ಉಡುಪಿ: ಮುಖ್ಯ ಭೂಭಾಗದಿಂದ ಪ್ರತ್ಯೇಕಗೊಂಡಿರುವ 'ಕುರು ದ್ವೀಪವಾಸಿಗಳು'; ಸ್ಥಳಾಂತರಗೊಳ್ಳಲು ನಿರ್ಧಾರ

ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕುರು ದ್ವೀಪದಲ್ಲಿ ಹಿಂದೆ ಸುಮಾರು 15 ಕುಟುಂಬಗಳು ವಾಸಿಸುತ್ತಿದ್ದವು. ಆದರೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನೇಕರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಬೇರೆಡೆಗೆ ತೆರಳಿದರು.
Residents say they risk their lives to commute in boats when the Sowparnika river is in full flow during the rainy season.
ಸೌಪರ್ಣಿಕಾ ನದಿಯಲ್ಲಿ ತೆರಳುತ್ತಿರುವ ನಿವಾಸಿಗಳು
Updated on: 

ಉಡುಪಿ: ಜಿಲ್ಲೆಯ ಬೈಂದೂರು ತಾಲೂಕಿನಲ್ಲಿರುವ ಜನಪ್ರಿಯ ಮರವಂತೆ ಕಡಲತೀರದ ಸಮೀಪವಿರುವ 'ಕುರು' ದ್ವೀಪದ ನಿವಾಸಿಗಳಿಗೆ, ಶಿಕ್ಷಣ, ಆರೋಗ್ಯ ಮತ್ತು ಇತರ ದೈನಂದಿನ ಸೇವೆಗಳು ಮುಖ್ಯ ಭೂಭಾಗದಲ್ಲಿವೆ, ಹೀಗಾಗಿ ಅಲ್ಲಿಗೆ ತಲುಪಲು ದೋಣಿಯನ್ನೇ ಅವಲಂಬಿಸಬೇಕಿದೆ.

ಸೂಕ್ತ ಸಾರಿಗೆ ಸೌಲಭ್ಯಗಳ ಕೊರತೆ ಮತ್ತು ಸೌಪರ್ಣಿಕಾ ನದಿಗೆ ಅಡ್ಡಲಾಗಿ ಸೇತುವೆ ಇಲ್ಲದಿರುವುದರಿಂದ, ಇಲ್ಲಿನ ನಿವಾಸಿಗಳು ನಿಧಾನವಾಗಿ ಮುಖ್ಯ ಭೂಭಾಗಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ.

ನಾಡ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕುರು ದ್ವೀಪದಲ್ಲಿ ಹಿಂದೆ ಸುಮಾರು 15 ಕುಟುಂಬಗಳು ವಾಸಿಸುತ್ತಿದ್ದವು. ಆದರೆ, ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಅನೇಕರು ತಮ್ಮ ಆಸ್ತಿಗಳನ್ನು ಮಾರಾಟ ಮಾಡಿ ಬೇರೆಡೆಗೆ ತೆರಳಿದರು. ಪ್ರಸ್ತುತ ಇಲ್ಲಿ ಕೇವಲ ಏಳು ಕುಟುಂಬಗಳು ವಾಸಿಸುತ್ತಿದ್ದು, ಒಟ್ಟು ಜನಸಂಖ್ಯೆ 34 ರಷ್ಟಿದೆ.

ಈ ದ್ವೀಪವು ನಾಡ ಗ್ರಾಮ ಪಂಚಾಯತ್‌ನಿಂದ ಸುಮಾರು 1.5 ಕಿ.ಮೀ ಮತ್ತು ಪಡುಕೋಣೆ ಹಾಗೂ ಮರವಂತೆಯಂತಹ ಮುಖ್ಯ ಭೂಭಾಗದ ಪ್ರದೇಶಗಳಿಂದ 1 ಕಿ.ಮೀ ದೂರದಲ್ಲಿದೆ. ಇಲ್ಲಿ ನಿವಾಸಿಗಳ ಸ್ವಂತ ಸಣ್ಣ ದೋಣಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾರಿಗೆ ವ್ಯವಸ್ಥೆ ಲಭ್ಯವಿಲ್ಲ. ಮುಖ್ಯ ಭೂಭಾಗಕ್ಕೆ ತಲುಪಲು ಅವರಿಗೆ 10 ರಿಂದ 15 ನಿಮಿಷಗಳ ಸಮಯ ಬೇಕಾಗುತ್ತದೆ.

