ಪ್ಯಾನ್ ಕಾರ್ಡ್

Updated on

ಪ್ಯಾನ್(ಪರ್ಮನೆಂಟ್ ಅಕೌಂಟ್ ನಂಬರ್) ಕಾರ್ಡ್ ಕಳೆದುಹೋದರೆ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಹೊಸ ಪ್ಯಾನ್‌ಗೆ ಅಪ್ಲೈ ಮಾಡುವ ಅವಕಾಶವಿದ್ದರೂ ಅನೇಕರು ಚಿಂತೆ ಮಾಡಿಕೊಂಡೇ ಕಾಲಕಳೆಯುತ್ತಾರೆ. ಅಂಥವರಿಗೆ ಆನ್‌ಲೈನ್‌ನಲ್ಲೇ ಸುಲಭವಾಗಿ ಪ್ಯಾನ್‌ಗೆ ಅರ್ಜಿ ಹಾಕುವುದು ಹೇಗೆ ಎಂಬ ಮಾಹಿತಿ.

-ಆದಾಯ ತೆರಿಗೆ ಪ್ಯಾನ್ ಸೇವಾ ಘಟಕದ ವೆಬ್‌ಸೈಟ್ https://tin.nsdl.com/pan/ ಗೆ ಭೇಟಿನೀಡಿ.
-ಈಗ ಹೋಂ ಪೇಜ್ ಕಾಣುತ್ತದೆ. ಇಲ್ಲಿ ವಿವಿಧ ಆಯ್ಕೆಗಳಿರುತ್ತವೆ. ಉದಾ: ಹೊಸ ಪ್ಯಾನ್‌ಗೆ ಅರ್ಜಿ, ತನಿಖೆ ಮತ್ತು ಟ್ರ್ಯಾಕಿಂಗ್ ಸ್ಟೇಟಸ್, ಪ್ಯಾನ್ ಕಾರ್ಡ್ ಮರುಮುದ್ರಣ, ಪ್ಯಾನ್ ವಿವರಗಳಲ್ಲಿ ಬದಲಾವಣೆ ಮತ್ತು ತಿದ್ದುಪಡಿ ಇತ್ಯಾದಿ. ನಿಮಗೆ ಬೇಕಾದದ್ದನ್ನು ನೀವು ಆಯ್ಕೆ ಮಾಡಿಕೊಳ್ಳಿ.
-ಹೊಸ ಪ್ಯಾನ್‌ಗೆ ಅರ್ಜಿ ಹಾಕಬೇಕೆಂದರೆ, ಫಾರ್ಮ್ 49ಎ ಅಗತ್ಯವಿದೆ. https://tin.nsdl.com/pan2/servlet/NewPanApp ಗೆ ಭೇಟಿ ನೀಡಿ ಫಾರ್ಮ್ 49ಎ ಯನ್ನು ಆನ್‌ಲೈನ್‌ನಲ್ಲೇ ಭರ್ತಿ ಮಾಡಿ. ವಿವರಗಳನ್ನು ತುಂಬಿ ಆನ್‌ಲೈನ್‌ನಲ್ಲೇ ಸಬ್ಮಿಟ್ ಮಾಡಿ.
-ಯಶಸ್ವಿಯಾಗಿ ಅರ್ಜಿ ಸಲ್ಲಿಸಿದ ಬಳಿಕ ಅಲ್ಲಿ ಸ್ವೀಕೃತಿ (ಅಕ್ನಾಲೆಜ್‌ಮೆಂಟ್) ಪತ್ರ ಕಾಣಸಿಗುತ್ತದೆ. ಇದರಲ್ಲಿ ವಿಶಿಷ್ಟವಾದ 15 ಅಂಕಿಗಳ ಸ್ವೀಕೃತಿ ಸಂಖ್ಯೆ ಇರುತ್ತದೆ. ಅದನ್ನು ಸೇವ್ ಮಾಡಿಕೊಂಡು, ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
-ಸ್ವೀಕೃತಿ ಫಾರ್ಮ್ ಅನ್ನು ಆದಾಯ ತೆರಿಗೆ ಇಲಾಖೆಗೆ ಕಳುಹಿಸಬೇಕು. ಅದರ ಜತೆಗೆ ಅಡ್ರೆಸ್ ಪ್ರೂಫ್, ಗುರುತಿನ ಪ್ರೂಫ್ ಅನ್ನು ಲಗತ್ತಿಸಬೇಕು. ಈ ಪ್ರೂಫ್‌ನಲ್ಲಿರುವ ಹೆಸರು ಪ್ಯಾನ್ ಅರ್ಜಿಯಲ್ಲಿದ್ದಂತೆಯೇ ಇರಬೇಕು. ಫಾರ್ಮ್ 49ಎ ಭರ್ತಿ ಮಾಡುವಾಗ ಇದನ್ನು ನೆನಪಿನಲ್ಲಿಟ್ಟುಕೊಳ್ಳಿ.
