ವಿ. ಹೇಮಂತ್‌ಕುಮಾರ್, ಬೆಂಗಳೂರು.
ಹೆಂಡತಿಯು ಗಂಡನನ್ನು ಹೊಗಳುವುದು ಯಾವಾಗ?
-ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿದ್ದಾಗ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಮನೆ ಒಳಗಿನ ವೈರಿಗೂ ಮನೆ ಹೊರಗಿನ ವೈರಿಗೂ ವ್ಯತ್ಯಾಸವೇನು?
-ಒಳಗಿನ ವೈರಿ ಕುಯ್ತಾನೆ, ಹೊರಗಿನ ವೈರಿ ಎದುರುಗಡೆಯಿಂದ ಬೈಯ್ತಾನೆ!
ಸ್ವಾಮಿ ನಿರ್ಮಲಾ, ಉಡಿಗಾಲ
ನೀನು ಮುಂದಿನ ಜನ್ಮದಲ್ಲೂ ಮನುಷ್ಯನಾಗಿ ಹುಟ್ಟೋಕೆ ಇಷ್ಟಪಡ್ತೀಯ ಅಣ್ಣಯ್ಯ?
-ಇಷ್ಟವೇನೋ ಇದೆ. ಆದರೆ ಇದೇ ಕಡೆ ಜನ್ಮ ಅಂತ ಕನಸು ಬೀಳ್ತಿದೆ!
ಓಂ ಚನ್ನೇಶ್ ಅರಬಿಳಚಿ ಕ್ಯಾಂಪ್, ಭದ್ರಾವತಿ
ಬಿಗ್‌ಬಾಸ್ ಮನೆಗೆ ನಿಮ್ಮನ್ನು ಕರೆದರೆ ಹೋಗುವಿರಾ?
-ನನಗೆ ಅಷ್ಟು 'ಖ್ಯಾತಿ' ಮತ್ತು 'ಕುಖ್ಯಾತಿ' ಎರಡೂ ಇಲ್ಲವಲ್ಲ!
ಬೋ.ಪಾ. ವೆಂಕಟೇಶ್, ಬೋಧನ ಹೊಸಹಳ್ಳಿ.
ಫೇಸ್ ಬುಕ್‌ಗೂ ಹೆಣ್ಣಿನ ಅಂತರಾಳಕ್ಕೂ ವ್ಯತ್ಯಾಸವೇನು?
-ಪೇಸ್ ಬುಕ್ ಓಪನ್, ಹೆಣ್ಣಿನ ಅಂತರಾಳ ಕ್ಲೋಸ್ಡ್!
ಕೆ. ಶ್ರೀನಿವಾಸರಾವ್, ಹರಪನಹಳ್ಳಿ.
ಕೊಟ್ಟೋನ್ ಕೋಡಂಗಿ, ಈಸ್ಕೊಂಡೋನು ಈರಭದ್ರ, ಹಾಗಾದರೆ ನಡುವೆ ಕಡ್ಡಿ ಆಡಿಸೋನು?
-ಅವನೇ ಶ್ರೀಮಂತ!
ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
ತೀರ್ಥಯಾತ್ರೆಗೂ ಪಾದಯಾತ್ರೆಗೂ ವ್ಯತ್ಯಾಸವೇನು?
-ತೀರ್ಥಯಾತ್ರೆಯಿಂದ ಪುಣ್ಯ ಬರುತ್ತೆ. ಪಾದಯಾತ್ರೆಯಿಂದ ಕೆಲವರಿಗೆ ಅಧಿಕಾರ ಬರುತ್ತೆ! <
ಪಿ.ಜೆ. ರಾಘವೇಂದ್ರ, ಮೈಸೂರು.
ನಿದ್ರಿಸುವವರನ್ನು ಎಬ್ಬಿಸಲು ಸದನದಲ್ಲಿ ಸಿಬ್ಬಂಧಿಗಳನ್ನು ನೇಮಿಸಬಾರದೇಕೆ?
-ಎಬ್ಬಿಸಿದ್ರೆ ಅವರ ಶಾಪಕ್ಕೆ ಗುರಿಯಾದ್ರೆ ಕಷ್ಟ!
-ಎಸ್.ವಿ. ಪದ್ಮನಾಭ
Advertisement