ಬ್ರಹ್ಮ-ವಿಷ್ಣುವಿನ ಪರೀಕ್ಷೆಗೆ ಶಿವನು ಅಗ್ನಿ ಕಂಬವಾದ ದಿನ

ಅಗ್ನಿ ಕಂಭದ ಮೂಲವನ್ನು ಹುಡುಕಲು ಬ್ರಹ್ಮನು ಹಂಸ ರೂಪ ಹಾಗೂ ವಿಷ್ಣು ವರಾಹವತಾರ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಒಮ್ಮೆ ದೇವಲೋಕದಲ್ಲಿ ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಯಾರು ಶ್ರೇಷ್ಠರು ಎಂಬ ವಿಷಯಕ್ಕೆ ವಾಗ್ವಾದ ನಡೆಯುತ್ತಿರುತ್ತದೆ. ಇದನ್ನು ತಿಳಿದ ದೇವತೆಗಳು ಈ ಸಮಸ್ಯೆಯನ್ನು ಬಗೆ ಹರಿಸುವಂತೆ ಶಿವನನ್ನು ಬೇಡಿಕೊಳ್ಳುತ್ತಾರೆ.
ದೇವತೆಗಳನ್ನು ಬೇಡಿಕೆಯನ್ನು ಆಲಿಸಿದ ಶಿವನು ಬ್ರಹ್ಮ ಮತ್ತು ವಿಷ್ಣುವಿನ ನಡುವೆ ಅಗ್ನಿ ಕಂಭದ ರೂಪದಲ್ಲಿ ಬಂದು ನಿಂದು ತನ್ನ ಮೂಲವನ್ನು ಕಂಡು ಹಿಡಿಯಲು ಹೇಳುತ್ತಾನೆ.
ಆಗ ಅಗ್ನಿ ಕಂಭದ ಮೂಲವನ್ನು ಹುಡುಕಲು ಬ್ರಹ್ಮನು ಹಂಸ ರೂಪ ಹಾಗೂ ವಿಷ್ಣು ವರಾಹವತಾರ ತಾಳುತ್ತಾರೆ. ಹಂಸ ರೂಪದಲ್ಲಿ ಬ್ರಹ್ಮನು ಅಗ್ನಿ ಕಂಭದ ಶಿರವನ್ನು ಹುಡುಕಲು ಮೇಲ್ಮುಖವಾಗಿ ಹೊರಡುತ್ತಾನೆ. ವರಹವತಾರ ತಾಳಿದ ವಿಷ್ಣು ಕಂಭದ ತಳವನ್ನು ನೋಡುವುದಕ್ಕಾಗಿ ಪಾತಾಳಕ್ಕೆ ಇಳಿಯುತ್ತಾನೆ.
ಆದರೆ, ಎಷ್ಟೇ ಹುಡುಕಿದರೂ ಇವರಿಬ್ಬರಿಗೂ ಅಗ್ನಿ ಕಂಬದ ಮೂಲ ಸಿಗುವುದಿಲ್ಲ. ಈ ವೇಳೆ ಶಿವನ ಜಡೆಯಿಂದ ಕೇತಕಿ ಪುಷ್ಪ ಬೀಳುತ್ತಿರುತ್ತದೆ. ಕೇತಕಿ ಪುಷ್ಪವನ್ನು ನೋಡಿದ ಬ್ರಹ್ಮನು ನೀನು ಎಲ್ಲಿಂದ ಬೀಳುತ್ತಿದ್ದೀಯಾ ಎಂದು ಪ್ರಶ್ನಿಸುತ್ತಾನೆ. ಆಗ ಆ ಪುಷ್ಪ ಅಗ್ನಿ ಕಂಬದ ಶಿರದಿಂದ ಬೀಳುತ್ತಿದ್ದೇನೆ ಎಂದು ಹೇಳುತ್ತದೆ. ಆಗ ಆ ಹೂವನ್ನು ತೆಗೆದುಕೊಂಡ ಬ್ರಹ್ಮನು ಶಿವನ ಬಳಿ ಬರುತ್ತಾನೆ. ನಾನು ಅಗ್ನಿ ಕಂಬಂದ ಶಿರಭಾಗವನ್ನು ಕಂಡಿದ್ದೇನೆ ಎಂದು ಹೇಳುತ್ತಾನೆ. ಅದಕ್ಕೆ ಸಾಕ್ಷಿಯಾಗಿ ಕೇತಕಿ ಪುಷ್ಪವನ್ನು ತೋರಿಸಿ, ನಾನು ಕಂಭದ ಶಿರ ಭಾಗವನ್ನು ನೋಡಿ ಅಲ್ಲಿದ್ದ ಕೇತಕಿ ಪುಷ್ಪವನ್ನು ತಂದಿದ್ದೇನೆ ಎಂದು ಹೇಳುತ್ತಾನೆ.
ಸತ್ಯ ತಿಳಿದಿದ್ದ ಶಿವನು ಬ್ರಹ್ಮನ ಮೋಸಕ್ಕೆ ಕೋಪಗೊಂಡು, ಇನ್ನು ಮುಂದೆ ಬ್ರಹ್ಮನನ್ನು ಯಾರೂ ಪೂಜಿಸಬಾರದು ಎಂದು ಶಾಪವನ್ನು ಕೊಡುತ್ತಾನೆ. ಕಪಟತನ ತೋರಿದ ಕೇತಕಿ ಪುಷ್ಪವನ್ನು ಯಾರೂ ಪೂಜೆಗೆ ಬಳಸಬಾರದೂ ಎಂದು ಶಾಪ ಕೊಡುತ್ತಾನೆ. ಆ ದಿನ ಮಾಘ ಮಾಸದ ಕೃಷ್ಣ ಪಕ್ಷದ 14ನೇ ದಿವಾಗಿರುತ್ತದೆ. ಅದೇ ದಿನವೇ ಶಿವನು ಲಿಂಗರೂಪವನ್ನು ಧರಿಸಿದನು ಎಂದು ಹೇಳಲಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com