
ಕೊಲ್ಕತಾ: ಖ್ಯಾತ ಉದ್ಯಮಿ ರತನ್ ಟಾಟಾ ಅವರಿಗೆ ಬುದ್ದಿ ಸ್ಥಿಮಿತದಲ್ಲಿಲ್ಲ ಎಂದು ಪಶ್ಚಿಮ ಬಂಗಾಳದ ವಿತ್ತ ಸಚಿವ ಅಮಿತ್ ಮಿತ್ರ ಅವರು ಗುರುವಾರ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾಭಿವೃದ್ಧಿಯಾಗುತ್ತಿಲ್ಲ ಎಂಬ ರತನ್ ಟಾಟಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಚಿವ ಅಮಿತ್ ಮಿತ್ರ ಅವರು, ಟಾಟಾ ಅವರಿಗೆ ವಯಸ್ಸಾಗಿದ್ದು, ಬುದ್ದಿ ಸ್ಥಿಮಿತ ಕಳೆದುಕೊಂಡಿದ್ದಾರೆ ಹೀಗಾಗಿ ತಮಗೆ ತಿಳಿಯದಂತೆ ಮಾಡನಾಡುತ್ತಿದ್ದಾರೆ ಎಂದರು.
ಟಾಟಾ ಗ್ರೂಪ್‌ನ ಟಿಸಿಎಸ್ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಹೆಚ್ಚುವರಿಯಾಗಿ 20 ಸಾವಿರ ಹುದ್ದೆಗಳನ್ನು ರೂಪಿಸುತ್ತಿದೆ. ಅಲ್ಲದೆ ಅನಿಲ್ ಅಂಬಾನಿ ಗ್ರೂಪ್ ಹಾಗೂ ಇಮಾಮಿ ಸಂಸ್ಥೆ ಸೇರಿ ರಾಜ್ಯದಲ್ಲಿ ಸಿಮೆಂಟ್ ಘಟಕಗಳನ್ನು ತೆರೆಯಲು ಮುಂದಾಗಿದೆ. ಹೀಗಿದ್ದರು ಟಾಟಾ ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ಅಭಿವೃದ್ಧಿಯಾಗುತ್ತಿಲ್ಲ ಎಂದು ಹೇಳಿರುವುದು ಆಸ್ಯಾಸ್ಪದವಾಗಿದೆ ಎಂದರು.
ನಿನ್ನೆ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರತನ್ ಟಾಟಾ ಅವರು ಪಶ್ಚಿಮ ಬಂಗಾಳದಲ್ಲಿ ಕೈಗಾರಿಕಾ ಅಭಿವೃದ್ಧಿ ಹೊಂದುತ್ತಿರುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ ಎಂದು ಹೇಳಿದ್ದರು.
Advertisement