Residents say they risk their lives to commute in boats when the Sowparnika river is in full flow during the rainy season.
AC ಇಲ್ಲ, GPS ಇಲ್ಲ, ಆದರೂ ಛಲ ಬಿಡಲಿಲ್ಲ: -14°C ಚಳಿಯಲ್ಲೂ 2001ರ ಮಾರುತಿ 800 ಓಡಾಟ; 11 ರಾಜ್ಯಗಳ ದಾಟಿ ಲಡಾಖ್ ತಲುಪಿದ ಕರಾವಳಿ ಯುವಕರು!

ಇಲ್ಲಿನ ನಿವಾಸಿಗಳ ಜೀವನವು ಅವರ ಸಣ್ಣ ದೋಣಿಗಳ ಸುತ್ತಲೇ ಸಾಗುತ್ತದೆ. ಮಕ್ಕಳು ಮತ್ತು ಯುವಕರು ಶಾಲೆ, ಕಾಲೇಜು ಹಾಗೂ ಕೆಲಸಕ್ಕೆ ಹೋಗಿ ಬರಲು ದೋಣಿಗಳನ್ನೇ ಬಳಸುತ್ತಾರೆ. ತುರ್ತು ಆರೋಗ್ಯ ಸಮಸ್ಯೆಗಳು ಎದುರಾದಾಗಲೂ, ದೋಣಿಗಳು ಮಾತ್ರವೇ ಹೊರಹೋಗಲು ಇರುವ ಏಕೈಕ ಮಾರ್ಗವಾಗಿದೆ.

ಹಿಂದೆ ಇಲ್ಲಿ ಎರಡು ಸರ್ಕಾರಿ ಶಾಲೆಗಳಿದ್ದವು, ಆದರೆ ವಿದ್ಯಾರ್ಥಿಗಳ ಸಂಖ್ಯೆ ಕ್ರಮೇಣ ಕಡಿಮೆಯಾದ ಕಾರಣ ಅವೆರಡನ್ನೂ ಮುಚ್ಚಲಾಯಿತು. ವಿದ್ಯಾರ್ಥಿಗಳ ಕೊರತೆಯಿಂದಾಗಿ ಕಾರ್ಯನಿರ್ವಹಿಸುತ್ತಿದ್ದ ಏಕೈಕ ಶಾಲೆಯನ್ನು 2002 ರಲ್ಲಿ ಮುಚ್ಚಲಾಯಿತು ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದರು. ದ್ವೀಪದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಸೌಲಭ್ಯಗಳಿವೆ.

ಇಲ್ಲಿನ ನಿವಾಸಿಗಳು ಕೃಷಿ ಮತ್ತು ಹೈನುಗಾರಿಕೆಯನ್ನು ಅವಲಂಬಿಸಿದ್ದು, ಭತ್ತ ಮತ್ತು ತರಕಾರಿಗಳನ್ನು ಬೆಳೆಯುತ್ತಾರೆ. "ಈ ದ್ವೀಪವು ಸುಮಾರು 40 ಎಕರೆ ವಿಸ್ತೀರ್ಣವನ್ನು ಹೊಂದಿದ್ದು, ಇಲ್ಲಿ ಸುಮಾರು 4,000 ತೆಂಗಿನ ಮರಗಳಿವೆ. ಕೆಲವು ಕುಟುಂಬಗಳು ಇನ್ನೂ ಭತ್ತದ ಕೃಷಿ ಮತ್ತು ಹೈನುಗಾರಿಕೆಯನ್ನು ಮುಂದುವರಿಸಿಕೊಂಡು ಬಂದಿವೆ. ದ್ವೀಪದ ಒಟ್ಟು ಜನಸಂಖ್ಯೆಯು 120 ರಿಂದ 34 ಕ್ಕೆ ಇಳಿದಿದೆ," ಎಂದು ದ್ವೀಪದ ನಿವಾಸಿಯೊಬ್ಬರು ಹೇಳಿದರು.

