ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ ಕರಾವಳಿಯ ಜನತೆ, ಬ್ಯಾನರ್ ವೈರಲ್!

ಸ್ಟಿಂಗ್ ಆಪರೇಷನ್ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವೆ ವಾಗ್ಸಮರ ಮುಂದುವರೆದಿದೆ. ಈ ಮಧ್ಯೆ ಕರಾವಳಿ ಜನತೆ ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.
Priyank Kharge, HDK, Modi
ಪ್ರಿಯಾಂಕ್ ಖರ್ಗೆ, ಎಚ್ ಡಿ ಕುಮಾರಸ್ವಾಮಿ, ಮೋದಿ
Updated on: 

ಸ್ಟಿಂಗ್ ಆಪರೇಷನ್ ಕುರಿತಂತೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವೆ ವಾಗ್ಸಮರ ಮುಂದುವರೆದಿದೆ. ಈ ಮಧ್ಯೆ ಕರಾವಳಿ ಜನತೆ ಕುಮಾರಸ್ವಾಮಿ ಪರವಾಗಿ ಪ್ರಿಯಾಂಕ್ ಖರ್ಗೆಗೆ ಸವಾಲು ಹಾಕಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ನಿಮಗೆ ಹಾಕಿರುವ ಸವಾಲನ್ನು ಕೇವಲ ನೀವಲ್ಲ, ಕರಾವಳಿಯ ಜನತೆಯಾದ ನಾವು ನೇರವಾಗಿ ಸ್ವೀಕರಿಸಿದ್ದೇವೆ. ನೀವು ಕೇವಲ ಒಂದು ಕ್ಷೇತ್ರಕ್ಕೋ ಅಥವಾ ಒಂದು ಜಿಲ್ಲೆಗೋ ಸೀಮಿತರಾದ ನಾಯಕರಲ್ಲ. ಇಡೀ ನಾಡಿಗೆ ಬೇಕಾದ ಜನನಾಯಕರು ಎಂಬುದನ್ನು ಸಾಬೀತುಪಡಿಸಲು ಕರಾವಳಿಯ ಕನ್ನಡಿಗರು, ತುಳುವರು ಸಜ್ಜಾಗಿದ್ದಾರೆ ಎಂದು ಬ್ಯಾನರ್ ಹಾಕಲಾಗಿದೆ.

Priyank Kharge, HDK, Modi
ಇತಿಹಾಸದಲ್ಲೇ ಮೊದಲು: ಜಂಬೂಸವಾರಿಗೂ ಮುನ್ನ ನಡೆಯಬೇಕಿದ್ದ ವಜ್ರಮುಷ್ಠಿ ಕಾಳಗ ರದ್ದು! ಆಗಿದ್ದೇನು?

ಇಷ್ಟು ದಶಕಗಳ ಕಾಲ ಕರಾವಳಿ ಕೇವಲ ಭಾವನಾತ್ಮಕ ಮತ್ತು ರಾಜಕೀಯ ಜಿದ್ದಾಜಿದ್ದಿಗೆ ಮಾತ್ರ ಬಳಕೆಯಾಗುತ್ತಿದೆ. ಆದರೆ ಇಲ್ಲಿನ ಮೀನುಗಾರರ ಬವಣೆ, ಅಡಿಕೆ ಬೆಳೆಗಾರರ ಸಂಕಷ್ಟ, ಯುವಜನತೆಯ ನಿರುದ್ಯೋಗ ಮತ್ತು ನೈಜ ಅಭಿವೃದ್ಧಿಯ ವಿಚಾರಗಳು ಮೂಲೆಗುಂಪಾಗಿದೆ. ನಮಗೆ ಈ ಬೇಕಿರುವುದು ದ್ವೇಷದ ರಾಜಕಾರಮವಲ್ಲ, ಬದಲಾಗಿ ನಿಮ್ಮಂತಹ ಅಭಿವೃದ್ಧಿಪರ, ಸರ್ವರನ್ನೂ ಸಮನಾಗಿ ಕಾಣುವ, ದೂರದೃಷ್ಟಿಯುಳ್ಳ ನಾಯಕತ್ವದ ಸ್ಪರ್ಶ, ನಿಮ್ಮ ಜನಪರ ಆಡಳಿತದ ಶೈಲಿ ಕರಾವಳಿಯ ಮನೆಮನೆಗೂ ತಲುಪಿದೆ ಎಂದು ಬ್ಯಾನರ್ ನಲ್ಲಿ ಬರೆಯಲಾಗಿದೆ.

ಹಾಗಾಗಿ ಈ ಬಾರಿ ತಾವು ಕರಾವಳಿಯ ಯಾವುದಾದರೂ ಕ್ಷೇತ್ರದಿಂದ ಸ್ಪರ್ಧಿಸಿ ನಿಮ್ಮನ್ನು ಕರಾವಳಿಯ ಜನತೆಯಾದ ನಾವು ಗೆಲ್ಲಿಸುತ್ತೇವೆ ಎಂದು ಕರಾವಳಿ ಭಾಗದ ಜನತೆ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com