

ತುಮಕೂರು: ಎಂಎಲ್ಸಿ ಚುನಾವಣೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸೋಲಿಗೆ ಮಾಜಿ ಸಚಿವ ಕೆ.ಎನ್.ರಾಜಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ರಾಜಣ್ಣ, ನಾಲ್ಕು ಕ್ಷೇತ್ರಗಳ ಚುನಾವಣಾ ಫಲಿತಾಂಶ ನಮ್ಮಲ್ಲಿ ನಿರಾಸೆ ಮೂಡಿಸಿದೆ. ಇದು 35 ಅಸೆಂಬ್ಲಿ ಕ್ಷೇತ್ರ ಬರುತ್ತೆ. ಅದರಲ್ಲಿ 26 ಕ್ಷೇತ್ರದಲ್ಲಿ ಕಾಂಗ್ರೆಸ್ ಎಂಎಲ್ಎ ಗಳು ಬರ್ತಾರೆ. ನಮ್ಮವರು ಸರಿಯಾಗಿ ಕೆಲಸ ಮಾಡಿಲ್ಲ ಅಂತ ನನಗೆ ಅನ್ಸುತ್ತೆ. ಅದೇ ಪ್ರತಿ ಕ್ಷೇತ್ರದ ಸೋಲಿಗೆ ಪ್ರಮುಖ ಕಾರಣ ಎಂದಿದ್ದಾರೆ.
ಎಂಎಲ್ಎಗಳು ಆಯಾ ತಾಲೂಕು ಹೋಬಳಿಗಳಲ್ಲಿ ಆಯಾ ಲೀಡರ್ ಗಳು ಕೆಲಸ ಮಾಡಿಲ್ಲ. ಈ ಬಾರಿ ವೋಟರ್ ಲಿಸ್ಟ್ ನಲ್ಲಿ ಮತದಾರರ ನಂಬರ್ ಎಲ್ಲಾ ಇತ್ತು. ಅಷ್ಟು ಇದ್ರು ಸಹ ಕೆಲಸ ಮಾಡಿಲ್ಲ. 35 ಅಸೆಂಬ್ಲಿ ಕ್ಷೇತ್ರದಲ್ಲಿ 26 ಶಾಸಕರು ಇದ್ದು, ನಾವು ಸೋಲ್ತೀವಿ ಅಂದ್ರೆ ನಿಜಕ್ಕೂ ವಿಪರ್ಯಾಸ ಎಂದರು.
ಬ್ಯಾಲೆಟ್ ಪೇಪರ್ ವಿಚಾರವಾಗಿ ಮಾತನಾಡಿ, ಈ ಎಂಎಲ್ಸಿ ಚುನಾವಣೆ ಯಾವಾಗಲೂ ಬ್ಯಾಲೆಟ್ ಪೇಪರ್ನಲ್ಲೇ ನಡೆಯೋದು. ಪ್ರಾಶಸ್ತ್ಯ ಮತ ಇರೋದ್ರಿಂದ ಬ್ಯಾಲೆಟ್ ಪೇಪರ್ ಇರಲೇಬೇಕು ಎಂದು ಹೇಳಿದರು.
ಸಿದ್ದರಾಮಯ್ಯ ಅವರನ್ನ ಸೈಡ್ಲೈನ್ ಮಾಡಿದ್ರಿಂದ ಈ ಸೋಲಾಯ್ತು ಎಂಬ ಚರ್ಚೆ ಕುರಿತು ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಕಾಂಗ್ರೆಸ್ನ ಆಸ್ತಿ. ಅವರ ಅನುಪಸ್ಥಿತಿಯಿಂದ ಏನಾಗ್ತಿದೆ ನೋಡೋಣ.
ಈ ಬಾರಿ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಬರ್ತಿದೆ, ಅದರಲ್ಲಿ ಗೊತ್ತಾಗುತ್ತೆ ಎಲ್ಲ. ಅವರ ಸೈಡ್ಲೈನ್ನಿಂದ ಪರಿಣಾಮ ಬೀರಿದೆ ಅಂತನೂ ಹೇಳೋಕೆ ಆಗಲ್ಲ. ಬೀರಿಲ್ಲ ಅಂತನೂ ಹೇಳೋಕೆ ಆಗಲ್ಲ ಎಂದರು.