

ಬೆಂಗಳೂರು: ಬಿಡದಿ ಟೌನ್ ಶಿಪ್ ವಿಚಾರದಲ್ಲಿ ನಮ್ಮ ಹೋರಾಟ ಜನತೆಗೋಸ್ಕರ, ರೈತರ ಪರವಾಗಿ, ನನ್ನ ವಿರುದ್ಧ ಪೋಸ್ಟರ್ ಅಂಟಿಸಿ ಸುಳ್ಳು ಪ್ರಚಾರ ಮಾಡುವುದಕ್ಕೆ ಹೆದರುವ, ಜಗ್ಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಬಿಡದಿಯಲ್ಲಿ ಹೆಚ್ ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದ ವಿರುದ್ದ ಪೋಸ್ಟರ್ ಅಂಟಿಸಿರೋ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಸಿಎಂ ಆದಮೇಲಾದ್ರೂ ಬ್ಲೂಫಿಲ್ಮ್ ಮಾಡೋದು, ಪೋಸ್ಟರ್ ಅಂಟಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆ ಖಯಾಲಿ ಇನ್ನೂ ಡಿಕೆ ಶಿವಕುಮಾರ್‌ಗೆ ಹೋಗಿಲ್ಲ.
ಪೋಸ್ಟರ್ ಅಂಟಿಸಿ ಪ್ರಚಾರ ಮಾಡೋದಾ? ನನ್ನದು ಬಿಡಿ, ನನ್ನ ಹೆಂಡತಿಯದ್ದೂ ಫೋಟೋ ಹಾಕಿದ್ದಾರೆ. 100 ಎಕರೆ ಅಂತ ಪೋಸ್ಟರ್ ಅಂತ ನಂದು ನಿಖಿಲ್ ಫೋಟೋ ಹಾಕಿದ್ದಾರೆ. 46 ಎಕರೆ 40 ವರ್ಷದ ಹಿಂದೆ ಕಷ್ಟ ಪಟ್ಟು ಖರೀದಿ ಮಾಡಿರೋ ಜಮೀನು. ಅದು ಬಿಟ್ಟು ನನ್ನ ಹೆಸರಿನಲ್ಲಿ ಯಾವ ಜಮೀನು ಇದೆ. 100 ಎಕರೆ ಅಂತ ಪೋಸ್ಟರ್ ಹಾಕಿದ್ದಾರೆ. ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ತಗೊಂಡಿದ್ದಾರೆ. ಅದು ಖರೀದಿ ಮಾಡಿರೋದು. ಖರೀದಿ ಮಾಡಿರೋದನ್ನ ಯಾವನೋ ಹೆಸರಿನಲ್ಲಿ ಪೋಸ್ಟರ್ ಹಾಕಿ ಕೊಡಿ ಅಂದರೆ ಹೇಗೆ ಎಂದು ಪ್ರಶ್ನಿಸಿದರು.
ಬೆನ್ನಗಾನಹಳ್ಳಿಯಲ್ಲಿ ಸತ್ತೋದವರ ಹೆಬ್ಬಟ್ಟು ತೋರಿಸಿ ಜಮೀನು ತಗೊಂಡ ವ್ಯಕ್ತಿ ಈಗ ಅವರ ಬೆಂಬಲಿಗರಿಗೆ ಹೇಳಿ ಪೋಸ್ಟರ್ ಹಾಕಿಸಿದ್ದಾರೆ. ಪೋಸ್ಟರ್ ಹಾಕಿದ್ರೆ ಜನ ನಂಬುತ್ತಾರಾ, ಸಿಎಂ ಆದಾಗಾದ್ರೂ ಒಂದು ಸ್ಟ್ಯಾಂಡರ್ಡ್ ಬೇಡವಾ? ಸ್ಟ್ಯಾಂಡರ್ಡ್ ಇಲ್ಲದೇ ಈ ರೀತಿಯ ನಡವಳಿಕೆ, ರಾಜ್ಯ ಯಾವ ರೀತಿ ಹೊಗುತ್ತೆ ಅನ್ನೋದನ್ನ ಯೋಚನೆ ಮಾಡಬೇಕು ಎಂದು ಪ್ರಶ್ನಿಸಿದರು.