ಇಲ್ಲಿ ಮಾರಾಟವಾದ ಕೆಲವು ಆಸ್ತಿಗಳನ್ನು ಶಿವಮೊಗ್ಗದ ಬಿಜೆಪಿ ಸಂಸದ ರಾಘವೇಂದ್ರ ಅವರು ಖರೀದಿಸಿದ್ದಾರೆ ಎಂಬ ಮಾತುಗಳು ನಿವಾಸಿಗಳ ವಲಯದಲ್ಲಿ ಕೇಳಿಬರುತ್ತಿವೆ, ಬೈಂದೂರು ಅವರ ಲೋಕಸಭಾ ಕ್ಷೇತ್ರಕ್ಕೆ ಒಳಪಡುತ್ತದೆ. ಸಂಸದರು ಇಲ್ಲಿ ರೆಸಾರ್ಟ್ ನಿರ್ಮಿಸಲು ಅಥವಾ ಬೇರೆ ಯಾವುದೋ ಉದ್ದೇಶಕ್ಕಾಗಿ ದ್ವೀಪದಲ್ಲಿರುವ ಆಸ್ತಿಗಳನ್ನು ಖರೀದಿಸುತ್ತಿದ್ದಾರೆ ಎಂಬ ಮಾಹಿತಿ ಇದೆ ಎಂದು ತಮ್ಮ ಹೆಸರನ್ನು ಬಹಿರಂಗಪಡಿಸಲು ಇಚ್ಛಿಸದ ನಿವಾಸಿಯೊಬ್ಬರು ತಿಳಿಸಿದರು.

Residents say they risk their lives to commute in boats when the Sowparnika river is in full flow during the rainy season.
'ಕರಾವಳಿ, ಮಲೆನಾಡಿನ ಜನತೆಯ ಬಹುದಿನಗಳ ಕನಸು ನನಸು': ನಾಳೆಯಿಂದಲೇ ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ಸೇವೆ ಆರಂಭ!

ದೋಣಿಗಳಲ್ಲಿ ಸಂಚರಿಸುವಾಗ ನಾವು ಪ್ರಾಣಾಪಾಯದ ಭಯ: ಸ್ಥಳೀಯ ನಿವಾಸಿಗಳು

ಮಳೆಗಾಲದಲ್ಲಿ ಸೌಪರ್ಣಿಕಾ ನದಿ ತುಂಬಿ ಹರಿಯುವಾಗ, ದೋಣಿಗಳಲ್ಲಿ ಸಂಚರಿಸುವಾಗ ತಾವು ಪ್ರಾಣಾಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಾರೆ. ಸರ್ಕಾರವು ಒಂದು ಸೇತುವೆಯನ್ನು ನಿರ್ಮಿಸಿಕೊಡಬೇಕೆಂಬುದು ಅವರ ಏಕೈಕ ಬೇಡಿಕೆಯಾಗಿದೆ.

ನಮ್ಮ ದ್ವೀಪ ಮತ್ತು ಮುಖ್ಯ ಭೂಭಾಗದ ನಡುವೆ ಸುಗಮ ಸಂಪರ್ಕಕ್ಕಾಗಿ ಸೌಪರ್ಣಿಕಾ ನದಿಗೆ ಅಡ್ಡಲಾಗಿ ಸೇತುವೆಯನ್ನು ನಿರ್ಮಿಸುವಂತೆ ನಾವು ಸ್ಥಳೀಯ ಶಾಸಕರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ, ಆದರೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ಥಳೀಯ ನಿವಾಸಿ ರಾಮಚಂದ್ರ ಹೆಬ್ಬಾರ್ ತಿಳಿಸಿದ್ದಾರೆ.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ದ್ವೀಪವಾಸಿಗಳಿಗೆ ಮಾಹಿತಿ ನೀಡುವಾಗ, ದ್ವೀಪವನ್ನು ಸಂಪರ್ಕಿಸಲು ತೂಗು ಸೇತುವೆಯೊಂದನ್ನು ನಿರ್ಮಿಸುವ ಯೋಜನೆ ಇರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ದ್ವೀಪಕ್ಕೆ ಭೇಟಿ ನೀಡಿ ಸಮೀಕ್ಷೆ ನಡೆಸಿದ್ದಾರೆ. ಇಲ್ಲಿ ಸಾಮಾನ್ಯ ಸೇತುವೆಯನ್ನು ನಿರ್ಮಿಸುವುದು ಸಾಧ್ಯವಿಲ್ಲದ ಕಾರಣ, ತೂಗು ಸೇತುವೆಯನ್ನು ನಿರ್ಮಿಸುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಈ ವಿಭಾಗದ ಇತರ ಸುದ್ದಿ

No stories found.

X