ಹೌದಿ ಮೋದಿ Live updates: ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಕದನಕ್ಕೆ ಇದು ಸಕಾಲ-ಪಾಕ್ ವಿರುದ್ಧ ಗುಡುಗಿದ ಮೋದಿ

ಹ್ಯೂಸ್ಟನ್ ನಲ್ಲಿ ನಡೆಯುತ್ತಿರುವ ಹೌದಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕಾದಲ್ಲಿನ ಭಾರತೀಯರನ್ನುದ್ದೇಶಿಸಿ ಂಆತನಾಡಿದ ಪ್ರಧಾನಿ ನರೇಂದ್ರ ಮೋದಿ "ಅವರು ಯುಎಸ್ ನಲ್ಲಿ ಅತ್ಯುನ್ನತ ಸ್ಥಾನಕ್ಕೇರಲು ಮುನ್ನವೇ ಅವರು ಜನಪ್ರಿಯರಾಗಿದ್ದರು. " ಎಂದು ಯುಎಸ್ ಅಧ್ಯಕ್ಷರಿಗೆ ಶುಭಾಶಯ ಕೋರಿದ ಮೋದಿ....
'ಅಬ್ ಕಿ ಬಾದ್ ಟ್ರಂಪ್ ಸರ್ಕಾರ್' ಘೋಷಣೆ ಮೊಳಗಿಸಿದ ಪ್ರಧಾನಿ ಮೋದಿ
'ಅಬ್ ಕಿ ಬಾದ್ ಟ್ರಂಪ್ ಸರ್ಕಾರ್' ಘೋಷಣೆ ಮೊಳಗಿಸಿದ ಪ್ರಧಾನಿ ಮೋದಿ
Updated on

ಹ್ಯೂಸ್ಟನ್: ಹ್ಯೂಸ್ಟನ್ ನಲ್ಲಿ ನಡೆಯುತ್ತಿರುವ ಹೌದಿ ಮೋದಿ ಕಾರ್ಯಕ್ರಮದಲ್ಲಿ ಅಮೆರಿಕಾದಲ್ಲಿನ ಭಾರತೀಯರನ್ನುದ್ದೇಶಿಸಿ ಂಆತನಾಡಿದ ಪ್ರಧಾನಿ ನರೇಂದ್ರ ಮೋದಿ "ಅವರು ಯುಎಸ್ ನಲ್ಲಿ ಅತ್ಯುನ್ನತ ಸ್ಥಾನಕ್ಕೇರಲು ಮುನ್ನವೇ ಅವರು ಜನಪ್ರಿಯರಾಗಿದ್ದರು. " ಎಂದು ಯುಎಸ್ ಅಧ್ಯಕ್ಷರಿಗೆ ಶುಭಾಶಯ ಕೋರಿದ ಮೋದಿ "ಟ್ರಂಪ್ ಹೆಸರು ಮನೆಯ ಪ್ರತಿಯೊಬ್ಬ ವ್ಯಕ್ತಿಗೂ ಪರಿಚಿತವಾಗಿದೆ. ಅವರ ಹೆಸರು ಜಾಗತಿಕ ರಾಜಕಾರಣದ ಕುರಿತು ಜಗತ್ತಿನ ಪ್ರತಿಯೊಂದು ಸಂಭಾಷಣೆಯಲ್ಲಿ ಕೇಳುತ್ತದೆ.

"ಸಿಇಒನಿಂದ ಕಮಾಂಡರ್ ಇನ್ ಚೀಫ್, ಬೋರ್ಡ್ ರೂಂಗಳಿಂದ ಓವಲ್ ಆಫೀಸ್, ಸ್ಟುಡಿಯೋದಿಂದ ಜಾಗತಿಕ ಹಂತದವರೆಗೆಹೆಸರಾದ ಟ್ರಂಪ್ ಅವರನ್ನು ಭವ್ಯವಾದ ಕೂಟಕ್ಕೆ ಸ್ವಾಗತಿಸುವುದು ನನ್ನ ಗೌರವ ಮತ್ತು ಹೆಮ್ಮೆ" 

"ಅವರು ಈಗಾಗಲೇ ಅಮೆರಿಕದ ಆರ್ಥಿಕತೆಯನ್ನು ಬಲಪಡಿಸಿದ್ದಾರೆ. ಅವರು ಯುಎಸ್ ಮತ್ತು ಜಗತ್ತಿಗೆ ಸಾಕಷ್ಟು ನಿಡಿದ್ದಾರೆ. ರೆ" ಎಂದು ಮೋದಿ ಹೇಳುತ್ತಾರೆ. "ನಾವು ಭಾರತದ ಪರ ಅವರೊಂದಿಗೆ ಉತ್ತಮವಾಗಿ ಒಡನಾಟ ಹೊಂದಿದ್ದೇವೆ. ಅಬ್ ಕಿ ಬಾದ್ ಟ್ರಂಪ್ ಸರ್ಕಾರ್" ಎಂದು ಮೋದಿ ಜಯಘೋಷ ಹೇಳಿದ್ದಾರೆ.

"ಈ ಬೆಳಿಗ್ಗೆ ನೀವು ಎರಡು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಎದೆಬಡಿತ ಕೇಳಲಿದ್ದೀರಿ. ಎರಡು ಮಹಾನ್ ರಾಷ್ಟ್ರಗಳ ಶಕ್ತಿ ಮತ್ತು ಮಾನವ ಬಂಧಗಳನ್ನು ನೀವು ಅನುಭವಿಸಬಹುದು" ಎಂದು ಅವರು ಯುಎಸ್ ಮತ್ತು ಭಾರತದ ನಡುವಿನ ಸ್ನೇಹ ಸಂಬಂಧಗಳ ಬಗ್ಗೆ ಮಾತನಾಡುತ್ತಾ ಹೇಳಿದ್ದಾರೆ. "ನೀವು ಒಮ್ಮೆ ನನ್ನನ್ನು ನಿಮ್ಮ ಕುಟುಂಬಕ್ಕೆ ಪರಿಚಯಿಸಿದ್ದೀರಿ. ಇಂದು ನಾನು ನಿಮ್ಮನ್ನು ನನ್ನ ಕುಟುಂಬಕ್ಕೆ ಪರಿಚಯಿಸುತ್ತೇನೆ" ಎಂದು ಮೋದಿ ಶತಕೋಟಿ ಭಾರತೀಯರನ್ನು ಉಲ್ಲೇಖಿಸುತ್ತಾ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com