ನಾನೇ ಸರ್ಕಾರ, ನಾನು ಹೇಳಿದ್ದೇ ಫೈನಲ್‌: ಹಾಸನಾಂಬ ಜಾತ್ರೆಯಲ್ಲಿ ಶಿವಲಿಂಗೇಗೌಡ ಆಕ್ರೋಶ

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಚಾರಿತ್ರಿಕ ಪ್ರಸಿದ್ಧ ಹಾಸನಾಂಬೆ ದೇವಾಲಯದ ಲಾಡು ಪ್ರಸಾದದ ದರ ಹೆಚ್ಚಳಕ್ಕೆ ಸಚಿವ ಕೆ.ಎಮ್. ಶಿವಲಿಂಗೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
KM shivalingegowda
ಕೆ.ಎಂ ಶಿವಲಿಂಗೇಗೌಡ
Updated on: 

ಹಾಸನ: ಹಾಸನಾಂಬ ಜಾತ್ರೆಯಲ್ಲಿ 100 ರೂ.ಗೆ 2 ಲಾಡು ಪ್ರಸಾದ ಮಾರಾಟ ಮಾಡುತ್ತಿದ್ದವರ ವಿರುದ್ಧ ಸಚಿವ ಕೆ.ಎಂ ಶಿವಲಿಂಗೇಗೌಡ ಗರಂ ಆಗಿದ್ದಾರೆ.

ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಚಾರಿತ್ರಿಕ ಪ್ರಸಿದ್ಧ ಹಾಸನಾಂಬೆ ದೇವಾಲಯದ ಲಾಡು ಪ್ರಸಾದದ ದರ ಹೆಚ್ಚಳಕ್ಕೆ ಸಚಿವ ಕೆ.ಎಮ್. ಶಿವಲಿಂಗೇಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಾದದ ದರವನ್ನು 100 ರೂಪಾಯಿಗೆ ನಿಗದಿಪಡಿಸಿದ್ದ ಜಿಲ್ಲಾಡಳಿತ ಹಾಗೂ ದೇವಾಲಯದ ಅಧಿಕಾರಿಗಳ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ಸಚಿವರು, ತಕ್ಷಣವೇ ದರವನ್ನು 60 ರೂಪಾಯಿಗೆ ಇಳಿಸಿ ಸಾರ್ವಜನಿಕರಿಗೆ ಮಾರಾಟ ಮಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. 60 ರೂ.ಗೆ 2 ಲಾಡು ಕೊಡ್ಬೇಕು, ನಾನೇ ಸರ್ಕಾರ, ನಾನು ಹೇಳಿದ ಮೇಲೆ ಫೈನಲ್‌ ಎಂದು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ದೇವಾಲಯದ ಸುತ್ತಮುತ್ತ ಪರಿಶೀಲನೆ ನಡೆಸುವಾಗ 100 ರೂ.ಗೆ ಲಾಡು ಮಾರಾಟ ಮಾಡುವ ವಿಚಾರ ಗೊತ್ತಾಗಿದೆ. ಈ ವೇಳೆ, ಟೆಂಡರ್‌ ಪಡೆದ ಇಸ್ಕಾನ್‌ ಸಂಸ್ಥೆಗೆ ಕರೆ ಮಾಡಿ, ನಾನು ಮಿನಿಸ್ಟರ್ ಮಾತನಾಡುತ್ತಿದ್ದೇನೆ. 60 ರೂ.ಗೆ ಎರಡು ಲಾಡುಗಳನ್ನು ಮಾರಾಟ ಮಾಡಬೇಕು. 1000 ರೂ. 300 ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ದರ್ಶನ ಮಾಡಿದವರಿಗೆ ಉಚಿತವಾಗಿ ಲಾಡು ನೀಡಬೇಕು ಎಂದು ಖಡಕ್ ಸೂಚನೆ ನೀಡಿದ್ದಾರೆ.

KM shivalingegowda
'ನಾವು ದಲಿತರು ಅಂತ ಹೀಗೆ ಮಾಡೋದಾ ಸರ್?': ಬಾಲಕಿಯ ಪ್ರಶ್ನೆಗೆ ಸಚಿವ ಶಿವಲಿಂಗೇ ಗೌಡ ಗರಂ; Video

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವ ಹಿನ್ನೆಲೆಯಲ್ಲಿ ದೇವಾಲಯದ ಆದಾಯದ ದೃಷ್ಟಿಯಿಂದ ಲಾಡು ಪ್ರಸಾದವನ್ನು 100 ರೂಪಾಯಿಗೆ ಮಾರಾಟ ಮಾಡಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಲಾಡು ಪ್ರಸಾದ ಮಾರಾಟ ಮಾಡಿ ದೇವಾಲಯದ ಆದಾಯವನ್ನು ಹೆಚ್ಚಿಸುವ ಯಾವುದೇ ಅಗತ್ಯವಿಲ್ಲ' ಎಂದು ಗರಂ ಆದ ಸಚಿವರು, ತಕ್ಷಣವೇ ದರ ಬದಲಾವಣೆ ಮಾಡುವಂತೆ ಆದೇಶಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X