
ಜಮ್ಮು: ಜೀನಾಬ್ ನದಿ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋಗಿ ಪಾಕಿಸ್ತಾನ ಗಡಿಯೊಳಗೆ ಬಂಧಿತನಾಗಿರುವ ಯೋಧನನ್ನು ಪಾಕ್ ಸೈನಿಕರು ಶುಕ್ರವಾರ ಭಾರತಕ್ಕೆ ಹಸ್ತಾಂತರಿಸಲಿದ್ದಾರೆ.
ಬುಧವಾರ ಗಡಿ ಭದ್ರತಾ ಪಡೆಯ ಯೋಧ ಸತ್ಯಶೀಲ್ ಯಾದವ್ ಅವರು ಪ್ರವಾಹದಲ್ಲಿ ಸಿಲುಕಿ ಪಾಕ್ ಪಡೆಗಳಿಂದ ಬಂಧನಕ್ಕೊಳಗಾಗಿದ್ದರು.
ಪಾಕಿಸ್ತಾನಿ ರೇಂಜರ್‌ಗಳು ಮತ್ತು ಬಿಎಸ್‌ಎಫ್ ನಡುವೆ ನಡೆದ ಕಂಪೆನಿ ಕಮಾಂಡರ್ ಮಟ್ಟದ ಸಭೆಯಲ್ಲಿ ಪಾಕಿಸ್ತಾನ ಯೋಧನನ್ನು ಹಸ್ತಾಂತರಿಸುವ ಭರವಸೆ ನೀಡಿದೆ.
ಕೆಲ ಔಪಚಾರಿಕ ನಿಯಮಗಳ ಪಾಲನೆಯ ಬಳಿಕ ಮಧ್ಯಾಹ್ನ 3 ಗಂಟೆಯ ವೇಳೆಗೆ ಯೋಧನ ಹಸ್ತಾಂತರ ನಡೆಯಲಿದೆ ಎಂದು ತಿಳಿದು ಬಂದಿದೆ.
Advertisement