ನಾನೊಂದು ಬೀಜ
ನಿಗೂಢಗಳ ಕಣಜ
ಇಳೆಯ ಅಪ್ಪುಗೆ ಪಡೆದು
ಭೂ ಸಾರವನು ಕುಡಿದು
ಹುದುಗಿರುವ ಸತ್ವ ಮೆರೆದು
ಉತ್ಸಾಹದ ಮೊಳಕೆಯೊಡೆದು॥
ಸಸಿ ಗಿಡ ಮರವಾಗಿ
ಮೊಗ್ಗು ಹೂ ಹಣ್ಣಾಗಿ
ಭೂ ರಮೆಗೆ ಮೆರುಗಾಗಿ ಬಾಗಿ
ಕಳೆದದ್ದು ಒಂದಾಗಿ, ಪಡೆದದ್ದು ನೂರಾಗಿ॥
ವಿವರಗಳ ಬಿಡದಂತೆ ಹಿಡಿದು
ಸಂಕ್ಷಿಪ್ತತೆಯ ರೂಪ ತಳೆದು
ಅನಂತತೆಯ ಬಸಿರಲ್ಲಿ ಪೊರೆದು
ಪ್ರಶ್ನೆಯಲೆ ಉತ್ತರವ ಒಗಟಾಗಿ ಬೆಸೆದು॥
-ಕೆ. ಹರೀಶ್
Advertisement