
ನವದೆಹಲಿ: ಮಿಜೋರಾಂ ರಾಜ್ಯಪಾಲ ಹುದ್ದೆಯಿಂದ ಕಮಲಾ ಬೇನಿವಾಲ್ ವಜಾ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಅಂಗೀಕರಿಸಿದ್ದು, ಈ ಕುರಿತು ಸರ್ಕಾರ ಒದಗಿಸಿರುವ ಸಾಕ್ಷ್ಯಾಧಾರಗಳಿಂದ ತೃಪ್ತಿ ತಂದಿದೆ ಎಂದರು.
ಕಮಲಾ ಬೇನಿವಾಲ ವಜಾ ಕುರಿತಂತೆ ಕೇಂದ್ರ ಸರ್ಕಾರ ಒದಗಿಸಿರುವ ಸಾಕ್ಷ್ಯಾಧಾರಗಳಿಂದ ತೃಪ್ತಿ ತಂದಿದ್ದು, ಈ ನಿಟ್ಟಿನಲ್ಲಿ ಕೇಂದ್ರದ ಕ್ರಮವನ್ನು ಅಂಗೀಕರಿಸಿರುವುದಾಗಿ ಪತ್ರದ ಮೂಲಕ ರಾಷ್ಟ್ರಪತಿಗಳು ತಿಳಿಸಿದ್ದಾರೆ.
ಕಮಲಾ ಬೇನಿವಾಲ್ ವಿರುದ್ಧ ಗುರುತರವಾದ ಆರೋಪಗಳು ಇರುವುದರಿಂದ ಅವರನ್ನು ಹುದ್ದೆಯಿಂದ ವಜಾ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪತಿಗಳಿಗೆ ಮನವರಿಗೆ ಮಾಡಿಕೊಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನರೇಂದ್ರ ಮೋದಿ ಅವರು ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದಾಗ ಅವರನ್ನು ಎದುರು ಹಾಕಿಕೊಂಡಿದ್ದಕ್ಕೆ ಬೇನಿವಾಲ್‌ರನ್ನು ವಜಾ ಮಾಡಲಾಗಿದೆ ಈ ಮೂಲಕ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ನ ಆರೋಪ.
ಬೇನಿವಾಲ್ ವಿರುದ್ಧದ ಆರೋಪ:
ಗುಜರಾತ್‌ನ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಬೇನಿವಾಲ್ ಆಗಾಗ ಹುಟ್ಟೂರು ಜೈಪುರಕ್ಕೆ ಪ್ರಯಾಣಿಸುತ್ತಿದ್ದರು. ಇದು ಖಾಸಗಿ ಭೇಟಿಯಾಗಿದ್ದರು ಅದಕ್ಕಾಗಿ ರಾಜ್ಯ ಸರ್ಕಾರ ವಿಮಾನವನ್ನು ಬಳಸಿದ್ದರು. ಜತೆಗೆ, ರಾಜಭವನದ ದಾಖಲೆಯಲ್ಲಿ ಅದನ್ನು ಅಧಿಕೃತ ಭೇಟಿ ಎಂದೇ ನಮೂದಿಸಿದ್ದರು. ಈ ಮೂಲಕ ತೆರಿಗೆದಾರರ ರು. 1.5 ಕೋಟಿ ದುಂದು ವೆಚ್ಚ ಮಾಡಿದ್ದರು.
ರಾಜಸ್ಥಾನದಲ್ಲಿ ನಕಲಿ ಅಫಿಡವಿಟ್ ಸಲ್ಲಿಸಿ ಆಸ್ತಿ ಮಾಡಿಕೊಂಡಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗಿದ್ದಾಗಲೂ ತಾವು ಪ್ರತಿ ದಿನ 14 ರಿಂದ 16 ಗಂಟೆ ಕಾಲ ಉಳುಮೆ ಮಾಡುತ್ತಿದ್ದುದಾಗಿ ದಾಖಲೆ ಸಲ್ಲಿಸಿದ್ದರು.
Advertisement