
ಅವಳು ಅವನ ಕಾಲಿಗೆ ಬಿದ್ದಳು; 'ನನ್ನ ಮದ್ವೆ ಆಗು'. ಅವನು ದೊಡ್ಡದೊಂದು ಡ್ರಂ ತೋರಿಸಿ, 'ನೋಡು ನಿನ್ನ ಮದ್ವೆ ಆಗಲೇಬೇಕಂತಿದ್ದರೆ ಈ ಡ್ರಮ್ಮಿನ ಪೂರ್ತಿ ಇಬ್ಬನಿಯನ್ನು ಶೇಖರಿಸಿ ತಗೊಂಡು ಬಾ' ಎಂದ. ಅವಳು ಒಪ್ಪಿದಳು. ಆದರೆ, ಎರಡು ವರುಷದಿಂದ ಚಳಿಗಾಲವೇ ಬರಲಿಲ್ಲ. ಅವಳಿದ್ದ ಪ್ರದೇಶದಲ್ಲಿ ಇಬ್ಬನಿಯೂ ಬೀಳಲಿಲ್ಲ. ಭಗವಂತನಲ್ಲಿ ಪ್ರಾರ್ಥಿಸಿದಳು; 'ಇನ್ನೆರಡು ವರುಷ ಚಳಿಗಾಲವೇ ಆಗಿ, ದಿನಪೂರ್ತಿ ಇಬ್ಬನಿ ಸುರಿದು ಈ ಡ್ರಮ್ ತುಂಬಲಿ'. ಭಗವಂತ ತಥಾಸ್ತು ಎಂದ. ಆ ಎರಡು ವರುಷದ ಚಳಿಯಲ್ಲಿ ಅವಳ ಹುಡುಗನಿಗೆ ಅಸ್ತಮಾ ಬಂದು ಸತ್ತೇ ಹೋದ!
Advertisement