ಅರಣ್ಯದಂಚಿನವರು ಅಕ್ರಮ ಬಂದೂಕುಗಳನ್ನು ಸರ್ಕಾರಕ್ಕೆ ಒಪ್ಪಿಸಲು ನ.1 ಡೆಡ್ ಲೈನ್: ಇಲ್ಲದಿದ್ರೆ ಕ್ರಮ- ಸಿಎಂ ಡಿಕೆ ಶಿವಕುಮಾರ್

ಆತ್ಮರಕ್ಷಣೆಗಾಗಿ ಅನಧಿಕೃತ ಬಂದೂಕುಗಳನ್ನು ಹೊಂದಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಅವುಗಳನ್ನು ಒಪ್ಪಿಸಲು ನವೆಂಬರ್ 1ರವರೆಗೆ ಸಮಯಾವಕಾಶವಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.
CM DK Shivakumar
ಸಿಎಂ ಡಿಕೆ ಶಿವಕುಮಾರ್
Updated on

ಬೆಂಗಳೂರು: ಬಂದೂಕುಗಳ ನಿಯಂತ್ರಣ ಮತ್ತು ಅಕ್ರಮ ಶಸ್ತ್ರಾಸ್ತ್ರಗಳ ಬಳಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಅರಣ್ಯದ ಅಂಚಿನಲ್ಲಿ ವಾಸಿಸುವ ಜನರು ತಮ್ಮ ಬಳಿಯಿರುವ ಪರವಾನಗಿ ರಹಿತ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಒಂದು ಬಾರಿಯ ಅವಕಾಶವನ್ನು ಶುಕ್ರವಾರ ಘೋಷಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಆತ್ಮರಕ್ಷಣೆಗಾಗಿ ಅನಧಿಕೃತ ಬಂದೂಕುಗಳನ್ನು ಹೊಂದಿರುವ ವ್ಯಕ್ತಿಗಳು ಸ್ವಯಂಪ್ರೇರಿತವಾಗಿ ಅವುಗಳನ್ನು ಒಪ್ಪಿಸಲು ನವೆಂಬರ್ 1ರವರೆಗೆ ಸಮಯಾವಕಾಶವಿದೆ ಎಂದು ತಿಳಿಸಿದರು.

"ಅರಣ್ಯ ಪ್ರದೇಶಗಳ ಸಮೀಪ ವಾಸಿಸುವ ಜನರಿಗೆ ತಮ್ಮ ಪರವಾನಗಿ ರಹಿತ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲು ಅವಕಾಶ ನೀಡಲು ನಾನು ಮತ್ತು ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ನಿರ್ಧರಿಸಿದ್ದೇವೆ. ಒಂದು ವೇಳೆ ಆತ್ಮರಕ್ಷಣೆಗಾಗಿ ಅವುಗಳನ್ನು ಇಟ್ಟುಕೊಂಡಿದ್ದರೆ, ಅವುಗಳನ್ನು ಒಪ್ಪಿಸಲು ನವೆಂಬರ್ 1ರವರೆಗೆ ಸಮಯ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.

ಸ್ಥಳೀಯರ ನಿಜವಾದ ಭದ್ರತಾ ಅಗತ್ಯಗಳನ್ನು ಕಾನೂನುಬದ್ಧವಾಗಿ ಪರಿಗಣಿಸಲಾಗುವುದು ಎಂದು ಭರವಸೆ ನೀಡಿದ ಡಿ.ಕೆ. ಶಿವಕುಮಾರ್, ಅನಧಿಕೃತ ಬಂದೂಕುಗಳನ್ನು ಒಪ್ಪಿಸುವ ಅರ್ಹ ವ್ಯಕ್ತಿಗಳು ಸೂಕ್ತ ಕಾನೂನುಬದ್ಧ ಪರವಾನಗಿಗಾಗಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ ಎಂದು ಖಚಿತಪಡಿಸಿದರು.

