ಜಹೀರ್ ಖಾನ್ ಟೀಂ ಇಂಡಿಯಾ ಪರ 92 ಟೆಸ್ಟ್, 200 ಏಕದಿನ ಹಾಗೂ 17 ಟಿ20 ಪಂದ್ಯವಾಡಿದ್ದಾರೆ. 2014ರ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದ ಬಳಿಕ ಸಂಪೂರ್ಣವಾಗಿ ರಾಷ್ಟ್ರೀಯ ತಂಡದಿಂದ ಹೊರಬಿದ್ದಿದ್ದರು. ಟೆಸ್ಟ್ನಲ್ಲಿ 311 ವಿಕೆಟ್ ಉರುಳಿಸಿರುವ ಜಹೀರ್, ಗರಿಷ್ಠ ವಿಕೆಟ್ ಉರುಳಿಸಿದ ಭಾರತದ 4ನೇ ಬೌಲರ್ ಎನ್ನುವ ಶ್ರೇಯ ಹೊಂದಿದ್ದಾರೆ. 2011ರಲ್ಲಿ ಭಾರತದ ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜಹೀರ್ ಟೂರ್ನಿಯಲ್ಲಿ 21 ವಿಕೆಟ್ ಉರುಳಿಸಿದ್ದರು.