- ಸ್ವೀಕೃತಿ ಫಾರ್ಮ್‌ನಲ್ಲಿ ನಿಮ್ಮ 2 ಇತ್ತೀಚೆಗಿನ ಕಲರ್ ಫೋಟೋ ಅಂಟಿಸಿ. ಅಗತ್ಯ ಸ್ಥಳಗಳಲ್ಲಿ ಸಹಿ ಹಾಕಿ.
- ನಿಮ್ಮ ಸಂವಹನ ವಿಳಾಸ ಭಾರತದಲ್ಲಿಯೇ ಇದ್ದರೆ, ಪ್ಯಾನ್ ಅರ್ಜಿಯ ಜತೆ 96 ಪಾವತಿಸಬೇಕಾಗುತ್ತದೆ. ಚೆಕ್, ಡಿಡಿ, ಇಂಟರ್ನೆಟ್ ಬ್ಯಾಂಕಿಂಗ್, ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಬಹುದು. ಸಂವಹನ ವಿಳಾಸ ಭಾರತದ ಹೊರಗಿದ್ದರೆ, ನೀವು ಪಾವತಿಸಬೇಕಾದ ಹಣ 962. ಅದೂ ಡಿಡಿ ಮೂಲಕವೇ. ಇಂಟರ್ನೆಟ್ ಬ್ಯಾಂಕಿಂಗ್/ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಹಣ ಪಾವತಿಸುವುದಾದರೆ ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿ ಮಾಡುವಾಗಲೇ ಪಾವತಿಸಿ. ಆಗ ಪಾವತಿಯ ಸ್ವೀಕೃತಿ ಪತ್ರ ದೊರೆಯುತ್ತದೆ. ಅದನ್ನು ಪ್ರಿಂಟ್‌ಔಟ್ ತೆಗೆದು ಸ್ವೀಕೃತಿ ಫಾರ್ಮ್ ಜತೆ ಲಗತ್ತಿಸಬೇಕು.
-ಸ್ವೀಕೃತಿ ಫಾರ್ಮ್ ಅನ್ನು ಆನ್‌ಲೈನ್ ಅರ್ಜಿ ಸಲ್ಲಿಸಿದ ದಿನಾಂಕದಿಂದ 15 ದಿನಗಳೊಳಗಾಗಿ ಪುಣೆಯಲ್ಲಿನ ಎನ್‌ಎಸ್‌ಡಿಎಲ್‌ಗೆ ಕಳುಹಿಸಿ. ಲಕೋಟೆಯಲ್ಲಿ "APPLICATION FOR PAN- ಅರ್ಜಿ ಸಂಖ್ಯೆ......' ಬರೆದಿರಬೇಕು.ಪಾವತಿ ರಿಸೀಪ್ಟ್ ದೊರೆತ ಬಳಿಕ ಎನ್‌ಎಸ್‌ಡಿಎಲ್‌ನಲ್ಲಿ ಅರ್ಜಿಗಳನ್ನು ಪ್ರೊಸೆಸ್ ಮಾಡಲಾಗುತ್ತದೆ.
- ಪ್ಯಾನ್ ಅರ್ಜಿ ಸಲ್ಲಿಸುವ ವೇಳೆ ವೆಬ್‌ಸೈಟ್‌ನಲ್ಲೇ ನಿಮಗೆ ಅದರ ಪ್ರಕ್ರಿಯೆಯನ್ನು ಸರಳವಾಗಿ ವಿವರಿಸಿರಲಾಗುತ್ತದೆ. ಆನ್‌ಲೈನ್‌ನಲ್ಲೇ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ಪರಿಶೀಲಿಸಬಹುದು. ಎನ್‌ಎಸ್‌ಡಿಎಲ್‌ಗೆ ಪತ್ರ ಬರೆದು ಅಥವಾ SMS NSDLPANAcknowledgement No.ಬರೆದು 57575ಕ್ಕೆ ಎಸ್ಸೆಮ್ಮೆಸ್ ಕೂಡ ಕಳುಹಿಸಿ ಮಾಹಿತಿ ಪಡೆಯಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com