ಇದು ಡಿಕೆಶಿ ವಿಕೃತ ಮನಸು. ಇವರು ಮೊದಲಿಂದ ಬಂದಿರೋದು ಇದರಿಂದಲೇ. ಈ ಖಯಾಲಿಯಲ್ಲಿ ಬಂದ ವ್ಯಕ್ತಿ ಸಿಎಂ ಆದ ಮೇಲೂ ಸಿಎಂ ಕುರ್ಚಿಗೆ ಗೌರವ ಬೇಡವಾ? ಪೋಸ್ಟರ್ ಹಾಕಿಕೊಂಡು ಅಪ ಪ್ರಚಾರ ಮಾಡ್ತಾ ಇದ್ದಾರೆ. ಅಶೋಕ್, ನಾರಾಯಣಸ್ವಾಮಿ, ವಿಜಯೇಂದ್ರ ವಿರುದ್ಧ ಪೋಸ್ಟರ್ ಹಾಕಿದ್ದಾರೆ. ತಪ್ಪು ಮಾಡಿದ್ರೆ ಸಿಎಂ ಆಗಿ ಆಕ್ಷನ್ ತಗೊಳೋಕೆ ಹೇಳಿ ಅಧಿಕಾರಿಗಳಿಗೆ. ಸುಮ್ಮನೆ ಯಾಕೆ ಪೋಸ್ಟರ್ ಹಾಕಿದ್ದೀರಾ? ಇಲ್ಲಿವರೆಗೂ ಕಾಂಗ್ರೆಸ್ ನ ಮಂತ್ರಿಗಳು ಶಾಸಕರದ್ದೇ ನಡೆದು ಹೋಯ್ತು. ವಿಧಾನಸಭೆ ಕಲಾಪದಲ್ಲಿ ನಡೆದು ಹೋಯ್ತು. ಮತ್ತೆ ಅವರನ್ನ ಬಾಯಿ ಮುಚ್ಚಿಸಿದ್ರು. ಸತ್ಯ ಹೇಳ್ತೀನಿ ಅಂತ ಅವರು ಬಾಯಿಯೇ ತೆಗೆಯಲಿಲ್ಲ. ಇನ್ನು ಮುಂದೆಯಾದ್ರು ನಿಲ್ಲುತ್ತೇನೋ ಅಂದುಕೊಂಡಿದ್ವಿ, ಆದ್ರೆ ಆ ಖಯಾಲಿ ಹೋಗಿಲ್ಲ ಎಂದು ಕಿಡಿ ಕಾರಿದರು.
ನಮ್ಮದೊಂದು ಸಣ್ಣಪಕ್ಷ, ನಮ್ಮ ಕೈಯಲ್ಲಿ ಏನಿದೆ, ಇಂದು ಅವರ ಕೈಯಲ್ಲಿ ಸರ್ಕಾರವಿದೆ, ಹಣಬಲ, ತೋಳ್ಬಲ, ಜನತೆ ಬಲ ಇದೆ, ಅವರ ಮುಂದೆ ಫೈಟ್ ಮಾಡಲು ಆಗುವುದಿಲ್ಲ, ನಮಗೆ ಬಿಜೆಪಿಯ ಬಗ್ಗೆ ಬೆಂಬಲವಿಲ್ಲ, ಎಂದು ನಾಳೆ ನಡೆಯುವ ವಿಧಾನ ಪರಿಷತ್ ಚುನಾವಣೆ ಬಗ್ಗೆ ಹೇಳಿದರು.
ಚಲುವರಾಯ ಸ್ವಾಮಿ ಬಗ್ಗೆ ಉತ್ತರ ಕೊಡಲ್ಲ
ಚಲುವರಾಯಸ್ವಾಮಿಯಂತವರ ಹೇಳಿಕೆಗಳಿಗೆ ನಾನು ಉತ್ತರ ಕೊಡಲ್ಲ, ಅವರು ಪಾಪ ಅವರ ಕುರ್ಚಿ ಉಳಿಸಿಕೊಳ್ಳಲು ಮಾತನಾಡುತ್ತಿದ್ದಾರೆ ಎಂದರು.
Advertisement