

ಲೇಖಕಿ: ಪ್ರೊ. ಶ್ರೀವಿದ್ಯಾ ಸುಬ್ರಮಣ್ಯಂ, ಶೈಕ್ಷಣಿಕ ಅಭಿವೃದ್ಧಿ ಮತ್ತು ವಿದ್ಯಾರ್ಥಿ ಮಾರ್ಗದರ್ಶನ ತಜ್ಞೆ
ಪರೀಕ್ಷೆ ಎಂದರೆ ವಿದ್ಯಾರ್ಥಿಗಳ ಜೀವನದಲ್ಲಿ ಸಾಮಾನ್ಯವಾಗಿ ಕಾಣಿಸುವ ಒಂದು ಹಂತ. ಆದರೆ 10ನೇ ತರಗತಿಯ ಪರೀಕ್ಷೆ ಮಾತ್ರ ಸಾಮಾನ್ಯವಾಗಿಲ್ಲ; ಅದು ಭವಿಷ್ಯಕ್ಕೆ ದಾರಿತೋರುವ ಮೊದಲ ಮಹತ್ವದ ಮೆಟ್ಟಿಲು. ಈ ಹಂತದಲ್ಲಿ ಕೆಲವರು ಹೆದರುತ್ತಾರೆ, ಕೆಲವರು ಅತಿಯಾಗಿ ಒತ್ತಡಕ್ಕೆ ಒಳಗಾಗುತ್ತಾರೆ ಮತ್ತು ಕೆಲವರು ಆತ್ಮವಿಶ್ವಾಸದಿಂದ ಮುನ್ನಡೆಯುತ್ತಾರೆ. ಆದರೆ ಯಶಸ್ವಿಯಾಗುವವರಲ್ಲಿ ಒಂದು ಸಾಮಾನ್ಯ ಗುಣ ಅಂದರೆ – ಗಟ್ಟಿಯಾದ ಮನಸ್ಸು.
1. ಗಟ್ಟಿ ಮನಸ್ಸು – ಯಶಸ್ಸಿನ ಮೊದಲ ಹೆಜ್ಜೆ
ಪರೀಕ್ಷೆ ದೊಡ್ಡದು ಅಲ್ಲ; ಅದನ್ನು ನಾವು ಹೇಗೆ ನೋಡುತ್ತೇವೆ ಎಂಬುದು ದೊಡ್ಡದು. ಮನಸ್ಸನ್ನು ಗಟ್ಟಿ ಮಾಡಿಕೊಂಡ ವಿದ್ಯಾರ್ಥಿ ಯಾವ ಸಮಸ್ಯೆ ಬಂದರೂ ಹಿಂದೆ ಸರಿಯದೆ ಪ್ರಯತ್ನಿಸುತ್ತಾನೆ. ಆತ್ಮವಿಶ್ವಾಸದಿಂದ ಮಾಡಿದ ಓದು ಯಾವಾಗಲೂ ಉತ್ತಮ ಫಲಿತಾಂಶ ತರುತ್ತದೆ.
2. ಸಮಯ ನಿರ್ವಹಣೆ – ಸಿದ್ಧತೆಯ ಹೃದಯ
ಶಿಸ್ತು ಮತ್ತು ಸಮಯಪಾಲನೆ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಅತ್ಯಂತ ಅಗತ್ಯ. ದಿನದ ವೇಳಾಪಟ್ಟಿ ಮಾಡಿಕೊಂಡು ಪ್ರತಿದಿನ ಓದುವ ಅಭ್ಯಾಸ ಬೆಳೆಸಿದರೆ ಅತಿ ಕಠಿಣವಾದ ವಿಷಯವೂ ಸುಲಭವಾಗುತ್ತದೆ.
