ಸಮ್ಮತಿ ಸೆಕ್ಸ್ ವಯೋವುತಿ 18ರಿಂದ 16ಕ್ಕೆ ಇಳಿಕೆ?

Updated on

ನವದೆಹಲಿ: ಒಪ್ಪಿಗೆಯ ಲೈಂಗಿಕ ಕ್ರಿಯೆಯ ವಯಸ್ಸಿನ ಮಿತಿಯನ್ನು 18ರಿಂದ 16ಕ್ಕಿಳಿಸುವುದು, 'ಲೈಂಗಿಕ ಹಲ್ಲೆ' ಪದದ ಬದಲು 'ರೇಪ್‌' ಎಂಬ ಪದವನ್ನೇ ಉಳಿಸುವುದು ಸೇರಿದಂತೆ ಹೊಸ ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆಗೆ ಕೆಲವೊಂದು ಬದಲಾವಣೆಗಳನ್ನು ತರಲು ಸರ್ಕಾರ ಚಿಂತನೆ ನಡೆಸಿದೆ.
ಮಸೂದೆಯ ಕರಡು ಸಿದ್ಧವಾಗಿದ್ದು, ಇತ್ತೀಚೆಗಷ್ಟೇ ಅಂಗೀಕಾರವಾದ ಕ್ರಿಮಿನಲ್ ಕಾನೂನು ಅಧ್ಯಾದೇಶದ ಸ್ಥಳವನ್ನು ಈ ಮಸೂದೆ ತುಂಬಲಿದೆ. ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆಯನ್ನು ಕೇಂದ್ರ ಸಂಪುಟವು ಮುಂದಿನ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ರೇಪ್ ಪದದ ಬಳಕೆ: ವರ್ಮಾ ಸಮಿತಿ ಶಿಫಾರಸಿನಂತೆ, 'ಲೈಂಗಿಕ ಹಲ್ಲೆ' ಪದದ ಬದಲಿಗೆ 'ರೇಪ್‌' ಎಂಬ ಪದವನ್ನೇ ಬಳಸಲು ಹಾಗೂ ಅದರ ವ್ಯಾಖ್ಯಾನವನ್ನು ವಿಸ್ತರಿಸಲು ನಿರ್ಧರಿಸಲಾಗಿದೆ. ಇದರ ಜತೆಗೆ, ಸಮ್ಮತಿ ಸೆಕ್ಸ್‌ನ ವಯಸ್ಸಿನ ಮಿತಿಯನ್ನು 18ರಿಂದ 16ಕ್ಕಿಳಿಸಲೂ ಚಿಂತನೆ ನಡೆಸಲಾಗಿದೆ.
ಚಿಕಿತ್ಸೆ ಕೊಡದಿದ್ದರೆ ಶಿಕ್ಷೆ: ಇದೇ ವೇಳೆ, ದೌರ್ಜನ್ಯಕ್ಕೊಳಗಾದ ಮಹಿಳೆಗೆ ಆಸ್ಪತ್ರೆಗಳು, ನರ್ಸ್‌ಗಳು, ಖಾಸಗಿ ಮತ್ತು ಸರ್ಕಾರಿ ವೈದ್ಯಕೀಯ ಕೇಂದ್ರಗಳು ಸೂಕ್ತ ಚಿಕಿತ್ಸೆ ನೀಡಬೇಕು. ತಪ್ಪಿದ್ದಲ್ಲಿ ಅಂಥವರಿಗೆ ಕಾನೂನು ಪ್ರಕಾರ ಶಿಕ್ಷೆ ವಿಧಿಸುವ ಬಗ್ಗೆಯೂ ಕರಡು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.

  • 'ಲೈಂಗಿಕ ಹಲ್ಲೆ' ಬದಲು 'ರೇಪ್‌' ಪದದ ಬಳಕೆ, ವ್ಯಾಖ್ಯಾನ ವಿಸ್ತರಿಣೆಗೆ ಚಿಂತನೆ
  • ಟಿ ಕ್ರಿಮಿನಲ್ ಕಾನೂನು ತಿದ್ದುಪಡಿ ಮಸೂದೆಗೆ ಕೆಲವೊಂದು ಬದಲಾವಣೆಗಳನ್ನು ತರಲು ಸರ್ಕಾರ ಚಿಂತನೆ
  •  ದೌರ್ಜನ್ಯಕ್ಕೊಳಗಾದ ಮಹಿಳೆಗೆ ಆಸ್ಪತ್ರೆಗಳು, ನರ್ಸ್‌ಗಳು ಸೂಕ್ತ ಚಿಕಿತ್ಸೆ ನೀಡದಿದ್ದರೆ ಕಠಿಣ ಶಿಕ್ಷೆ ಗ್ಯಾರಂಟಿ
  • ಇತ್ತೀಚೆಗೆ ಅಂಗೀಕಾರವಾದ ಕ್ರಿಮಿನಲ್ ಕಾನೂನು ಅಧ್ಯಾದೇಶದ ಸ್ಥಳವನ್ನು ಈ ಮಸೂದೆ ತುಂಬಲಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com