ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ರಾಮಮಂದಿರ ನಿರ್ಮಾಣದೊಂದಿಗೆ ಮುಸ್ಲಿಂರ ನಿಜವಾದ ಸ್ಥಾನವನ್ನು ಮೋದಿ ತೋರಿಸಿದ್ದಾರೆ- ಅಸಾದುದ್ದೀನ್ ಓವೈಸಿ

ಜನವರಿ 22 ರಂದು ಅಯೋಧ್ಯೆಯಲ್ಲಿ ತಮ್ಮ ಕೈಯಿಂದಲೇ ರಾಮಮಂದಿರ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.
Published on

ಕಲಬುರಗಿ: ಜನವರಿ 22 ರಂದು ಅಯೋಧ್ಯೆಯಲ್ಲಿ ತಮ್ಮ ಕೈಯಿಂದಲೇ ರಾಮಮಂದಿರ ಉದ್ಘಾಟನೆ ಮಾಡಲಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ರಾಜಕೀಯದಲ್ಲಿ ಮುಸ್ಲಿಮರ ಸ್ಥಾನ ಎಲ್ಲಿದೆ ಎಂಬುದರ ಬಗ್ಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಶನಿವಾರ ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಓವೈಸಿ, 500 ವರ್ಷಗಳಿಂದ ಅಲ್ಲಿ ಮಸೀದಿಯೊಂದು ಇತ್ತು. ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣ ಮೂಲಕ ದೊಡ್ಡ ಮೊತ್ತದ ಮತವನ್ನು ಕ್ರೋಢೀಕರಿಸುವ ಗುರಿ ಹೊಂದಿದ್ದಾರೆ. ಆ ಮೂಲಕ ಭಾರತದ ಮುಸ್ಲಿಮರಿಗೆ ಭಾರತದ ರಾಜಕೀಯದಲ್ಲಿ ಅವರ ಸ್ಥಾನವೇನು ಎಂಬುದರ ಬಗ್ಗೆ ಸೂಚನೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು. 

ಚುನಾವಣಾ ಲಾಭಕ್ಕಾಗಿ ಬಹುಸಂಖ್ಯಾತ ಸಮುದಾಯದ ಧಾರ್ಮಿಕ ಭಾವನೆಗಳನ್ನು ಗೆಲ್ಲುವಲ್ಲಿ ವಿರೋಧ ಪಕ್ಷಗಳು ಬಿಜೆಪಿಗಿಂತ ಭಿನ್ನವಾಗಿಲ್ಲ. ಉದಾಹರಣೆಯಾಗಿ ದೆಹಲಿಯಲ್ಲಿ ಹನುಮಾನ್ ಚಾಲೀಸಾ ಮತ್ತು ರಾಮ್ ಧುನ್‌ನಂತಹ ಧಾರ್ಮಿಕ ಗೀತೆಗಳನ್ನು ವಾರಕ್ಕೊಮ್ಮೆ ಸರ್ಕಾರಿ ಶಾಲೆಗಳಲ್ಲಿ ಹಾಡಬೇಕು ಎಂದು ಎಎಪಿ ಸರ್ಕಾರ ಸೂಚಿಸಿದೆ ಎಂದರು. 

ಕಾಂಗ್ರೆಸ್‍ನ ಜಿ.ಬಿ ಪಂತ್ ಮುಖ್ಯಮಂತ್ರಿ ಆಗಿದ್ದಾಗ ರಾಜ್ ಕೆ ಅಂಧೇರಿಯಲ್ಲಿ ರಾಮನ ಮೂರ್ತಿ ಇಡಲಾಗಿತ್ತು. ಅವರು ಅಲ್ಲಿಂದ ಮೂರ್ತಿಯನ್ನು ತೆಗೆಯಲಿಲ್ಲ. ಆಗ ಅಲ್ಲಿನ ಕಲೆಕ್ಟರ್ ನಾಯರ್ ಸಾಬ್ ಮಸೀದಿ ಬಂದ್ ಮಾಡಿ ಪೂಜಾ ಶುರು ಮಾಡಿದ್ದರು. ಅಲ್ಲಿಯೇ ನಮ್ಮ ಮಸೀದಿ ಇತ್ತು. 1986ರಲ್ಲಿ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದಾಗ ಮಸೀದಿಗ ಬೀಗ ತೆರೆದು ಹಿಂದೂಗಳಿಗೆ ಪೂಜೆ ಆರಂಭಿಸಲು ಅವಕಾಶ ನೀಡಲಾಯಿತು. ಮೂರನೇ ಪ್ರಮುಖ ಬೆಳವಣಿಗೆಯಾಗಿ ಡಿಸೆಂಬರ್ 6, 1982 ರಂದು ಬಿಜೆಪಿ ನಾಯಕರು ಗುಂಪು ಗುಂಪಾಗಿ ಮಸೀದಿಯನ್ನು ಧ್ವಂಸಗೊಳಿಸಿದರು ಎಂದು ಓವೈಸಿ ಮಾಹಿತಿ ನೀಡಿದರು. 

