ಡಿಸೆಂಬರ್ ನಲ್ಲಿ ಬೆಂಗಳೂರು ಹಬ್ಬ ಆಯೋಜನೆ: ಸಿಎಂ ಡಿ ಕೆ ಶಿವಕುಮಾರ್; Video

ಸಂಗೀತಕ್ಕೆ ಜಾತಿ, ಧರ್ಮ ಅಥವಾ ರಾಷ್ಟ್ರದ ಗಡಿಗಳಿಲ್ಲ. ಸಾಗರದ ಆಳವನ್ನು ಅಳೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸಂಗೀತಕ್ಕೂ ಯಾವುದೇ ಮಿತಿಗಳಿಲ್ಲ. ಸಂಗೀತವು ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲದು ಎಂದು ಹೇಳಿದರು.
CM D K Shivakumar in Chowdayya memorial Hall
ಬೆಂಗಳೂರಿನ ವೈಯಾಲಿಕಾವಲ್ ಚೌಡಯ್ಯ ಮೆಮೋರಿಯಲ್ ಸಭಾಂಗಣದಲ್ಲಿ ನಡೆದ ಚೌಡಯ್ಯ ಉತ್ಸವ - ಕೆ.ಕೆ. ಮೂರ್ತಿ ಸ್ಮಾರಕ ಸಂಗೀತೋತ್ಸವ ಹಾಗೂ ಅಕಾಡೆಮಿ ಆಫ್‌ ಮ್ಯೂಸಿಕ್ಸ್ ಚೌಡಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಿ ಕೆ ಶಿವಕುಮಾರ್ ಪಾಲ್ಗೊಂಡು, ಸಂಗೀತ ಕ್ಷೇತ್ರದ ಸಾಧಕರನ್ನು ಸನ್ಮಾನಿಸಿದರು.
Updated on: 

ಬೆಂಗಳೂರು: ಕರ್ನಾಟಕದ ಭಾಷೆ, ಸಂಸ್ಕೃತಿ, ಹಬ್ಬಗಳು ಹಾಗೂ ಸಾಂಪ್ರದಾಯಿಕ ಜಾತ್ರೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಡಿಸೆಂಬರ್‌ನಲ್ಲಿ 'ಬೆಂಗಳೂರು ಹಬ್ಬ' ಆಯೋಜಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಚೌಡಯ್ಯ ಸ್ಮಾರಕ ಭವನದಲ್ಲಿ ನಡೆದ ಚೌಡಯ್ಯ ಉತ್ಸವ, ಕೆ.ಕೆ. ಮೂರ್ತಿ ಸ್ಮರಣಾರ್ಥ ಸಂಗೀತೋತ್ಸವ ಹಾಗೂ ಅಕಾಡೆಮಿ ಆಫ್ ಮ್ಯೂಸಿಕ್ ವತಿಯಿಂದ ಆಯೋಜಿಸಿದ್ದ ಚೌಡಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕದ ಶ್ರೀಮಂತ ಸಂಗೀತ ಪರಂಪರೆಯನ್ನು ಸಂರಕ್ಷಿಸಿ ಸಂಭ್ರಮಿಸುವ ಅಗತ್ಯವಿದೆ ಎಂದು ಹೇಳಿದರು.

ಸಂಗೀತಕ್ಕೆ ಜಾತಿ, ಧರ್ಮ ಅಥವಾ ರಾಷ್ಟ್ರದ ಗಡಿಗಳಿಲ್ಲ. ಸಾಗರದ ಆಳವನ್ನು ಅಳೆಯಲು ಸಾಧ್ಯವಿಲ್ಲವೋ, ಅದೇ ರೀತಿ ಸಂಗೀತಕ್ಕೂ ಯಾವುದೇ ಮಿತಿಗಳಿಲ್ಲ. ಸಂಗೀತವು ಜನರನ್ನು ಕತ್ತಲಿನಿಂದ ಬೆಳಕಿನೆಡೆಗೆ ಕೊಂಡೊಯ್ಯಬಲ್ಲದು ಎಂದು ಹೇಳಿದರು.

CM D K Shivakumar in Chowdayya memorial Hall
ಬೆಂಗಳೂರು: ಈ ವರ್ಷ 'ಅಭಿವೃದ್ಧಿ ಹಬ್ಬ'ವಾಗಿ ಬದಲಾಗುತ್ತಿದೆ 'ಹಲಸೂರು ಹಬ್ಬ'!

ಪಿಟೀಲು ವಾದನದ ದಿಗ್ಗಜ ಚೌಡಯ್ಯ ಅವರನ್ನು ಸ್ಮರಿಸಿದ ಡಿ ಕೆ ಶಿವಕುಮಾರ್, ಕರ್ನಾಟಕದ ಸಾಂಸ್ಕೃತಿಕ ಪರಂಪರೆಯನ್ನು ಪೋಷಿಸಿದ ಮಹನೀಯರ ಕೊಡುಗೆಯನ್ನು ಸಂರಕ್ಷಿಸುವ ಸಾಮೂಹಿಕ ಹೊಣೆಗಾರಿಕೆ ಸಮಾಜದ ಮೇಲಿದೆ ಎಂದರು. ಸಂಗೀತವು ಕದಿಯಲಾಗದ ಅಥವಾ ನಾಶಪಡಿಸಲಾಗದ ಅಮೂಲ್ಯ ಸಂಪತ್ತು. “ನಮ್ಮ ಸಂಸ್ಕೃತಿಯೇ ರಾಷ್ಟ್ರದ ಸಂಪತ್ತು. ಅದನ್ನು ನಾವು ಸಂರಕ್ಷಿಸಬೇಕು. ಪ್ರತಿಯೊಬ್ಬ ಮಗು ಹಾಗೂ ವಿದ್ಯಾರ್ಥಿಯಲ್ಲೂ ಪ್ರತಿಭೆ ಮತ್ತು ಸಾಮರ್ಥ್ಯವಿದ್ದು, ಅದನ್ನು ಗುರುತಿಸಿ ಪೋಷಿಸಬೇಕು ಎಂದು ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಭಾರತ್ ಜೋಡೋ ಯುವಕ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X