ಚಿಕ್ಕಮಗಳೂರು: ದಸರಾ ರಜೆ ಮೋಜು; ಈಜು ಬಾರದಿದ್ದರೂ ಕರೆಗೆ ಇಳಿದಿದ್ದ ಮೂವರು ಬಾಲಕರು ನೀರುಪಾಲು, ಪೋಷಕರ ಆಕ್ರಂದನ!

ಚಿಕ್ಕಮಗಳೂರು ‌ತಾಲೂಕಿನ ಮರ್ಲೆ ಗ್ರಾಮದಲ್ಲಿ ದಸರಾ ರಜೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಮೃತರನ್ನು ಲಿಖಿತ್, ಭುವನ್ ಮತ್ತು ತರುಣ್ ಎಂದು ಗುರುತಿಸಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚಿಕ್ಕಮಗಳೂರು: ಚಿಕ್ಕಮಗಳೂರು ‌ತಾಲೂಕಿನ ಮರ್ಲೆ ಗ್ರಾಮದಲ್ಲಿ ದಸರಾ ರಜೆ ಹಿನ್ನೆಲೆಯಲ್ಲಿ ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವನ್ನಪ್ಪಿದ್ದಾರೆ. ಮೃತರನ್ನು 12 ವರ್ಷದ ಲಿಖಿತ್, ಭುವನ್ ಮತ್ತು ತರುಣ್ ಎಂದು ಗುರುತಿಸಲಾಗಿದೆ.

ಈಜು ಬಾರದಿದ್ದರೂ ಮೂವರು ಬಾಲಕರು ಕೆರೆಗೆ ಇಳಿದಿದ್ದರು. ಇನ್ನು ನೀರಿನ ಸೆಳೆತಕ್ಕೆ ಸಿಲುಕಿ ಮೂವರು ಮುಳುಗಿ ಸಾವನ್ನಪ್ಪಿದ್ದಾರೆ. ಸ್ಥಳೀಯರು ಕೆರೆಯಿಂದ ಮೃತ ದೇಹಗಳನ್ನು ಹೊರತೆಗೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸಂಗ್ರಹ ಚಿತ್ರ
ಬೆಂಗಳೂರಿನಲ್ಲಿ ವರುಣ ಆರ್ಭಟ: 17.3 ಮಿ.ಮೀ ಮಳೆಗೆ ಬೆಂಗಳೂರು ತತ್ತರ; ಹಲವೆಡೆ ಜಲಾವೃತ, ಮರಗಳು ಧರೆಗೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com