ಈ ವಿಚಾರವನ್ನು ಮೋದಿ ಹೈಜಾಕ್ ಮಾಡಿರುವ ಕಾರಣದಿಂದಲೇ ವಿಪಕ್ಷ ನಾಯಕರು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ. ಅದನ್ನು ಹೊರತುಪಡಿಸಿದರೆ ಮಸೀದಿ ಸ್ಥಳದಲ್ಲಿ ಮಂದಿರವನ್ನು ಹೇಗೆ ನಿರ್ಮಿಸಲಾಯಿತು ಎಂಬ ಸೈದ್ಧಾಂತಿಕ ವಿರೋಧದಿಂದಲ್ಲ. ಮೋದಿ ಇಲ್ಲದಿದ್ದರೆ ನಾವೂ ಹೋಗುತ್ತಿದ್ದೆವು ಎಂದು ಎಲ್ಲರೂ ಹೇಳುತ್ತಿದ್ದಾರೆ, ಆದರೆ ನಾನು ಹೇಳಿದ ವಿಚಾರಗಳ ಬಗ್ಗೆ ಯಾರೂ ಏನೂ ಹೇಳುತ್ತಿಲ್ಲ .ಏಕೆಂದರೆ ಎಲ್ಲರೂ ಬಹುಸಂಖ್ಯಾತ ಸಮುದಾಯದ ಮತಗಳಿಗಾಗಿ ಹೋರಾಡುತ್ತಿದ್ದಾರೆ  ಎಂದು ಅವರು ಹೇಳಿದರು.

“ಜಿ.ಬಿ.ಪಂತ್ ರಾಮನ ಮೂರ್ತಿ ತೆಗೆದಿದ್ದರೆ ಈ ದಿನವನ್ನು ನೋಡಬೇಕಿತ್ತೇ? 1986ರಲ್ಲಿ ಬೀಗ ತೆರೆಯದಿದ್ದರೆ ಈ ದಿನ ಬರುತ್ತಿತ್ತೇ?, ಡಿ.6ರಂದು ಬಾಬರಿ ಮಸೀದಿ ಧ್ವಂಸ ಮಾಡದಿದ್ದರೆ ಈ ರೀತಿ ಬರುತ್ತಿತ್ತೇ? ಇವೆಲ್ಲವೂ ನನ್ನ ಪ್ರಶ್ನೆಗಳು, ಆದರೆ ಯಾರೂ ಯಾವುದೇ ಉತ್ತರವನ್ನು ನೀಡುತ್ತಿಲ್ಲ ಎಂದು ಓವೈಸ್ ಹೇಳಿದರು.

ವಿವಾದಿತ ಭೂಮಿಯನ್ನು ದೇವಸ್ಥಾನ ನಿರ್ಮಾಣಕ್ಕಾಗಿ ಹಸ್ತಾಂತರಿಸಿದ 2019 ರ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಓವೈಸಿ,  ಮಾಜಿ ಮುಖ್ಯ ನ್ಯಾಯಮೂರ್ತಿ ಜೆಎಸ್ ವರ್ಮಾ ಅವರನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್ ಉನ್ನತ ನ್ಯಾಯಾಲಯ ಅದರ ತೀರ್ಪು ತಪ್ಪಾಗುವುದಿಲ್ಲ .ಆದರೆ ಆ ತೀರ್ಪಿನಲ್ಲಿಯೂ  ಕೂಡ ಯಾವುದೇ ದೇವಾಲಯವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಎಲ್ಲಿಯೂ ಹೇಳಿಲ್ಲ ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com