ಇಡಿ ಗೆ ಯಾವುದೇ ಸವಾಲು ಹಾಕಿಲ್ಲ, ಮಾಧ್ಯಮಗಳು ನನ್ನ ಹೇಳಿಕೆ ತಿರುಚಿವೆ- ಸಚಿವ ಸತೀಶ್ ಜಾರಕಿಹೊಳಿ

ತಾವು ಕೇಂದ್ರ ತನಿಖಾ ಸಂಸ್ಥೆಗೆ ಎಂದಿಗೂ ಸವಾಲು ಹಾಕಿಲ್ಲ ಎಂದು ಹೇಳಿದ ಅವರು, ತಮ್ಮ ಹೇಳಿಕೆಗಳನ್ನು ನಿಖರವಾಗಿ ವರದಿ ಮಾಡುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು.
PWD Minister Satish Jarkiholi
ಸಚಿವ ಸತೀಶ್ ಜಾರಕಿಹೊಳಿ
Updated on

ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ನಡೆಸುತ್ತಿರುವ ತನಿಖೆಯ ಕುರಿತು ತಾವು ನೀಡಿದ ಹೇಳಿಕೆಗಳ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಶನಿವಾರ ತಳ್ಳಿಹಾಕಿದ್ದಾರೆ.

ತಾವು ಕೇಂದ್ರ ತನಿಖಾ ಸಂಸ್ಥೆಗೆ ಎಂದಿಗೂ ಸವಾಲು ಹಾಕಿಲ್ಲ ಎಂದು ಹೇಳಿದ ಅವರು, ತಮ್ಮ ಹೇಳಿಕೆಗಳನ್ನು ನಿಖರವಾಗಿ ವರದಿ ಮಾಡುವಂತೆ ಮಾಧ್ಯಮಗಳಿಗೆ ಮನವಿ ಮಾಡಿದರು. "ನಾನು ಇಡಿಗೆ ಯಾಕೆ ಸವಾಲು ಹಾಕಲಿ? ಅದು ಒಂದು ತನಿಖಾ ಸಂಸ್ಥೆ," ಎಂದು ಜಾರಕಿಹೊಳಿ ಸುದ್ದಿಗಾರರಿಗೆ ತಿಳಿಸಿದರು.

ಇಡಿಗೆ ಸವಾಲು ಹಾಕಿದ್ದಾರೆ ಎಂದು ಬಿಂಬಿಸುವ ಶೀರ್ಷಿಕೆಯಿದ್ದ ವರದಿಯೊಂದನ್ನು ನೇರವಾಗಿ ಪ್ರಸ್ತಾಪಿಸಿದರು. ಆ ರೀತಿಯ ವ್ಯಾಖ್ಯಾನ ತಪ್ಪಾಗಿದೆ ಎಂದು ಹೇಳಿದ ಅವರು, ಪ್ರಭಾವ ಬೀರಲು ಹೇಳಿಕೆಗಳನ್ನು ಬದಲಾಯಿಸುವ ಬದಲು, "ನಾನು ವಾಸ್ತವವಾಗಿ ಏನು ಹೇಳಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿ ಎಂದು ಮಾಧ್ಯಮಗಳಿಗೆ ಹೇಳಿದರು.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ, ಸೆಪ್ಟೆಂಬರ್ 9 ಮತ್ತು 10 ರಂದು ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೋಲ್ಕತ್ತಾದಲ್ಲಿ ಜಾರಕಿಹೊಳಿ, ಅವರ ಕುಟುಂಬ ಸದಸ್ಯರು ಮತ್ತು ಆಪ್ತರಿಗೆ ಸೇರಿದ 21 ಸ್ಥಳಗಳಲ್ಲಿ ಇಡಿ ಶೋಧ ನಡೆಸಿದ ನಂತರ ಅವರಿಂದ ಈ ಸ್ಪಷ್ಟನೆ ಬಂದಿದೆ. ಘೋಷಿಸದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯಾಪಾರ ಸಂಪರ್ಕಗಳು ಮತ್ತು ಲೋಕೋಪಯೋಗಿ ಇಲಾಖೆಯ ಗುತ್ತಿಗೆಗಳಲ್ಲಿನ ಅಕ್ರಮಗಳ ಆರೋಪಗಳನ್ನು ಸಂಸ್ಥೆ ಮಾಡಿದ್ದು, ದಾಳಿಯ ವೇಳೆ ಸುಮಾರು 3.45 ಕೋಟಿ ರೂ. ನಗದು ವಶಪಡಿಸಿಕೊಂಡಿರುವುದಾಗಿ ತಿಳಿಸಿದೆ.

PWD Minister Satish Jarkiholi
ED ದೂರಿನ ಹಿಂದೆ ಬಿಜೆಪಿಯ ಕೈವಾಡವಿದೆ: ಚಿನ್ನದ ಗಣಿಗಾರಿಕೆ ಕುರಿತ ಆರೋಪ ಸಾಬೀತುಪಡಿಸಲಿ- ಸತೀಶ್ ಜಾರಕಿಹೊಳಿ ಸವಾಲು!

ಇಡಿಯ ತನಿಖಾ ಫಲಿತಾಂಶಗಳು ಕೇವಲ "ಸಂದೇಹ" ಮತ್ತು "ಆರೋಪ"ಗಳಷ್ಟೇ ಆಗಿದ್ದು, ತಮ್ಮ ವಿರುದ್ಧ ಏನನ್ನೂ ನಿರ್ಣಾಯಕವಾಗಿ ಸಾಬೀತುಪಡಿಸಲಾಗಿಲ್ಲ ಎಂದು ಜಾರಕಿಹೊಳಿ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದಾರೆ. ಇಡಿ ದಾಳಿಯಿಂದ ನನಗೆ ಯಾವುದೇ ಹಾನಿಯಾಗಲ್ಲ. ಇಡಿ ನೋಟಿಸ್ ನೀಡಿದರೆ, ನಾನು ಉತ್ತರಿಸುತ್ತೇನೆ," ಎಂದು ಹೇಳಿದ ಅವರು, ಅಧಿಕೃತವಾಗಿ ನೋಟಿಸ್ ಜಾರಿಯಾದ ನಂತರ ದಾಖಲೆಗಳೊಂದಿಗೆ ಪ್ರತಿಯೊಂದು ಅಂಶಕ್ಕೂ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಸಂಪುಟ ಸಹೋದ್ಯೋಗಿಯನ್ನು ಬಹಿರಂಗವಾಗಿ ಬೆಂಬಲಿಸಿದ್ದು, ಈ ಶೋಧ ಕಾರ್ಯಾಚರಣೆಗಳನ್ನು "ಕೇವಲ ರಾಜಕೀಯ" ಪ್ರೇರಿತ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಬಿಜೆಪಿ ನಾಯಕರಿಗಿಂತ ಕಾಂಗ್ರೆಸ್ ನಾಯಕರ ವಿರುದ್ಧವೇ ಕೇಂದ್ರ ತನಿಖಾ ಸಂಸ್ಥೆಗಳು ಹೆಚ್ಚು ಆಕ್ರಮಣಕಾರಿಯಾಗಿ ಕ್ರಮ ಕೈಗೊಳ್ಳುತ್ತವೆ ಎಂದು ಜಾರಕಿಹೊಳಿ ಆರೋಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com