ಪೊಲೀಸ್ ಮಹಾನಿರ್ದೇಶಕರಿಗೂ (DG) ಈ ಬಗ್ಗೆ ತಿಳಿಸುತ್ತೇನೆ. ಎರಡೂ ಇಲಾಖೆಗಳು ಜಂಟಿ ಸಭೆ ನಡೆಸಲಿವೆ. ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿರುವ ಬಂದೂಕುಗಳನ್ನು ಒಪ್ಪಿಸುವಂತೆ ಆ ಜನರಿಗೆ ಮನವಿ ಮಾಡುತ್ತೇನೆ. ಅರ್ಹರಿಗೆ ನಾವು ಖಂಡಿತವಾಗಿಯೂ ಪರವಾನಗಿ ನೀಡುತ್ತೇವೆ. ಅವರ ಮನೆಗಳಲ್ಲಿ ಯಾವುದೇ ಪರವಾನಗಿ ರಹಿತ ಶಸ್ತ್ರಾಸ್ತ್ರಗಳು ಇರುವುದನ್ನು ನಾನು ಬಯಸುವುದಿಲ್ಲ ಎಂದರು.

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಅವಧಿಯಲ್ಲಿ ನಡೆದಿದ್ದ ಇಂತಹದೇ ಸಾಮೂಹಿಕ ಶಸ್ತ್ರಾಸ್ತ್ರ ಒಪ್ಪಿಸುವ ಅಭಿಯಾನವನ್ನು (ಅದರಲ್ಲಿ ಸಾವಿರಾರು ಅಕ್ರಮ ಶಸ್ತ್ರಾಸ್ತ್ರಗಳನ್ನು ಒಪ್ಪಿಸಲಾಗಿತ್ತು) ಉಲ್ಲೇಖಿಸಿದ ಸಿಎಂ, ಮನೆಗಳಲ್ಲಿರುವ ಪರಿಶೀಲನೆಗೆ ಒಳಪಡದ ಶಸ್ತ್ರಾಸ್ತ್ರಗಳನ್ನು ತೆರವುಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ಒತ್ತಿ ಹೇಳಿದರು.

CM DK Shivakumar
ಜಾರಕಿಹೊಳಿ ಏನು ತಪ್ಪು ಮಾಡಿಲ್ಲ, ಕಾನೂನು ಚೌಕಟ್ಟಿನಲ್ಲಿ ವ್ಯವಹಾರ ಮಾಡಿದ್ದಾರೆ- ಸಿಎಂ ಡಿಕೆ ಶಿವಕುಮಾರ್

ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಸಾವಿರಾರು ಪರವಾನಗಿ ರಹಿತ ಬಂದೂಕುಗಳನ್ನು ಒಪ್ಪಿಸಲಾಗಿದ್ದು ನನಗೆ ನೆನಪಿದೆ. ಹಾಗಾಗಿ ಈಗಲೂ ನಾನು ಅವರೆಲ್ಲರಿಗೂ ಮನವಿ ಮಾಡುತ್ತೇನೆ. ನವೆಂಬರ್ 1ರೊಳಗೆ ಅವರು ತಮ್ಮ ಬಂದೂಕುಗಳನ್ನು ಒಪ್ಪಿಸಿ ಹೊಸ ಪರವಾನಗಿಗಾಗಿ ಅರ್ಜಿ ಸಲ್ಲಿಸಬೇಕು, ನಾವು ಅದನ್ನು ಪರಿಶೀಲಿಸುತ್ತೇವೆ. ನವೆಂಬರ್ 1ರ ನಂತರ, ನಾವು ಅವುಗಳನ್ನು ಪತ್ತೆಹಚ್ಚಿದರೆ ಅಥವಾ ಟ್ರ್ಯಾಕ್ ಮಾಡಿದರೆ ನಮಗೆ ವಿಷಯ ತಿಳಿಯುತ್ತದೆ. ಹಳ್ಳಿಗಳಲ್ಲಿನ ಮಾಹಿತಿಯೂ ನಮಗೆ ಸಿಗುತ್ತದೆ. ನಮ್ಮದೇ ಆದ ಮಾಹಿತಿ ಮೂಲಗಳಿರುತ್ತವೆ ಮತ್ತು ಆಗ ಅವರು ಗಂಭೀರ ಆರೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com