ಬೆಂಗಳೂರು ಅಭಿವೃದ್ದಿಗೆ 15 ಸೂತ್ರ: ಕೃಷ್ಣ ಬೈರೇಗೌಡರಿಗೆ ಸಂಸದ ತೇಜಸ್ವಿ ಸೂರ್ಯ ಪತ್ರ; Video

60 ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾದ ಏಕೀಕೃತ ಮೂಲಸೌಕರ್ಯ ಹೊಣೆಗಾರಿಕೆ ವೇದಿಕೆಯನ್ನು ರಚಿಸುವುದು ಅವರ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ.
Tejasvi Surya
ತೇಜಸ್ವಿ ಸೂರ್ಯonline desk
Updated on

ಬೆಂಗಳೂರು: ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಪತ್ರ ಬರೆದಿದ್ದು, ನಗರದ ಮೂಲಸೌಕರ್ಯ, ಚಲನಶೀಲತೆ ಮತ್ತು ಆಡಳಿತವನ್ನು ಬಲಪಡಿಸುವ ಗುರಿಯನ್ನು ಹೊಂದಿರುವ 15 ಅಂಶಗಳ ಕಾರ್ಯಸೂಚಿಯನ್ನು ವಿವರಿಸಿದ್ದಾರೆ

ಜೂನ್ 22 ರಂದು ಬರೆದ ತಮ್ಮ ಪತ್ರದಲ್ಲಿ, ನಗರ ಆಡಳಿತದಲ್ಲಿ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಕೋರಿದ್ದಾರೆ. ಚುನಾಯಿತ ಸ್ಥಳೀಯ ಸಂಸ್ಥೆಗಳ ಅನುಪಸ್ಥಿತಿ ಮತ್ತು ಯೋಜಿತವಲ್ಲದ ಮೂಲಸೌಕರ್ಯ ಯೋಜನೆಗಳಿಂದಾಗಿ ಬೆಂಗಳೂರು ಕಳೆದ ಮೂರು ವರ್ಷಗಳಲ್ಲಿ "ಮಹತ್ವದ ಆಡಳಿತಾತ್ಮಕ ನ್ಯೂನತೆಗಳನ್ನು" ಕಂಡಿದೆ ಎಂದು ಸೂರ್ಯ ಹೇಳಿದ್ದಾರೆ.

60 ದಿನಗಳಲ್ಲಿ ಸಾರ್ವಜನಿಕರಿಗೆ ಅನುಕೂಲಕರವಾದ ಏಕೀಕೃತ ಮೂಲಸೌಕರ್ಯ ಹೊಣೆಗಾರಿಕೆ ವೇದಿಕೆಯನ್ನು ರಚಿಸುವುದು ಅವರ ಪ್ರಮುಖ ಶಿಫಾರಸುಗಳಲ್ಲಿ ಒಂದಾಗಿದೆ. ಬಿಎಂಆರ್‍ ಸಿಎಲ್, ಬಿಡಿಎ, ಬಿಎಂಎಲ್‍ಟಿಎ. ಕೆಆರ್‍ಐಡಿಎಲ್ ಸೇರಿ 12 ಕ್ಕೂ ಹೆಚ್ಚು ಮೂಲಸೌಕರ್ಯ ಏಜೆನ್ಸಿಗಳು ಬೆಂಗಳೂರಿನಲ್ಲಿವೆ.

ಆದ್ದರಿಂದ ಬಿಎಂಎಲ್‍ಟಿಎಗೆ ಅಧ್ಯಕ್ಷರ ನೇಮಕ ಮಾಡಿ ನೋಡಲ್ ಏಜೆನ್ಸಿ ಮಾಡಬೇಕು ಎಂದರು. ಮೆಟ್ರೊ ವಿಸ್ತರಣೆ, ರಸ್ತೆ ಗುಂಡಿಗಳನ್ನು ಮುಚ್ಚುವುದು, ಪಾದಚಾರಿ ಮಾರ್ಗದ ಬಗ್ಗೆ ಚರ್ಚಿಸಿರುವುದಾಗಿ ಹೇಳಿದರು.

