ನಮ್ಮ ರಾಜ್ಯದ ಭಾಷೆ, ಭೂಮಿ, ನೆಲ-ಜಲ ವಿಚಾರದಲ್ಲಿ ರಾಜಿಯಿಲ್ಲ; ವಿಜಯ್ ಅವರು ಬಂದು ದೇವರ ದರ್ಶನ ಪಡೆದುಕೊಂಡು ಹೋಗಲಿ: ಪ್ರಿಯಾಂಕ್ ಖರ್ಗೆ; Video

ತಮಿಳು ನಾಡು ಸಿಎಂ ಅವರು ಇಂದು ಕೊಲ್ಲೂರಿಗೆ ದೇವರ ದರ್ಶನ ಮಾಡಲು ಬರುತ್ತಿದ್ದಾರೆ, ಬರಲಿ, ಅವರು ಬಂದ ತಕ್ಷಣ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುತ್ತಿಲ್ಲ ಎಂದರು.
Priyank Kharge and Vijay Thalapathy
ಪ್ರಿಯಾಂಕ್ ಖರ್ಗೆ-ವಿಜಯ್
Updated on

ನಮ್ಮ ರಾಜ್ಯದ ಭಾಷೆ, ಭೂಮಿ ಮತ್ತು ನೀರಿನ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ಬಂದು ದೇವರ ಆಶೀರ್ವಾದ ಪಡೆದುಕೊಂಡು ಹೋಗಲಿ ಎಂದು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇಂದು ಕೊಲ್ಲೂರಿನ ದೇವಾಲಯಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ತಮಿಳು ನಾಡು ಸಿಎಂ ಅವರು ಇಂದು ಕೊಲ್ಲೂರಿಗೆ ದೇವರ ದರ್ಶನ ಮಾಡಲು ಬರುತ್ತಿದ್ದಾರೆ, ಬರಲಿ, ಅವರು ಬಂದ ತಕ್ಷಣ ನಾವು ನಮ್ಮ ಹಕ್ಕನ್ನು ಬಿಟ್ಟುಕೊಡುತ್ತಿಲ್ಲ, ನಾಡಿನ ಭಾಷೆ, ನೆಲ, ಜಲದ ಬಗ್ಗೆ ಸುಪ್ರೀಂ ಕೋರ್ಟ್ ಸರಿಯಾದ ಆದೇಶ ನೀಡಿದೆ, ನಾವು ಅದರ ಪ್ರಕಾರ ನಡೆದುಕೊಳ್ಳುತ್ತೇವೆ. ಅದರಲ್ಲಿ ರಾಜಿಯಿಲ್ಲ, ಅವರು ಬಯಸುವುದನ್ನು ದೇವರಲ್ಲಿ ಕೇಳಿಕೊಳ್ಳಲಿ,ನಾವು ಬೇಡ ಎಂದು ಆಕ್ಷೇಪಿಸುವುದೇಕೆ ಎಂದು ಕೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com