

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧದ ಸ್ಟಿಂಗ್ ಆಪರೇಷನ್ನಲ್ಲಿ ಬರುವ ಎಲ್ಲ ವಿಚಾರಗಳು ಕೇವಲ ಕಟ್ಟುಕಥೆ ಎಂದು ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಗುರುವಾರ ಹೇಳಿದೆ. ಈ ಮೂಲಕ ಪ್ರಕರಣದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸಿಸಿಬಿ ಕ್ಲೀನ್ ಚಿಟ್ ನೀಡಿದೆ.
ತಮ್ಮ ತಂದೆಗೆ ಸಿಸಿಬಿ ಕ್ಲೀನ್ ಚಿಟ್ ನೀಡಿರುವ ಬಗ್ಗೆ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು, ಸತ್ಯಕ್ಕೆ ಜಯ ಸಿಕ್ಕಿದೆ. ವಿಡಿಯೋ ಮಾಡಿದವರು ಕೂಡ ಇದು ಫೇಕ್ ಎಂದು ಹೇಳಿದ್ದರು ಎಂದರು.
ಇದೊಂದು ಕಟ್ಟುಕಟ್ಟು ಕಥೆ ಎಂದು ಸ್ಟಿಂಗ್ ಮಾಡಿದವೆರೇ ಹೇಳಿದ್ದಾರೆ. ಈ ವಿಡಿಯೋನಲ್ಲಿ ಮುಸ್ಲಿಂ ಮಹಿಳೆ ಮಾತಾಡಿದ್ದು ಸಹ ಫೇಕ್ ಎಂದು ಗೊತ್ತಾಗಿದೆ. ಸ್ಟಿಂಗ್ ಆಪರೇಷನ್ ಮಾಡಿದವರದ್ದು ಎಷ್ಟು ತಪ್ಪೋ, ಆ ವಿಡಿಯೋ ಹಂಚಿದವರದ್ದು ಅಷ್ಟೇ ತಪ್ಪಿದೆ. ಹೀಗಾಗಿ ಈ ಕೆಲಸವನ್ನು ಮಾಡಿದವರೂ ಯಾರೇ ಆಗಿರಲೀ, ಅದು ದೆಹಲಿಯ ಮಂತ್ರಿಗಳೇ ಆಗಿರಲೀ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಅವರನ್ನು ಜೈಲಿಗಟ್ಟಬೇಕು ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಅವರು ಪರೋಕ್ಷವಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದಾರೆ.
ಇದು ಫೇಕ್
ಇನ್ನು ಸಿಸಿಬಿ ಪ್ರಕಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಚಲುವರಾಯಸ್ವಾಮಿ, ಸಿದ್ದರಾಮಯ್ಯರಂತಹ ಹಿರಿಯ ನಾಯಕರ ಮೇಲೆ ಫೇಕ್ ವಿಡಿಯೋ ಮಾಡಿದ್ದು ತಪ್ಪು. ಇದೊಂದು ಫೇಕ್ ವಿಡಿಯೋ ಎಂದು ಮೊದಲೇ ತಿಳಿದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ನಾವು ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಆದರೆ, ದೆಹಲಿಯ ಬುದ್ದಿ ಜೀವಿಗಳು ಪೋನ್ ಎಲ್ಲಿ ಖರೀದಿ ಮಾಡಿದ್ದಾರೆ? ಖರೀದಿ ಮಾಡಿ ಯಾರ ಮನೆಗೆ ತೆಗೆದುಕೊಂಡು ಹೋಗಿದ್ದಾರೆ? ಯಾರು ಅಪ್ ಸ್ಕ್ಯಾಂಡ್ ಆಗಿದಾರೆ? ಎನ್ನುವುದು ಎಲ್ಲವೂ ಗೊತ್ತಿದೆ ಎಂದರು.