
ಬಾಗಲಕೋಟೆ: ಕೊಳವೆ ಬಾವಿಗೆ ಬಿದ್ದ ತಿಮ್ಮಣ್ಣನನ್ನು ಮೇಲೆತ್ತುವ ಕಾರ್ಯಾಚರಣೆಗೆ ಮತ್ತೆ ಚಾಲನೆ ನೀಡಲಾಗಿದೆ.
ಕಳೆದ ಆರು ದಿನಗಳಿಂದ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ನಿನ್ನೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇಂದು ಅಡ್ವೋಕೇಟ್ ಜನರಲ್ ಅವರ ಸೂಚನೆ ಮೇರೆಗೆ ತಿಮ್ಮಣ್ಣನ ಮೇಲೆತ್ತುವ ಕಾರ್ಯಾಚರಣೆ ಮತ್ತೆ ಚಾಲನೆ ಸಿಕ್ಕಿದೆ. ಮುಂದೆ ಕಾನೂನು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂಬ ಕಾರಣಕ್ಕಾಗಿ ಬಾಲಕನ ಶವ ಮೇಲಕ್ಕೆತ್ತಲು ಜಿಲ್ಲಾಡಳಿತ ಮುಂದಾಗಿದೆ.
ಯಾವುದೇ ತಂತ್ರಜ್ಞಾನವನ್ನು ಬಳಸಿ ಬಾಲಕನ ಶವವನ್ನು ಮೇಲಕ್ಕೇತ್ತಲೇಬೇಕು ಸೂಚನೆ ಮೇರೆಗೆ ಮತ್ತೆ ಕಾರ್ಯಾಚರಣೆ ಕೈಗೊಂಡಿರುವ ರಕ್ಷಣಾ ಸಿಬ್ಬಂದಿ ಬೋರ್‌ವೆಲ್‌ಗೆ ಮತ್ತೆ ಕ್ಯಾಮರ ಇಳಿಸಿ ಪರಿಶೀಲನೆ ನಡೆಸಿದ್ದಾರೆ. ಕಾರ್ಯಾಚರಣೆಗಾಗಿ ತಮಿಳುನಾಡಿನ ರೋಬೋತಜ್ಞ ಮಣಿಕಂಠನ್ ಹಾಗೂ ಮಹಾರಾಷ್ಟ್ರದ ಸಾಂಗಿಯ ಹೆಲ್ಪ್‌ಲೈನ್‌ನ ರಕ್ಷಣಾ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ ಎಂದು ಸಚಿವ ಎಸ್.ಆರ್. ಪಾಟೀಲ್ ಹೇಳಿದ್ದಾರೆ.
160 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕ ತಿಮ್ಮಣ್ಣ ಈಗಾಗಲೇ ಸಾವನ್ನಪ್ಪಿದ್ದು, ಕೊಳವೆಯಿಂದ ಶವದ ವಾಸನೆ ಬರುತ್ತಿದೆ ಎಂದು ತಜ್ಞರು ಮತ್ತು ವೈದ್ಯರು ಅಭಿಪ್ರಾಯಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಢಳಿತ ಕಾರ್ಯಾಚರಣೆಯನ್ನು ನಿನ್ನೆ ಮುಕ್ತಾಯಗೊಳಿಸಿತ್ತು.
Advertisement