HDK vs DKS ಸಂಘರ್ಷಗೆ ಸ್ವಾಮೀಜಿ ಎಂಟ್ರಿ: ಎಚ್‌ಡಿ ಕುಮಾರಸ್ವಾಮಿ ವಿರುದ್ಧ ನಿಶ್ಚಲಾನಂದನಾಥ ಸ್ವಾಮೀಜಿ ಕಿಡಿ!

ಕೆಂಪೇಗೌಡರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಅವರು ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ.
DK Shivakumar, Nishchalanandanatha Swamiji, HD Kumaraswamy
ಡಿಕೆ ಶಿವಕುಮಾರ್, ನಿಶ್ಚಲನಂದನಾಥ ಸ್ವಾಮೀಜಿ, ಎಚ್ ಡಿ ಕುಮಾರಸ್ವಾಮಿ
Updated on: 

ರಾಜ್ಯ ರಾಜಕಾರಣದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಪ್ರಸ್ತುತ ಒಕ್ಕಲಿಗ ಸಮುದಾಯದ ಅತ್ಯಂತ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದ್ದಾರೆ. ಅಲ್ಲದೆ ಹಲವು ದಶಕಗಳಿಂದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಮತ್ತು ಅವರ ಕುಟುಂಬವು ಈ ಸಮುದಾಯದ ಪ್ರಶ್ನಾತೀತ ನಾಯಕತ್ವ ಉಳಿಸಿಕೊಂಡು ಬಂದಿತ್ತು. ಹೀಗಾಗಿ ಸದ್ಯ ಎಚ್ ಡಿ ಕುಮಾರಸ್ವಾಮಿ ವರ್ಸಸ್ ಡಿಕೆ ಶಿವಕುಮಾರ್ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದೀಗ ಇಬ್ಬರ ಸಂಘರ್ಷ ಮಠದ ಅಂಗಳಕ್ಕೆ ತೆರಳಿದೆ.

ಕೆಂಪೇಗೌಡರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ನಿಶ್ಚಲಾನಂದ ಸ್ವಾಮೀಜಿ ಅವರು ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಿ ಕೆಲಸ ಮಾಡುತ್ತಿರುವಾಗ ತೊಂದರೆ ಕೊಡುತ್ತಿದ್ದಾರೆ. ಅವರ ಮನಸ್ಸಿಗೆ ನೋವುಂಟು ಮಾಡುವ ಕೆಲಸಗಳನ್ನು ಮಾಡುತ್ತಾರೆ. ಒಂದೇ ಸಮುದಾಯದವರಾಗಿ ಅವರನ್ನು ಫ್ರೀ ಆಗಿ ಕೆಲಸ ಮಾಡಲು ಬಿಡುತ್ತಿಲ್ಲ ಎಂದು ಹೇಳಿದರು.

DK Shivakumar, Nishchalanandanatha Swamiji, HD Kumaraswamy
ಹಿರಿಯೂರು ಉಪ ಚುನಾವಣೆ ಟಿಕೆಟ್ ಸರ್ಕಸ್: ಕುಮಾರಸ್ವಾಮಿ, ವಿಜಯೇಂದ್ರ ಜೊತೆ ಅಮಿತ್‌ ಶಾ ಪ್ರತ್ಯೇಕ ಸಭೆ; ಹೆಚ್ಚಿದ ಕುತೂಹಲ

ತಪ್ಪು ಮಾಡಿದರೆ ಟೀಕೆ ಮಾಡಿ ಸೂಚನೆ ಸಲಹೆ ಕೊಡಿ, ದೂರದೃಷ್ಟಿ ಇಟ್ಟುಕೊಂಡು ಒಂದಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಕೆಲಸ ಮಾಡಲಿಕ್ಕೆ ಸುಗಮದ ದಾರಿಯನ್ನು ಬಿಡಬೇಕು. ಹೊಸ ಹೊಸ ಯೋಜನೆಗಳಿಗೆ ನಾವು ಸೂಕ್ತ ಸಲಹೆಗಳನ್ನು ಕೊಡಬೇಕು. ಆಗ ಬೆಂಗಳೂರು ಬೆಳೆಸಲಿಕ್ಕೆ ಈ ಸಿಎಂ ಕೈಯಲ್ಲಿ ಕೂಡ ಸಾಧ್ಯವಾಗುತ್ತವೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X