ಅಲ್-ಖೈದಾ ಜಾಗತಿಕ ಕಾರ್ಯಾಚರಣೆಯ ಮುಖ್ಯಸ್ಥನ ಹತ್ಯೆ: ಪಾಕ್ ಸೇನೆ

ಅಲ್-ಖೈದಾ ಉಗ್ರ ಸಂಘಟನೆಯ ಜಾಗತಿಕ ಕಾರ್ಯಾಚರಣೆಯ...
ಅದ್ನಾನ್ ಶುಕ್ರಿಜುಮಾ (AP photo)
ಅದ್ನಾನ್ ಶುಕ್ರಿಜುಮಾ (AP photo)

ಇಸ್ಲಾಮಾಬಾದ್: ಅಲ್-ಖೈದಾ ಉಗ್ರ ಸಂಘಟನೆಯ ಜಾಗತಿಕ ಕಾರ್ಯಾಚರಣೆಯ ಮುಖ್ಯಸ್ಥನನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಸೇನೆ ಶನಿವಾರ ಹೇಳಿಕೊಂಡಿದೆ.

ಇಂದು ಬೆಳಗಿನ ಜಾವ ದಕ್ಷಿಣ ಪಾಕಿಸ್ತಾನದ  ವಝಿರಿಸ್ತಾನ್ ಬುಡಕಟ್ಟು ಪ್ರದೇಶದಲ್ಲಿ ಅಲ್-ಖೈದಾ ನಾಯಕ ಅದ್ನಾನ್ ಶುಕ್ರಿಜುಮಾ ಸೇರಿದಂತೆ ಇಬ್ಬರು ಶಂಕಿತ ಉಗ್ರರರನ್ನು ನಮ್ಮ ಸೈನಿಕರು ಹತ್ಯೆ ಮಾಡಿದ್ದಾರೆ ಎಂದು ಪಾಕ್ ಸೇನೆ ತಿಳಿಸಿದೆ.

ಹತ್ಯೆಯಾದ ಅಲ್-ಖೈದಾ ನಾಯಕ ಅಮೆರಿಕದ ನ್ಯೂಯಾರ್ಕ್‌ನ ಸಬ್‌ವೇನಲ್ಲಿ ಬಾಂಬ್ ಪಿಕ್ಸ್ ಮಾಡಿದ ಆರೋಪ ಎದುರಿಸುತ್ತಿದ್ದ ಎಂದು ಹೆಸರು ಹೇಳಲಿಚ್ಚಿಸದ ಪಾಕ್ ಸೇನೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಫ್‌ಬಿಐನ ಮೋಸ್ಟ್ ವಾಂಟೆಡ್ ಉಗ್ರರ ಪಟ್ಟಿಯಲ್ಲಿದ್ದ 39 ವರ್ಷದ ಶುಕ್ರಿಜುಮಾ, ಸೆ.11ರ ಮಾಸ್ಟರ್ ಮೈಂಡ್ ಖಲಿದ್ ಶೇಕ್ ಮೊಹ್ಮದ್ ನಂತರ ಉಗ್ರ ಸಂಘಟನೆಯ ಜಾಗತಿಕ ಕಾರ್ಯಾಚರಣೆಯ ನೇತೃತ್ವ ವಹಿಸಿಕೊಂಡಿದ್ದ. ಅಲ್ಲದೆ ಇತನ ತಲೆಗೆ ಅಮೆರಿಕ ಸರ್ಕಾರ 5 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿತ್ತು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com