ವೈದ್ಯ ಸೀಟು ಕೊಡಿಸುವುದಾಗಿ ವಂಚನೆ

ವೈದ್ಯ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ...
ಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ರೈ
ಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ರೈ

ಬೆಂಗಳೂರು: ವೈದ್ಯ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ 25 ಲಕ್ಷ ಪಡೆದು ವಂಚಿಸಿದ ಚಿತ್ರ ನಿರ್ಮಾಪಕ ಸಂತೋಷ್ ಕುಮಾರ್ ರೈ(40) ಎಂಬಾತನನ್ನು ತಿಲಕನಗರ ಪೊಲೀಸರು ಬಂಧಿಸಿದ್ದಾರೆ.

ನೊಂದ ವಿದ್ಯಾರ್ಥಿಗಳು ನೀಡಿದ ದೂರಿನ ಆಧಾರದ ಮೇಲೆ ಮುಂಬೈನ ಗೊರೇಗಾಂವ್‌ನಲ್ಲಿ ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.

ತಾನು ವೈದ್ಯನಾಗಿದ್ದು ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಮೆಡಿಕಲ್ ಸೀಟು ಕೊಡಿಸುವುದಾಗಿ ಉತ್ತರ ಭಾರತ ಮೂಲದ ವಿದ್ಯಾರ್ಥಿಗಳಿಂದ ಲಕ್ಷಾಂತರ ರು.ಸಂಗ್ರಹಿಸಿದ್ದ. ಇತ್ತ ಸೀಟು ಕೊಡಿಸಿರಲಿಲ್ಲ, ಹಣವನ್ನು ವಾಪಸ್ ಮಾಡಿರಲಿಲ್ಲ.

ಹೀಗಾಗಿ ವಿದ್ಯಾರ್ಥಿಗಳು ಪೊಲೀಸ್ ಠಾಣಗೆ ದೂರು ನೀಡಿದ್ದರು. ಆರೋಪಿ ಸಂತೋಷ್ ಇನ್ನು ಬಿಡುಗಡೆ ಆಗಬೇಕಿರುವ ಗೊಡ್ಸೆ ಹಿಂದಿ ಸಿನಿಮಾದ ನಿರ್ಮಾಪಕರಾಗಿದ್ದಾರೆ. ವಿದ್ಯಾರ್ಥಿಗಳಿಂದ ಅಕ್ರಮವಾಗಿ ಪಡೆದ ಹಣವನ್ನು ಸಿನಿಮಾ ಮೇಲೆ ವಿನಿಯೋಗಿಸಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಪೊಲೀಸರಿಂದ ಕರ್ನಾಟಕ ಪೊಲೀಸರ ವಿಚಾರಣೆ: ಆರೋಪಿ ಮುಂಬೈನ ಮನೆಯಲ್ಲಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ನಗರ ಪೊಲೀಸರು ಆತನ ಮನೆಗೆ ಹೋಗಿ ಬಂಧಿಸಿ ಕಾರಿನಲ್ಲಿ ನಗರಕ್ಕೆ ಕರೆತರುತ್ತಿದ್ದರು. ಆದರೆ, ಸಂತೋಷ್ ಕುಟುಂಬ ಸದಸ್ಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಸಂತೋಷ್ ಅವರನ್ನು ಅಪಹರಿಸಲಾಗಿದೆ ಎಂದು ಹೇಳಿದ್ದರು. ಹೀಗಾಗಿ ಮುಂಬೈ ಪೊಲೀಸರು ನಾಕಾಬಂದಿ ಹಾಕಿ ಕಾರನ್ನು ತಡೆದಿದ್ದರು. ಅಪಹರಣಕಾರರೆಂದು ಭಾವಿಸಿ ನಗರ ಪೊಲೀಸರನ್ನು ಠಾಣೆಗೆ ಕರೆದೊಯ್ದಿದ್ದರು. ಬಳಿಕ ನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಮುಂಬೈ ಪೊಲೀಸರನ್ನು ಸಂಪರ್ಕಿಸಿ ರಾಜ್ಯದ ಪೊಲೀಸರು ಎಂದು ಖಚಿತಪಡಿಸಿದಾಗ ಆರೋಪಿ ಸಂತೋಷ್ ಸೇರಿದಂತೆ ಬಂಧನಕ್ಕೆ ತೆರಳಿದ್ದ ಪೊಲೀಸರನ್ನು ಬಿಟ್ಟು ಕಳುಹಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com