ಕಳೆದ ಬಾರಿ ಮೈಸೂರಿನವರೇ CM ಆಗಿದ್ದರು, ನನಗೆ ಅವಕಾಶ ಸಿಕ್ಕಿರಲಿಲ್ಲ: ಲಾಬಿ ಅವಶ್ಯಕತೆ ಇಲ್ಲ- ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ; ತನ್ವೀರ್ ಸೇಠ್

ಮಂಗಳವಾರ ನಿಶ್ಚಿತವಾಗಿ ಸಭೆ ನಡೆಯುತ್ತದೆ. ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.
Tanveer sait
ತನ್ವೀರ್ ಸೇಠ್
Updated on

ಮೈಸೂರು: ಪಕ್ಷ ನಿಷ್ಠೆ ನನ್ನನ್ನು ಕಾಪಾಡುತ್ತದೆ. ನನಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ , ಹಾಗಾಗಿ ಲಾಬಿ ಮಾಡಲು ದೆಹಲಿಗೆ ಹೋಗುವ ಅಗತ್ಯವಿಲ್ಲ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ವರಿಷ್ಠರ ಭೇಟಿಗೆ ರಾಜ್ಯ ನಾಯಕರು ತೆರಳಿದ್ದಾರೆ. ಮಂಗಳವಾರ ನಿಶ್ಚಿತವಾಗಿ ಸಭೆ ನಡೆಯುತ್ತದೆ. ಬುಧವಾರ ಅಥವಾ ಗುರುವಾರ ಸಚಿವ ಸಂಪುಟ ವಿಸ್ತರಣೆ ಆಗುತ್ತದೆ ಎಂದರು.

ಕಳೆದ ಬಾರಿ ಮೈಸೂರಿನವರೇ ಮುಖ್ಯಮಂತ್ರಿ ಆಗಿದ್ದರು. ಹೀಗಾಗಿ ನನಗೆ ಅವಕಾಶ ಸಿಕ್ಕಿರಲಿಲ್ಲ. ನನ್ನ ನಿಷ್ಠೆ ಕುರಿತು ಹೈಕಮಾಂಡ್ ಗೆ ಗೊತ್ತಿದೆ. ಹೀಗಾಗಿ ನಾನು ದೆಹಲಿಗೆ ತೆರಳಿ ಲಾಬಿ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Tanveer sait
ಸಚಿವ ಸಂಪುಟ ವಿಸ್ತರಣೆ: ಹೈಕಮಾಂಡ್ ಇಂದು ಅಂತಿಮ ನಿರ್ಧಾರ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com