ಹೆಚ್ಚು ಕಷ್ಟವಾಗುವ ವಿಷಯಗಳಿಗೆ ಹೆಚ್ಚಿನ ಸಮಯ
ಪುನರಾವರ್ತನೆಗೆ ದಿನನಿತ್ಯ ಸಮಯ
ವಾರಕ್ಕೊಮ್ಮೆ ಮಾದರಿ ಪ್ರಶ್ನೆಪತ್ರಿಕೆ ಪರಿಹರಿಸುವ ಅಭ್ಯಾಸ
3. ಸತತ ಅಭ್ಯಾಸ – ಆತ್ಮವಿಶ್ವಾಸದ ಮೂಲ
ಒಮ್ಮೆ ಓದುವುದರಿಂದ ವಿಷಯ ಪೂರ್ತಿ ಬರುವುದಿಲ್ಲ. ಪುನರಾವರ್ತನೆಯ ಮೂಲಕ ಮೆದುಳು ಮಾಹಿತಿ ಹಿಡಿದುಕೊಳ್ಳುತ್ತದೆ. ಹಿಂದಿನ ವರ್ಷಗಳ ಪ್ರಶ್ನೆಪತ್ರಿಕೆಗಳನ್ನು ಬಿಡಿಸಿ ನೋಡುವುದು ಉತ್ತಮ ಪ್ರಯೋಜನ ಕೊಡುತ್ತದೆ.
4. ಆರೋಗ್ಯ – ಓದಿನ ಶಕ್ತಿ
ಒಳ್ಳೆಯ ಆರೋಗ್ಯವಿಲ್ಲದೆ ಉತ್ತಮ ಅಭ್ಯಾಸ ಸಾಧ್ಯವಿಲ್ಲ.
ಸರಿಯಾದ ನಿದ್ರೆ
ಪೌಷ್ಠಿಕ ಆಹಾರ
ಸ್ವಲ್ಪ ವ್ಯಾಯಾಮ
ಇವು ವಿದ್ಯಾರ್ಥಿ ಮನಸ್ಸನ್ನು ಸದಾ ಚುರುಕುಗೊಳಿಸುತ್ತವೆ.
5. ಒತ್ತಡ ಬೇಡ – ಧೈರ್ಯ ಬೇಕು
ಪರೀಕ್ಷೆ ಎಂದರೆ ಜೀವನದ ಅಂತಿಮ ಗಡಿ ಅಲ್ಲ. ಇದು ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಒಂದು ಅವಕಾಶ. ತಪ್ಪು ಭಯ, ಫಲಿತಾಂಶದ ಭಯ, ಹೋಲಿಕೆಯ ಒತ್ತಡ ಇವೆಲ್ಲವನ್ನು ದೂರವಿಡಿ. ನೀವು ಮಾಡಿದ ಪರಿಶ್ರಮಕ್ಕೆ ಖಂಡಿತ ಫಲ ಸಿಗುತ್ತದೆ.
ಯಶಸ್ಸು ಯಾವಾಗಲೂ ಬುದ್ದಿವಂತರಿಗೂ ಮಾತ್ರ ಸಿಗುವುದಿಲ್ಲ; ನಿರಂತರ ಪರಿಶ್ರಮ ಮತ್ತು ಗಟ್ಟಿಯಾದ ಮನಸ್ಸು ಹೊಂದಿರುವವರಿಗೆ ಸಿಗುತ್ತದೆ. ಪರೀಕ್ಷೆಯನ್ನು ಶತ್ರುವೆಂದು ನೋಡದೆ, ಸ್ನೇಹಿತನಂತೆ ನೋಡಿ. ದಿನನಿತ್ಯ ಮಾಡಿದ ಚಿಕ್ಕ ಚಿಕ್ಕ ಪ್ರಯತ್ನಗಳು ದೊಡ್ಡ ಗೆಲುವಿಗೆ ದಾರಿ ಮಾಡಿಕೊಡುತ್ತವೆ.
ಗಟ್ಟಿಯಾದಮನಸ್ಸು + ಪರಿಶ್ರಮ = ಯಶಸ್ಸು ಖಚಿತ!
Advertisement