Video: ನಮ್ಮ ಮೆಟ್ರೋದಲ್ಲಿ ಹಾಡು ಹಾಡಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ 11 ಯುವತಿಯರ ಬಂಧನ

ಹೊಯ್ಸಳ ಗಸ್ತು ತಂಡದ ಬೆಂಬಲದೊಂದಿಗೆ ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ಗೃಹರಕ್ಷ ಸಿಬ್ಬಂದಿ ಹಾಡು ಹಾಡಿದ ಯುವತಿಯರನ್ನು ಗುರುತಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
11 female passengers held for creating nuisance, disturbing commuters in Bengaluru metro
ಮೆಟ್ರೋದಲ್ಲಿ ಹಾಡು ಹಾಡಿದ ಯುವತಿಯರು
Updated on

ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ ರೈಲಿನೊಳಗೆ ಜೋರಾಗಿ ಹಾಡುವ ಹಾಡುವ ಮೂಲಕ ಇತರ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ ಆರೋಪದ ಮೇಲೆ ಹನ್ನೊಂದು ಯುವತಿಯರ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಮಾರ್ಚ್ 15 ರ ರಾತ್ರಿ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದಿಂದ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ.

ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದ ಯುವತಿಯರ ಗುಂಪೊಂದು ಮೆಟ್ರೋದಲ್ಲಿ ಜೋರಾಗಿ ಹಾಡು ಹಾಡಿ ನೃತ್ಯ ಮಾಡಿದೆ. ಇದರಿಂದ ಮೆಟ್ರೋದಲ್ಲಿದ್ದ ಇತರೆ ಪ್ರಯಾಣಿಕರಿಗೆ ತೊಂದರೆ ಉಂಟಾಗಿದೆ. ಕೆಲವು ಯುವತಿಯರು ಮೆಟ್ರೋ ಬೋಗಿಯ ನೆಲದ ಮೇಲೆ ಕುಳಿತು ಹಾಡು ಹಾಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿತ್ತು.

11 female passengers held for creating nuisance, disturbing commuters in Bengaluru metro
ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಬ್ರೇಕ್!

ನಂತರ, ಪೀಣ್ಯ ಕೈಗಾರಿಕಾ ಪ್ರದೇಶ ನಿಲ್ದಾಣದಲ್ಲಿ, ಕೆಲವು ಪ್ರಯಾಣಿಕರು ಇಳಿದು ಪ್ಲಾಟ್‌ಫಾರ್ಮ್‌ನಲ್ಲಿ ವಾಗ್ವಾದ ನಡೆಸಿದರು ಮತ್ತು ರೈಲಿನ ಬಾಗಿಲುಗಳು ಮುಚ್ಚದಂತೆ ಸ್ವಲ್ಪ ಸಮಯ ತಡೆದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಯ ನಂತರ, ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು ಎಂದು ಅವರು ಹೇಳಿದ್ದಾರೆ.

ಹಲವಾರು ನಿಲ್ದಾಣಗಳಲ್ಲಿ ಅದೇ ಗುಂಪು ಕಿರಿಕಿರಿ ಉಂಟುಮಾಡಿದೆ ಎಂದು ಆರೋಪಿಸಲಾಗಿದೆ.

ಹೊಯ್ಸಳ ಗಸ್ತು ತಂಡದ ಬೆಂಬಲದೊಂದಿಗೆ ಮೆಟ್ರೋ ಭದ್ರತಾ ಸಿಬ್ಬಂದಿ ಮತ್ತು ಗೃಹರಕ್ಷ ಸಿಬ್ಬಂದಿ ಹಾಡು ಹಾಡಿದ ಯುವತಿಯರನ್ನು ಗುರುತಿಸಿ ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆದಾಗ್ಯೂ, ಅವರು ತಮ್ಮ ಕೃತ್ಯಗಳಿಗೆ ಕ್ಷಮೆಯಾಚಿಸಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಬಿಎಂಆರ್‌ಸಿಎಲ್ ಭದ್ರತಾ ಅಧಿಕಾರಿ ನೀಡಿದ ದೂರಿನ ಆಧಾರದ ಮೇಲೆ, ಈ 11 ಮಹಿಳಾ ಪ್ರಯಾಣಿಕರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com