ ಬಂದ ನಿವಾಸಿಗಳು ಹಲವು ವರ್ಷಗಳ ನಂತರ ವಿಶೇಷ ತೀವ್ರ ಪರಿಷ್ಕರಣೆ (SIR) ಸಮಯದಲ್ಲಿ ಗದಗದಲ್ಲಿ ಭೇಟಿಯಾದರು.Photo | Express
Updated on

ಗದಗ: ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಗದಗದಲ್ಲಿ 25 ವರ್ಷಗಳ ಬಳಿಕ ಅನೇಕ ವಲಸೆ ನಿವಾಸಿಗಳನ್ನು ಮತ್ತೆ ಒಂದಾಗಿಸಿದೆ. ಹುಡ್ಕೋ ಕಾಲೊನಿ, ರಾಜೀವ್ ಗಾಂಧಿ ನಗರ ಹಾಗೂ ಹಮಾಲ ಕಾಲೊನಿಯ ಮೂಲ ನಿವಾಸಿಗಳು 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳ ವಿವರ ಪರಿಶೀಲಿಸಲು ಊರಿಗೆ ಮರಳುತ್ತಿದ್ದು, ಈ ವೇಳೆ ಹಳೆಯ ಸ್ನೇಹಿತರು ಹಾಗೂ ಬಂಧುಗಳನ್ನು ಮತ್ತೆ ಭೇಟಿಯಾಗುತ್ತಿದ್ದಾರೆ.

ಹಲವು ನಿವಾಸಿಗಳು ತಮ್ಮ ಹಳೆಯ ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡಿದ್ದೇವೆ ಎನ್ನುತ್ತಾರೆ. ಈ ಪ್ರದೇಶಗಳ ಬಹುತೇಕ ಜನರು ದಿನಗೂಲಿ ಕಾರ್ಮಿಕರಾಗಿದ್ದು, 2000ನೇ ಇಸವಿಗೆ ಮೊದಲು ಉದ್ಯೋಗಕ್ಕಾಗಿ ವಿವಿಧ ನಗರಗಳಿಗೆ ವಲಸೆ ಹೋಗಿದ್ದರು. ಈಗ ಎಸ್‌ಐಆರ್ ಪ್ರಕ್ರಿಯೆಯಿಂದ ಊರಿಗೆ ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಹಳೆಯ ನೆನಪುಗಳನ್ನು ಮೆಲುಕು ಹಾಕುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಬೂತ್ ಮಟ್ಟದ ಅಧಿಕಾರಿಗಳು (BLO) 2002ರ ಮತದಾರರ ಪಟ್ಟಿಗೆ ಪ್ರವೇಶ ಹೊಂದಿದ್ದು, ಆ ಸಮಯದಲ್ಲಿ ಶಾಲೆಗಳು, ಸಮುದಾಯ ಭವನಗಳು ಹಾಗೂ ಇತರ ಸ್ಥಳಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ಮತ ಚಲಾಯಿಸಿದ್ದವರ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ನೆಲೆಸಿರುವ ಗದಗ ಮೂಲದ ಹಿರಿಯ ನಾಗರಿಕರು 2002ಕ್ಕೂ ಮೊದಲು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಪರಿಶೀಲಿಸಲು ಗದಗಕ್ಕೆ ಆಗಮಿಸುತ್ತಿದ್ದಾರೆ. 2000 ದಶಕದಲ್ಲಿ ಗದಗದಿಂದ ವಲಸೆ ಹೋದವರು ಈಗ ಎಸ್‌ಐಆರ್ ಪ್ರಕ್ರಿಯೆಗಾಗಿ ಲಾಡ್ಜ್‌ಗಳು, ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ತಂಗಿದ್ದಾರೆ.

Residents who migrated to other towns meet in Gadag after many years during the Special Intensive Revision (SIR) exercise.
ಕರ್ನಾಟಕ SIR ಅವಧಿ ವಿಸ್ತರಣೆ: BLO ಮನೆಮನೆ ಭೇಟಿಗೆ ಆಗಸ್ಟ್ 8 ಕೊನೆ ದಿನ; 17ರಂದು ಕರಡು ಪಟ್ಟಿ ಪ್ರಕಟಣೆ!

ಮೊನ್ನೆ ಬುಧವಾರ ರಾಜೀವ್ ಗಾಂಧಿ ನಗರದ ನಿವಾಸಿ ಅಬ್ದುಲ್ ಕುರಹಟ್ಟಿ, ಬೂತ್ ಸಂಖ್ಯೆ 8ರ ಸಮೀಪದ ಚಹಾ ಅಂಗಡಿಯಲ್ಲಿ ತನ್ನ ಹಳೆಯ ಸ್ನೇಹಿತರಾದ ರವಿ ಚಿಮ್ಮಳ್, ರವಿ ಗೌಡರ್ ಹಾಗೂ ರಾಗವೇಂದ್ರ ಗೌಡರ್ ಅವರನ್ನು ಭೇಟಿ ಮಾಡಿ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ನಾನು ಫೇಸ್‌ಬುಕ್ ಬಳಸುವುದಿಲ್ಲ. ಆದರೆ ನನ್ನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಾರೆ. ನನ್ನನ್ನು ಕಂಡ ಅನೇಕರು ಸಂತಸ ವ್ಯಕ್ತಪಡಿಸಿದರು. ಎಸ್‌ಐಆರ್ ಪ್ರಕ್ರಿಯೆ ಹಲವು ಸವಾಲುಗಳನ್ನು ಹೊಂದಿದ್ದರೂ, ನಮ್ಮನ್ನು ಮತ್ತೆ ಒಂದಾಗಿಸಿದೆ ಎಂದು ಕುರಹಟ್ಟಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com