ರಾಹುಕಾಲ, ಗುಳಿಕಕಾಲ ನೋಡಲ್ಲ; ಯುಗಾದಿ - ಶಿವರಾತ್ರಿಯಂದೂ ಮಾಂಸ ತಿಂತೀನಿ: ಸಿಎಂ ಸಿದ್ದರಾಮಯ್ಯ; Video

ಯಾರಾದ್ರೂ ಯುಗಾದಿ- ಶಿವರಾತ್ರಿಯಂದು ಮಾಂಸ ತಿಂತಾರಾ ಎಂದು ಪ್ರಶ್ನಿಸಿದ ಅವರು ನಾನು ತಿಂತೇನೆ ಎಂದರು. ಹಬ್ಬ ಮನೇಲಿ ಮಾಡ್ತಾರೆ ನನ್ನಿಷ್ಟ ನಾನು ತಿನ್ನುತ್ತೇನೆ ಎಂದರು.
CM Siddaramaiah
ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ನಾನು ಯಾವ ರಾಹುಕಾಲ, ಗುಳಿಕಕಾಲ ನೋಡೋದಿಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಭಾಷಣದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನಾನು ಯಾವುದೇ ರಾಹುಕಾಲ, ಗುಳಿಕಕಾಲ ನೋಡುವುದಿಲ್ಲ, ನನಗೆ ಅದರ ಮೇಲೆ ನಂಬಿಕೆಯೂ ಇಲ್ಲ ಎಂದರು. ಯಾರಾದ್ರೂ ಯುಗಾದಿ- ಶಿವರಾತ್ರಿಯಂದು ಮಾಂಸ ತಿಂತಾರಾ ಎಂದು ಪ್ರಶ್ನಿಸಿದ ಅವರು ನಾನು ತಿಂತೇನೆ ಎಂದರು. ಹಬ್ಬ ಮನೇಲಿ ಮಾಡ್ತಾರೆ ನನ್ನಿಷ್ಟ ನಾನು ತಿನ್ನುತ್ತೇನೆ ಎಂದರು.

ಮೊದಲೆಲ್ಲಾ ಟವೆಲ್ ಹಾಕುತ್ತಿದ್ದೆ. ಬಗ್ಗಿದಾಗ ಅದು ಬಿದ್ದು ಹೋಗುತ್ತಿತ್ತು. ಹಾಗಾಗಿ ಶಲ್ಯ ಹಾಕೋಕೆ ಶುರು ಮಾಡಿದೆ. ಈಗ ನಾನು ಹಾಕಿರುವ ಶಲ್ಯ ಶಿವಕುಮಾರ್ ಅವರು ತಂದು ಕೊಟ್ಟಿದ್ದು, ಇದರ ಬೆಲೆ 13 ಸಾವಿರ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಈ ಬಾರಿ ರಾಹುಕಾಲ ಮುಗಿದ ಮೇಲೆ ಬಜೆಟ್ ಮಂಡಿಸಿದ್ರಿ.. ಮುಂದಿನ ಬಾರಿಯೂ ನೀವೇ ಬಜೆಟ್ ಮಂಡಿಸಬೇಕು ಎಂಬ ಉದ್ದೇಶದಿಂದ ಒಳ್ಳೆಯ ಸಮಯ ನೋಡಿ ಬಜೆಟ್ ಮಂಡಿಸಿದ್ರಿ ಎಂದು ಟಾಂಗ್ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಮ್ಮದು ಪ್ರಜಾಪ್ರಭುತ್ವ ಸರ್ಕಾರ, ಎಲ್ಲರ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕು, ಮನೇಲೂ ಹೇಳುದ್ರು. ಅದರ ಜೊತೆಗೆ ಅಧಿಕಾರಿಗಳು ಕೂಡ ರಾಹುಕಾಲದಲ್ಲಿ ಬಜೆಟ್ ಮಂಡಿಸೋದು ಬೇಡ ಎಂದು ಸಲಹೆ ನೀಡಿದ್ರು. ಹೀಗಾಗಿ ಅವರ ಸಲಹೆಯಂತೆ ನಡೆದುಕೊಂಡೆ ಎಂದು ಸಿದ್ದರಾಮಯ್ಯ ತಿಳಿಸಿದರು.

CM Siddaramaiah
ಕರ್ನಾಟಕ ಜನತೆಯ 10 ಕೋಟಿ ರೂ ತೆರಿಗೆ ಹಣವನ್ನು ಸಿದ್ದರಾಮಯ್ಯ ಕೇರಳದ ವಯನಾಡ್ ಕ್ಷೇತ್ರಕ್ಕೆ ಕೊಟ್ಟಿದ್ದಾರೆ: ಐಶ್ವರ್ಯಾ ಅನಂತ್ ಕುಮಾರ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com