ವಿಷ ಕುಡಿದ ಶಿವನನ್ನು ಎಚ್ಚರವಿಡಲು ದೇವತೆಗಳು ಭಜನೆ ಮಾಡಿದ ರಾತ್ರಿ

ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಪರಮೇಶ್ವರನ್ನು ಎಚ್ಚರವಿರಿಸುತ್ತಾರೆ. ಹಾಗಾಗಿ ಆ ಪವಿತ್ರ ದಿನವನ್ನು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮಹಾ ಶಿವರಾತ್ರಿ ಹಿಂದೂಗಳು ಅತ್ಯಂತ ಭಕ್ತಿ ಭಾವದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲೊಂದು. ಮಾಘ ಮಾಸ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುವ ಶಿವರಾತ್ರಿ ಶಿವ ಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಆದರೆ ಈ ಶಿವ ರಾತ್ರಿಯ ಹಿಂದೆ ಸಣ್ಣ ಕಥೆಗಳು ಇವೆ. 
ದೇವತೆಗಳು ಮತ್ತು ಅಸುರರು ಅಮೃತಕ್ಕಾಗಿ ಸಮುದ್ರ ಮಂಥನ ಮಾಡುತ್ತಿರುತ್ತಾರೆ. ಈ ವೇಳೆ ವಿಷ ಉದ್ಭವವಾಗುತ್ತದೆ. ಈ ವಿಷ ಇಡೀ ನಭೋಮಂಡಲವನ್ನೇ ನಾಶಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. ಆದರೆ, ಈ ವಿಷವನ್ನು ಕುಡಿಯೋಕೆ ದೇವತೆಗಳು ಯಾರೂ ಮುಂದಾಗುವುದಿಲ್ಲ. ಆಗ ಲೋಕ ಕಲ್ಯಾಣಕ್ಕಾಗಿ ಪರಶಿವನು ಆ ವಿಷವನ್ನು ಕುಡಿದುಬಿಡುತ್ತಾನೆ. 
ಇದನ್ನು ಕಂಡ ಪಾರ್ವತಿ ತನ್ನ ಪತಿ ಸೇವಿಸಿದ ವಿಷ ಹೊಟ್ಟೆ ಸೇರದಂತೆ ಗಂಟಲಲ್ಲೇ ತಡೆ ಹಿಡಿಯುತ್ತಾಳೆ. ಆದರೆ, ಶಿವನು ನಿದ್ರೆಗೆ ಜಾರಿದರೆ ವಿಷವು ಬೇಗನೆ ದೇಹದ ತುಂಬ ಹರಡಬಹುದು ಎಂದು ದೇವತೆಗಳೆಲ್ಲರೂ ಶಿವನ ಭಜನೆ ಮಾಡಿ ಪರಮೇಶ್ವರನ್ನು ಎಚ್ಚರವಿರಿಸುತ್ತಾರೆ. ಹಾಗಾಗಿ ಆ ಪವಿತ್ರ ದಿನವನ್ನು ಶಿವರಾತ್ರಿ ಎಂದು ಕರೆಯಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com