ನಾಲ್ಕೂವರೆ ವರ್ಷಗಳಿಂದ ಹೊಸ ಮೆಟ್ರೊ ಕಾಮಗಾರಿ ಆರಂಭವಾಗಿಲ್ಲ. ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವ ಮೆಟ್ರೋ ಮೂರನೇ ಹಂತದ ಆರೆಂಜ್ ಮಾರ್ಗಕ್ಕೆ ಎರಡು ವರ್ಷ ಆದರೂ ಟೆಂಡರ್ ಆಗಿಲ್ಲ. ಇದರ ವೆಚ್ಚ ಹೆಚ್ಚಳವಾಗುತ್ತಿದೆ. ಮೆಟ್ರೊ ಯೋಜನೆಯಲ್ಲಿ ವೆಚ್ಚ ಕಡಿಮೆ ಮಾಡಲು ಭೂಗತ ಮೆಟ್ರೊ ನಿಲ್ದಾಣಗಳ ಉದ್ದ ಕಡಿಮೆ ಮಾಡಿದ್ದಾರೆ. ಇದರಿಂದ ಎಂಟು ಬೋಗಿ ಬದಲು ಆರು ಬೋಗಿಯ ಮೆಟ್ರೊ ಮಾತ್ರ ನಿಲುಗಡೆ ಮಾಡಬಹುದು. ವೆಚ್ಚ ಕಡಿಮೆ ಮಾಡಲು ನಿಲ್ದಾಣದ ಪ್ಲಾಟ್‍ಫಾರಂ ಉದ್ದ ಕಡಿಮೆ ಮಾಡಿದರೆ ಉಪಯೋಗ ಆಗದು ಎಂದರು.

ಕೇಂದ್ರ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದ ಅರ್ಬನ್ ಚಾಲೆಂಜ್ ಫಂಡ್ (ಯುಸಿಎಫ್) ಅಡಿ 1 ಲಕ್ಷ ಕೋಟಿ ರು. ಇಡಲಾಗಿದೆ. ರಾಜ್ಯ ಸರ್ಕಾರದಿಂದ ಈ ಯೋಜನೆಯಡಿ ಅನುದಾನಕ್ಕಾಗಿ ಪ್ರಸ್ತಾವನೆ ಬಂದಿಲ್ಲ. ಸರಿಯಾದ ಡಿಪಿಆರ್ ಕೊಟ್ಟರೆ ಕೇಂದ್ರ ಹಣ ನೀಡುತ್ತದೆ.

Tejasvi Surya
ಫ್ಲೈಓವರ್ ನಿರ್ಮಿಸುತ್ತಿರುವಾಗ ರಸ್ತೆಗೆ ವೈಟ್‌ಟಾಪಿಂಗ್ ಏಕೆ? ಬಿಲ್ ಗಾಗಿ ಕಾಮಗಾರಿಯೇ? B-SMILE ನಿರ್ದೇಶಕರಿಗೆ ಕೃಷ್ಣ ಬೈರೇಗೌಡ ತರಾಟೆ

ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಎರಡು ವರ್ಷದ ಹಿಂದೆ ಮಹಾನಗರದಲ್ಲಿ ಬಾಡಿಗೆ ಮನೆಯಲ್ಲಿ ಇರುವವರಿಗೆ ಸಹಾಯವಾಗಲು ಯೋಜನೆ ರೂಪಿಸಲಾಗಿದೆ. ಈ ಸರ್ಕಾರ ಬಂದ ಮೇಲೆ ಈ ಯೋಜನೆಯಡಿ ಒಂದೇ ಒಂದು ಬಾಡಿಗೆ ಮನೆ ಕಟ್ಟಿಲ್ಲ. ಅರ್ಜಿ ಸಹ ಬಂದಿಲ್ಲ ಈ ಬಗ್ಗೆ ಗಮನ ಹರಿಸಲು ಸಚಿವರನ್ನು ಕೋರಿರುವುದಾಗಿ ಹೇಳಿದರು.

ನಗರದಾದ್ಯಂತ ಪಾದಚಾರಿ ಮಾರ್ಗಗಳನ್ನು ಪುನಃಸ್ಥಾಪಿಸಲು ಮತ್ತು ಪಾದಚಾರಿ ಮೂಲಸೌಕರ್ಯವನ್ನು ಸುಧಾರಿಸಲು 'ಮಿಷನ್ ವಾಕಬಲ್ ಬೆಂಗಳೂರು' ಪ್ರಾರಂಭಿಸಲು ಸಂಸದರು ಶಿಫಾರಸು ಮಾಡಿದ್ದಾರೆ . ಪ್ರವಾಹ ತಗ್ಗಿಸಲು ವೈಜ್ಞಾನಿಕ ಕ್ರಮಗಳು, ಕೆರೆಗಳ ಪುನರುಜ್ಜೀವನ, ದೀರ್ಘಾವಧಿಯ ನೀರಿನ ಭದ್ರತಾ ಯೋಜನೆ ಮತ್ತು ಪೈಪ್‌ಗಳ ಮೂಲಕ ನೈಸರ್ಗಿಕ ಅನಿಲ ಸಂಪರ್ಕದ ತ್ವರಿತ ಅನುಷ್ಠಾನದ ಅಗತ್ಯವನ್ನು ತೇಜಸ್ವಿ ಸೂರ್ಯ ಒತ್ತಿ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com