
ಬೆಳಗಾವಿ: ನಿಂತಿದ್ದ ಲಾರಿಗೆ ಕ್ರೂಸರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ತವನಿಧಿಘಾಟ್ ಬಳಿ ನಡೆದಿದೆ.
ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದ ಬಳಿ ಅಪಘಾತ ಸಂಭವಿಸಿದ್ದು, ಕ್ರೂಸರ್‌ನಲ್ಲಿದ್ದ ಮೂವರ ದುರ್ಮರಣವಾಗಿದೆ.
ಮೃತರೆಲ್ಲರೂ ಮಹಾರಾಷ್ಟ್ರದ ತೇರಣಿ ಗ್ರಾಮದವರಾಗಿದ್ದು, ವಿಶಾಲಗಡದಿಂದ ತೇರಣಿಗೆ ವಾಪಸ್ಸಾಗುವಾಗುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಚಾಲಕ ಭೀಮರಾವ್ ದಿಂಡಲಾಕಪ್ಪ(25), ದಿನೇಶ್ ದೇಸಾಯಿ(24) ಮತ್ತು ಕಿರಣ್ ಚೌಗಲೆ(24) ಎಂದು ಗುರುತಿಸಲಾಗಿದೆ.
Advertisement