

ತುಮಕೂರು: ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ವಕ್ತಿತ್ವ ವಜ್ರಕ್ಕಿಂತ ಕಠಿಣವಾಗಿದ್ದರೂ, ಹೃದಯದಿಂದ ಮೃದು ಸ್ವಭಾವದವರು ಎಂದು ನೂಣನವಿನಕೆರೆಯ ಶಿವಯೋಗಿಶ್ವರ್ ಶ್ರೀಗಳು ಶುಕ್ರವಾರ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಮಾಧ್ಯಮಗಳೊಂದೆ ಮಾತನಾಡಿದ ಶಿವಯೋಗಿಶ್ವರ್ ಶ್ರೀಗಳು, ಡಿ.ಕೆ ಶಿವಕುಮಾರ್ ಅವರು ಈ ಮಠದ ಆರ್ಶಿವಾದದಿಂದ ಬೆಳೆದಿದ್ದಾರೆ. ತಮಗೆ ಕಷ್ಟಗಳು ಬಂದ ಸಮಯದಲ್ಲೂ ಮಠದ ಆರ್ಶಿವಾದ ಪಡೆದಿದ್ದಾರೆ. ಅವರು ಮಠದ ಮಗನಾಗಿ ಬಂದಿದ್ದಾರೆ ಎಂದರು.
ಡಿಕೆ ಶಿವಕುಮಾರ್ ಅವರು ತಮ್ಮ ಹಿಂದಿನ ವ್ಯಕ್ತಿತ್ವವನ್ನು ಬದಲಿಸಿಕೊಂಡು ಎಲ್ಲರ ಆತ್ಮೀಯ ನಾಯಕರಾಗಿ ಮಿಂಚುತ್ತಿದ್ದಾರೆ. ತಾಯಿ ವಾತ್ಸಲ್ಯದಂತೆ ರಾಜ್ಯದ ಎಲ್ಲಾ ಜನರನ್ನು ಪ್ರೀತಿಸುತ್ತಿದ್ದಾರೆ. ಅವರು ಇನ್ನಷ್ಟು ಉನ್ನತ ಸ್ಥಾನಕ್ಕೇರುತ್ತಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಮಠ ಎಂದಿಗೂ ರಾಜಕೀಯವಾಗಿ ಯಾರಿಗೂ ಸಲಹೆ ನೀಡಿಲ್ಲ. ರಾಜಕೀಯದಲ್ಲಿ ಧರ್ಮ ಭಾಗಿಯಾಗುದಿಲ್ಲ. ನಾವು ಮಾನವ ಸೇವೆ ಮಾಡುವ ಸಲಹೆ ಮಾತ್ರ ನೀಡುತ್ತೇವೆ. ಡಿಕೆಶಿ ಸರಳ ಸಜ್ಜಿನಿಕೆಯ ಮಾತೃ ಹೃದಯಿ ವ್ಯಕ್ತಿಯಾಗಿದ್ದಾರೆ ಎಂದು ಶ್ರೀಗಳು ಹೇಳಿದ್ದಾರೆ.