ಮುಂಬೈ: ಶಿವಸೇನಾದ ಮುಖ್ಯಸ್ಥ ಉದ್ದವ್ ಠಾಕ್ರೆ ಅವರು ಸಹೋದರ ಸಂಬಂಧಿ ರಾಜ್ ಠಾಕ್ರೆ ಅವರೊಡನೆ ಇರುವ ಭಿನ್ನಭಿಪ್ರಾಯಕ್ಕೆ ನಾಂದಿ ಹಾಡಿ, ಕೈಜೋಡಿಸುವ ಸುಳಿವು ನೀಡಿದ್ದಾರೆ.
ಬುಧವಾರ ಪತ್ರಕರ್ತರೊಬ್ಬರು ನಡೆಸಿದ ಸಂದರ್ಶನದಲ್ಲಿ ಉದ್ಧವ್ ಠಾಕ್ರೆ, ರಾಜ್ ಠಾಕ್ರೆ ಅವರಿಗೆ ಮೈತ್ರಿಯಾಗಲು ಇಚ್ಚೆಯಿದ್ದರೆ ಅವರಿಗೆ ಸುಸ್ವಾಗತ ಎಂದು ಪರೋಕ್ಷವಾಗಿ ಶಿವಸೇನಾಗೆ ಆಹ್ವಾನವಿತ್ತಿದ್ದಾರೆ.
ಈ ಸಂಬಂಧ ರಾಜ್ ಠಾಕ್ರೆ ಮತ್ತು ನಾವು ಪರಸ್ಪರ ಮಾತಕತೆ ನಡೆಸಿ ನಿರ್ಧಾರ ತೆಗೆದು ಕೊಳ್ಳಬೇಕಾಗಿದೆ ಎಂದು ಉದ್ದವ್ ಠಾಕ್ರೆ ಹೇಳಿದ್ದಾರೆ.
2006ರಲ್ಲಿ ರಾಜ್ ಠಾಕ್ರೆ ಅವರು ಶಿವಸೇನಾ ತೊರೆದು ಮಹರಾಷ್ಟ್ರ ನವನಿರ್ಮಾಣ ಸೇನಾ ಸಂಘಟನೆ ಸ್ಥಾಪಿಸಿದರು. ಶಿವಸೇನಾ ಮತ್ತು ಮಹಾರಾಷ್ಟ್ರ ನವನಿರ್ಮಾಣ್ ಸೇನಾ ಸಂಘಟನೆಗಳು ಮೈತ್ರಿಯಾದರೆ ಎನ್‌ಸಿಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಭಯ ಹುಟ್ಟುತ್ತದೆ. ಮಹಾರಾಷ್ಟ್ರದಲ್ಲಿ ಎರಡು ಪಕ್ಷಗಳು ಪ್ರಬಲವಾಗಿದ್ದವು. ಎರಡು ಸಂಘಟನೆಗಳು ಮೈತ್ರಿಯಾಗುವುದರಿಂದ ರಾಜಕೀಯ ಪಕ್ಷಗಳಿಗೆ ಚುನಾವಣೆ ಬಗ್ಗೆ ಆತಂಕ ಹುಟ್ಟಲಿದೆ ಎಂದು ಮೂಲಗಳು ತಿಳಿಸಿವೆ.
Advertisement