ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಡಿ. 5 ರಂದು

ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು...
ಭಾರತೀಯ ಸಶಸ್ತ್ರ ಪಡೆ ಧ್ವಜ
ಭಾರತೀಯ ಸಶಸ್ತ್ರ ಪಡೆ ಧ್ವಜ

ಬೆಂಗಳೂರು: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಡಿ.5 ರಂದು ನಗರದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಯೋಜಿಸಿದೆ. ಅಂದು ಸಂಜೆ 4.15ಕ್ಕೆ ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ. ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್ ಅತಿಥಿಗಳಾಗಿ ಭಾಗವಹಿಸುವರು ಎಂದು ಇಲಾಖೆ ನಿರ್ದೇಶಕ (ಪ್ರಭಾರ) ಎಂ.ಎಸ್.ಲೋಲಾಕ್ಷ ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಪ್ರತಿವರ್ಷವೂ ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಡಿ.7ರಂದು ದೇಶದಾದ್ಯಂತ ಆಚರಿಸಲಾಗುತ್ತದೆ. ಆದರೆ ಈ ವರ್ಷ ಡಿ.7 ಭಾನುವಾರವಾಗಿರುವುದರಿಂದ ಎರಡು ದಿವಸ ಮುಂಚಿತವಾಗಿಯೇ ಕೇಂದ್ರೀಯ ಸೈನಿಕ ಮಂಡಳಿಯು ಸಶಸ್ತ್ರ ಧ್ವಜ ದಿನ ಆಚರಿಸುತ್ತಿದೆ. ಅಂತೆಯೇ ನಗರದಲ್ಲೂ ಶುಕ್ರವಾರವೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಯುದ್ಧ ಸಂತ್ರಸ್ತರು, ರಾಜ್ಯದ ಹಿರಿಯ ನಾಗರಿಕರು, ಸೈನಿಕ ಶಾಲೆಯ ಮಕ್ಕಳು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಸೇವಾ ನಿರತ ಸೈನಿಕರು ಸಮಾರಂಭದಲ್ಲಿ ಬಾಗವಹಿಸುತ್ತಿದ್ದಾರೆ. ಗಾಯಗೊಂಡ ಸೈನಿಕರಿಗೆ ಮತ್ತು ಹುತಾತ್ಮರಾದ ಸೈನಿಕರ ಅವಲಂಬಿತರಿಗೆ, ಶೌರ್ಯ ಪ್ರಶಸ್ತಿ ವಿಜೇತರಿಗೆ ಧನ ಸಹಾಯ ವಿತರಿಸಿ ಗೌರವಿಸಲಾಗುವುದು. ಜತೆಗ ಸಾಂಕೇತಿಕ ಮತ್ತು ವಾಹನ ಧ್ವಜಗಳನ್ನು ಖರೀದಿಸಿ ಧ್ವಜ ನಿಧಿಗೆ ದೇಣಿಗೆ ನೀಡುವ ಕಾರ್ಯಕ್ರಮವೂ ಇದೆ ಎಂದರು.

ಧ್ವಜ ದಿನಾಚರಣೆ ಹಿನ್ನೆಲೆಯಲ್ಲಿ ಡಿಸೆಂಬರ್ 5 ರಂದು ರಾಜ್ಯದ ಎಳ್ಲ ಮಾಜಿ ಸೈನಿಕರಿಗೆ ರಸ್ತೆ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಸರ್ಕಾರವನ್ನು ಕೇಳಿಕೊಳ್ಳಲಾಗಿದೆ. ಸರ್ಕಾರವೂ ಇದಕ್ಕೆ ಒಪ್ಪಿಗೆ ಸೂಚಿಸಿದೆ. ಆದೇಶ ಬರುವುದು ಬಾಕಿಯಿದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com