ಈ ವಿಶ್ವವು ಅಣುಗಳೇ ಕಟ್ಟಿದ ಅರಮನೆ. ಯಾವತ್ತೂ ಆ ಅಣುಗಳು ಪರಸ್ಪರ ಬಿಟ್ಟಿರುವ ಬಗ್ಗೆ ಯೋಚಿಸುವುದಿಲ್ಲ. ದೂರ ಸರಿಯುವ ಮಾತಾಡುವುದಿಲ್ಲ. ಮುನಿಸಿಕೊಂಡಂತೆ ವರ್ತಿಸುವುದಿಲ್ಲ. ಇದೇ ಒಗ್ಗಟ್ಟಿನಲ್ಲೇ ಬದುಕಿ ಅಂತ ಭಗವಂತ ವಿಶ್ವದ ಈ ಮೂಲದಲ್ಲೇ ಹೇಳಿದ್ದಾನೆ. ಈ ಪ್ರಕ್ರಿಯೆಗೆ 'ಸ್ನೇಹ' ಅಂತಲೂ ಹೆಸರಿಟ್ಟಿದ್ದಾನೆ. ಆದರೆ, ನಾವೀ ಗುಣವನ್ನು ಎಲ್ಲಿ ಕೈಚೆಲ್ಲಿದೆವು? 'ವಿಶ್ವ ಸ್ನೇಹತ್ವದ ದಿನ'ವಾಗಿರುವ ಇಂದು ನಮ್ಮೊಳಗೊಂದು ಪುಟ್ಟ ಆತ್ಮವಿಮರ್ಶೆಯ ಪ್ರಶ್ನೆ. ಕಡೇಪಕ್ಷ ಈ ಪ್ರಕೃತಿಯನ್ನು ಕಂಡಾದರೂ ಆ ಸ್ನೇಹವನ್ನು ನಮ್ಮೊಳಗೆ ಹಸಿರಾಗಿಸಿಕೊಳ್ಳೋಣ. ನಾವು ಆ ಆನೆಯಷ್ಟು ದೊಡ್ಡವರೋ, ಆ ಹಕ್ಕಿಯಷ್ಟು ಚಿಕ್ಕವರೋ ಗೊತ್ತಿಲ್ಲ. ಆದರೆ ನಮ್ಮ ಪಯಣದಲ್ಲಿ ಒಟ್ಟಿಗೆ ಹೆಜ್ಜೆ ಮೂಡಿದರೆ ಹೇಗೆ? ಇದು ಈ ದಿನದ ಸಂಕಲ್ಪ. ಇಡೀ ವರುಷದ ಸಲ್ಲಾಪ.
ಅಂದಹಾಗೆ, ಈ ರೇಖಾಮುದ್ರೆಯನ್ನು ಬಿಡಿಸಿದವನು ಅಮೆರಿಕದ ಹೆಸರಾಂತ ಕಲಾವಿದ ಎರಿಕ್ ಫ್ಯಾನ್.
Advertisement