
ನವದೆಹಲಿ: ವಿಶ್ವ ಹೂಡಿಕೆದಾರರ ಪಾಲಿಗೆ ಈಗ ಮೋದಿ ರಾಕ್‌ಸ್ಟಾರ್!
ಹೌದು, ಹೀಗೆಂದು ಅಮೆರಿಕದ ಪರಿಷ್ಠಿತ ಪತ್ರಿಕೆಯಾದ ವಾಲ್‌ಸ್ಟ್ರೀಟ್ ಜರ್ನಲ್ ಹೇಳಿದೆ. ಒಂದು ಕಾಲದಲ್ಲಿ ಕಳೆಗುಂದಿದ್ದ ದೇಶದ ಅರ್ಥವ್ಯವಸ್ಥೆಯನ್ನು ಮೇಲೆತ್ತಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ವಿಶ್ವದ ಹೂಡಿಕೆದಾರರ ಪಾಲಿಗೆ ಹೊಸ ಭರವಸೆ ಆಗುತ್ತಿದ್ದಾರೆ. ವಿಶ್ವಾದ್ಯಂತ ಹೂಡಿಕೆದಾರರು ಮೋದಿ ಹಾಗೂ ಭಾರತಕ್ಕೆ ವಿಶೇಷ ಆದ್ಯತೆ ನೀಡುತ್ತಿದ್ದಾರೆ. ಇದೇ ಕಾರಣಕ್ಕೆ ಈ ವರ್ಷ ಭಾರತೀಯ ಷೇರುಮಾರುಕಟ್ಟೆಯಲ್ಲಿ ಹೂಡಿಕೆದಾರರು ರು.1,021 ಶತಕೋಟಿಯಷ್ಟು ಹೂಡಿಕೆ ಮಾಡಿದ್ದಾರೆ ಎಂದು ಪತ್ರಿಕೆ ಹೇಳಿದೆ.
ಭಾರತದ ಎಸ್‌ಆ್ಯಂಡ್‌ಪಿ ಬಿಎಸ್‌ಪಿ ಸೆನ್‌ಸೆಕ್ಸ್ ಈ ವರ್ಷ ಶೆ.35ರಷ್ಟು ಏರಿಕೆ ದಾಖಲಿಸಿದೆ. ಈ ವರ್ಷ 54 ಬಾರಿ ದಾಖಲೆಯ ಏರಿಕೆ ದಾಖಲಿದೆ. ದೇಶದ ಅರ್ಥ ವ್ಯವಸ್ಥೆಗೆ ಚುರುಕು ನೀಡಲು ಬ್ಯಾಂಕ್‌ಗಳಿಂದ ಸಿಮೆಂಟ್ ಕಂಪನಿಯವರೆಗೆ ಎಲ್ಲ ಕ್ಷೇತರ್‌ದ ಪ್ರಗತಿಗೆ ಮೋದಿ ಅಗತ್ಯ ನೀತಿಗಳನ್ನು ಪರಿಚಯಿಸುತ್ತಾರೆ ಎನ್ನುವ ನಂಬಿಕೆ ಹೂಡಿಕೆದಾರರಲ್ಲಿ ಬೆಳೆಯುತ್ತಿದೆ. ಹಾಗಾಗಿ ಭಾರತದ ಮೇಲೆ ಹೂಡಿಕೆದಾರರು ವಿಶ್ವಾಸ ಬೆಳೆಸಿಕೊಳ್ಳುತ್ತಿದ್ದಾರೆ. ಬ್ರಿಕ್ಸ್‌ನ ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಅರ್ಥ ವ್ಯವಸ್ಥೆಯ ಬೆಳವಣಿಗೆ ದರ ಉತ್ತಮವಾಗಿರಲಿದೆ. ಮುಂದಿನ ವರ್ಷ ಭಾರತದ ಬೆಳವಣಿಗೆ ದರ ಶೇ.5.6ರಿಂದ ಶೇ.6.4ಕ್ಕೆ ಜಿಗಿಯಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಭವಿಷ್ಯ ನುಡಿದಿದೆ. ಇನ್ನು ಹೂಡಿಕೆದಾರರಿಗೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸದ್ಯ ಭಾರತವೇ ಅತ್ಯುತ್ತಮ ಪ್ರತಿಫಲ ನೀಡುವ ದೇಶವಾಗಿದೆ ಎಂದು ಪತ್ರಿಕೆ ಅಭಿಪ್ರಾಯಪಟ್ಟಿದೆ.
Advertisement