ಕೋಪ: ಬೇರೆಯವರ ತಪ್ಪಿಗೆ ನಮಗೆ ನಾವು ಕೊಟ್ಟುಕೊಳ್ಳುವ ಶಿಕ್ಷೆ.
ತಮಗಾಗದ ಜನರಿಂದ ಹಾಗೂ ಸಮಸ್ಯೆಗಳಿಂದ ದೂರ ಓಡುವುದನ್ನು ವ್ಯಾಯಾಮ ಎಂದು ಪರಿಗಣಿಸೋದಾಗಿದ್ರೆ ಜಗತ್ತಿನಲ್ಲಿ ಬೊಜ್ಜಿನ ಸಮಸ್ಯೆ ಇರ್ತಿರಲಿಲ್ಲ.
ಭವಿಷ್ಯದಲ್ಲಿ ಚಿನ್ನದ ರೇಟ್ ಜಾಸ್ತಿ ಆಗತ್ತೆ ಅಂತ ಕೊಂಡಿಟ್ಟುಕೊಳ್ಳೋ ಹೆಂಗಸರು, ಗಂಡಸರಿಗೆ ಸಿಗರೇಟು ಮದ್ಯವನ್ನು ಯಾಕೆ ಸ್ಟಾಕ್ ಇಟ್ಕೊಳೋಕೆ ಬಿಡೋಲ್ಲ?
ಡೆಲಿವರಿ ಮಾಡೋವ್ರೆಲ್ಲ ಡಾಕ್ಟರ್ ಅಲ್ಲ. ಉದಾಹರಣೆ: ಪಿಜ್ಜಾಬಾಯ್, ಪೋಸ್ಟ್‌ಮ್ಯಾನ್, ಕೊರಿಯರ್ ಬಾಯ್.
ತಲೆ ಕೆಡಿಸೋ ಲಾಜಿಕ್: ಗಂಡ ನಗ್‌ನಗ್ತಾ ಇದಾನೆ ಅಂದ್ರೆ ಹೆಂಡ್ತಿ ಖುಷಿಯಾಗಿದ್ದಾಳೆ ಅಂತ ಅರ್ಥ. ಹೆಂಡ್ತಿ ನಗ್‌ನಗ್ತಾ ಇದಾಳೆ ಅಂದ್ರೆ ಗಂಡ ಬೇಜಾರಾಗಿದಾನೆ ಅಂತ ಅರ್ಥ!
ಪ್ರಪಂಚದ ವಿಸ್ಮಯ: ಅರ್ಧ ಜಗತ್ತು ಡಯಟಿಂಗ್ ಮಾಡ್ತಿದೆ, ಇನ್ನರ್ಧ ಜಗತ್ತು ಹಸಿವಿನಿಂದ ಉಪವಾಸವಿದೆ.
Advertisement